ಮನುಷ್ಯರಲ್ಲಿ ಚಿಂತಿಸುವ, ತರ್ಕಿಸುವ ಶಕ್ತಿ ಬೆಳೆಯುವುದರ ಜತೆಗೆ ನಂಬಿಕೆ ಹಾಗೂ ಮೂಢ ನಂಬಿಕೆಗಳು ಹುಟ್ಟಿಕೊಂಡು ಬೆಳೆಯುತ್ತಾ ಸಾಗಿವೆ. ತನ್ನ ಅರಿವಿಗೆ ನಿಲುಕದನ್ನು ಪೂಜಿಸುವ ಮನುಷ್ಯನ ಸ್ವಭಾವ ಇಂದು ನಿನ್ನೆಯದ್ದಲ್ಲ. ಇದಕ್ಕೆ ಮಿಂಚು (lightning) ಕೂಡ ಹೊರತಾಗಿಲ್ಲ. ಅದು (ಮಿಂಚು) ಪ್ರಕೃತಿಯ ನಿಗೂಢ ಮತ್ತು ಶಕ್ತಿಯುತ ರೂಪವಾಗಿದ್ದು, ಅದು ದೇವರಿಂದಲೇ ಉಂಟಾಗುತ್ತದೆ ಎಂಬ ನಂಬಿಕೆ ಪ್ರಾಚೀನ ಕಾಲದ ಜನರದ್ದು.

ಆದಾಗ್ಯೂ, ಕೆಲವು ಪ್ರಾಚೀನ ಚಿಂತಕರು, ದೇವರುಗಳಿಗೂ ಇದಕ್ಕೂ(ಮಿಂಚು) ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಿಂಚು ಗಾಳಿ ಮತ್ತು ಮೋಡಗಳ ಚಲನೆಯೊಂದಿಗೇ ಸಂಬಂಧ ಹೊಂದಿರಬಹುದೆಂದು ಅವರು ತರ್ಕಿಸಿದ್ದಾರೆ.

ಶಕ್ತಿ ಮತ್ತು ಕೋಪದ ಸಂಕೇತ;

ಪ್ರಾಚೀನ ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿ ಗುಡುಗು ಮತ್ತು ಮಿಂಚು ದೇವತೆಗಳ ರಾಜನಾದ ಜಿಯಸ್ನ (ರೋಮನ್ನರಿಗೆ ಜುಪಿಟರ್) ಪ್ರಮುಖ ಆಯುಧವಾಗಿತ್ತು. ಮಿಂಚಿನ ಮೂಲಕ ಅವನು ತನ್ನ ಶಕ್ತಿ ಮತ್ತು ಕೋಪ ಪ್ರದರ್ಶಿಸುತ್ತಿದ್ದ ಎಂಬ ನಂಬಿಕೆಯಿದೆ.

ಜಿಯಸ್ ತನ್ನ ಶತ್ರುಗಳ ಮೇಲೆ ಗುಡುಗು ಮತ್ತು ಮಿಂಚು ಸುರಿಸುತ್ತಿದ್ದ ಎಂದು ಪ್ರಾಚೀನ ಗ್ರೀಕ್ ಕವಿ ಹೆಸಿಯಡ್ ತನ್ನ ಬರಹಗಳಲ್ಲಿ (ಕ್ರಿ.ಪೂ. ಸುಮಾರು 700) ವಿವರಿಸಿದ್ದಾರೆ. ಅಲ್ಲದೇ ತನ್ನನ್ನು ದೇವರೆಂದು ಪೂಜಿಸಬೇಕೆಂದು ಪ್ರಜೆಗಳನ್ನು ಬಲವಂತಪಡಿಸಿದ ಪೌರಾಣಿಕ ರಾಜ ಸ್ಯಾಲ್ಮೋನಿಯಸ್ ಸೇರಿದಂತೆ ಕೆಲವರನ್ನು ಜಿಯಸ್ ಶಿಕ್ಷಿಸಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

ಗ್ರೀಕ್ ಮತ್ತು ರೋಮನ್ ಮೂರ್ತಿಗಳಲ್ಲಿ, ಜಿಯಸ್ ತನ್ನ ಪ್ರಮುಖ ಶಕ್ತಿಯ ಆಯುಧ ‘ಮಿಂಚು‘ ಹಿಡಿದುಕೊಂಡಿರುವಂತೆ ಚಿತ್ರಿಸಲಾಗಿದೆ.

ರೋಮನ್ನರ ನಂಬಿಕೆ ಪ್ರಕಾರ, ಜುಪಿಟರ್ ಮತ್ತು ಇತರ ದೇವರುಗಳು ಮಿಂಚಾಗಿ ಅಪ್ಪಳಿಸುವ ಮೂಲಕ ಮಾನವರ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಇದು ದೇವರ ಅಸಮಾಧಾನದ ಸ್ಪಷ್ಟ ಸೂಚನೆ ಎಂದೇ ಪರಿಗಣಿಸಲಾಗುತ್ತಿತ್ತು.

ಕ್ರಿ.ಪೂ. 87ರಲ್ಲಿ ರೋಮ್ನ ಅತ್ಯಂತ ಶಕ್ತಿಶಾಲಿ ರಿಪಬ್ಲಿಕನ್ ಜನರಲ್ಗಳಲ್ಲಿ (ಸೇನಾ ನಾಯಕ) ಒಬ್ಬನಾದ ಪೊಂಪೇಯ್ ಮಿಂಚಿನಿಂದ ಮೃತಪಟ್ಟರು ಎನ್ನುವ ಒಂದು ಕಥೆ ಇದೆ. ಅವರು ಅಂತರ್ಯುದ್ಧದ ಮಧ್ಯದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದರು. ರೋಮನ್ ಬರಹಗಾರ ಪ್ಲೂಟಾರ್ಕ್ ಪ್ರಕಾರ, ಪೊಂಪೇಯ್ನ ರೋಮ್ನ ಅತ್ಯಂತ ಕೆಟ್ಟ ಸೇನಾನಾಯಕರಲ್ಲಿ ಒಬ್ಬನಾಗಿದ್ದನು. ಹಾಗಾಗಿ ಅವರ ಸಾವು ಆ ಕಾಲದ ಹಲವರಿಗೆ ದೇವರು ನೀಡಿದ ನ್ಯಾಯವೆಂದು ಪರಿಗಣಿಸಿದ್ದರು.

ಕ್ರಿ.ಶ. ಸುಮಾರು 125ರ ವೇಳೆಯಲ್ಲಿ, ಚಕ್ರವರ್ತಿ ಹ್ಯಾಡ್ರಿಯನ್ ಸೂರ್ಯೋದಯವನ್ನು ನೋಡುವ ಸಲುವಾಗಿ ಸಿರಿಯಾದ ಕಾಸಿಯಸ್ ಪರ್ವತವನ್ನು ಏರಿದ್ದರು. ಆ ಪರ್ವತ ಜಿಯಸ್/ಜುಪಿಟರ್ಗೆ ಪವಿತ್ರವಾಗಿತ್ತು. ಅವರು ಅಲ್ಲಿ ಯಜ್ಞ ಮಾಡುವಾಗ ಮಿಂಚು ಅಪ್ಪಳಿಸಿ ಬಲಿಕೊಡಲು ತಂದಿದ್ದ ಪ್ರಾಣಿ ಹಾಗೂ ಸೇವಕ ಮೃತಪಟ್ಟಿದ್ದ. ಆದರೆ ಹ್ಯಾಡ್ರಿಯನ್ ಮಾತ್ರ ಸಾವಿನಿಂದ ಪಾರಾಗಿದ್ದನು.

ಕ್ರಿ.ಶ. 283ರಲ್ಲಿ ರೋಮನ್ ಚಕ್ರವರ್ತಿ ಕ್ಯಾರಸ್ ಪರ್ಷಿಯನ್ನರ ವಿರುದ್ಧದ ಯುದ್ಧದ ವೇಳೆ ಮಿಂಚು –ಸಿಡಿಲು ಬಡಿದು ಮೃತಪಟ್ಟನು ಎಂದು ಹೇಳಲಾಗುತ್ತದೆ. ದೇವರು ಅನುಮತಿಸಿದ್ದಕ್ಕಿಂತ ಹೆಚ್ಚು ದಾಳಿ ನಡೆಸಿದ್ದರಿಂದ ಆತ ಕೊಲ್ಲಲ್ಪಟ್ಟನು ಎಂದು ಒಂದು ಪ್ರಾಚೀನ ವೃತ್ತಾಂತಗಳಲ್ಲಿ ಹೇಳಲಾಗಿದೆ.

ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಗ್ರೀಕ್ ಬರಹಗಾರ ಲಿಬೇನಿಯಸ್ ಅರಿಸ್ಟೋಫೆನಿಸ್ನ ನಾಟಕವನ್ನು ಓದುತ್ತಿರುವಾಗ ಮಿಂಚಿಗೆ ಗುರಿಯಾಗಿ ನಂತರ ಜೀವನಪೂರ್ತಿ ತೀವ್ರ ತಲೆನೋವು ಸೇರಿದಂತೆ ಅನೇಕ ತೊಂದರೆಗಳನ್ನು ಅನುಭವಿಸಿದ್ದಾನೆ.

ಸಂಕೀರ್ಣ ವಿಧಿವಿಧಾನಗಳು ಮತ್ತು ದೇವರ ವರ:

ಕೆಲವೊಮ್ಮೆ, ಯುದ್ಧದಲ್ಲಿ ಚಕ್ರವರ್ತಿಗೆ ಸಹಾಯ ಮಾಡಲು ದೇವರು ಮಿಂಚನ್ನು ಕಳುಹಿಸಿದ್ದಾರೆ ಎಂದು ನಂಬಲಾಗುತ್ತಿತ್ತು. ಕ್ರಿ.ಶ. 160ರಲ್ಲಿ ಮಾರ್ಕಸ್ ಔರೇಲಿಯಸ್ ಒಂದು ಜನಾಂಗದ ವಿರುದ್ಧ ಯುದ್ಧ ನಡೆಸುವಾಗ ಮಿಂಚು ಶತ್ರುಗಳನ್ನು ಚದರಿಸಿತು ಎನ್ನಲಾಗಿದೆ.

ರೋಮನ್ನರು ಮಿಂಚು ಬಿದ್ದ ಸ್ಥಳದ ಸುತ್ತ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ‘ಬಿಡೆಂಟಲ್’ ಎಂಬ ವಿಧಿಯಲ್ಲಿ, ಪುರೋಹಿತರು ಆ ಸ್ಥಳವನ್ನು ಶುದ್ಧೀಕರಿಸುತ್ತಿದ್ದರು. ಬಳಿಕ ಆ ಪ್ರದೇಶವನ್ನು ಮುಚ್ಚಿ, ಅಲ್ಲಿ ಯಾರೂ ಪ್ರವೇಶಿಸದಂತೆ ನಿಷೇಧ ವಿಧಿಸಲಾಗುತ್ತಿತ್ತು.

ಕ್ರೈಸ್ತ ಧರ್ಮವನ್ನು ಬೆಂಬಲಿಸಿದ್ದ ಚಕ್ರವರ್ತಿ ಕಾಂಸ್ಟಂಟೈನ್ ಕೂಡ ತನ್ನ ಆಡಳಿತದ ಆರಂಭದಲ್ಲಿಯೇ (ಕ್ರಿ.ಶ. 320) ಸಾರ್ವಜನಿಕ ಕಟ್ಟಡಗಳಿಗೆ ಮಿಂಚು ಬಿದ್ದಾಗ ಪರಂಪರೆಯ ಪೇಗನ್ ವಿಧಿಗಳನ್ನು ನೆರವೇರಿಸಲು ಆದೇಶಿಸಿದ್ದನು.

ಅದು ಜಿಯಸ್ ಅಲ್ಲ!

ಅನೇಕರು ಮಿಂಚನ್ನು ದೇವರ ಆಯುಧವೆಂದು ದೃಢವಾಗಿ ನಂಬಿದ್ದರು. ಆದಾಗ್ಯೂ ಇನ್ನೂ ಕೆಲವರು ಅದನ್ನು ಒಪ್ಪಿಕೊಂಡಿರಲಿಲ್ಲ. ಕ್ರಿ.ಪೂ. 5ನೇ ಶತಮಾನದಲ್ಲಿ (ಕ್ರಿ.ಪೂ. 448ರಿಂದ 380ರ ) ಅರಿಸ್ಟೋಫಾನಿಸ್ ರಚಿಸಿದ ‘ದಿ ಕ್ಲೌಡ್ಸ್’ ಎಂಬ ಪ್ರಾಚೀನ ಗ್ರೀಕ್ ನಾಟಕದಲ್ಲಿ, ತತ್ವಜ್ಞಾನಿ ಸಾಕ್ರಟೀಸ್ ಗುಡುಗು ಅದು ಜಿಯಸ್ ಅಲ್ಲ. ಅದು ಗಾಳಿಯ ಸುತ್ತು (it's a vortex of air.) ಎಂದು ಹೇಳುತ್ತಾರೆ.

ಕ್ರಿ.ಶ. ಮೊದಲ ಶತಮಾನದ ರೋಮನ್ ತತ್ವಜ್ಞಾನಿ ಸೇನೆಕಾ, ‘ಮೋಡಗಳು ಸಣ್ಣ ಘರ್ಷಣೆಯಿಂದ ಮಿಂಚು ಉಂಟಾಗುತ್ತದೆ. ಹೆಚ್ಚಿನ ಘರ್ಷಣೆಯಿಂದ ಗುಡುಗು ಉಂಟಾಗುತ್ತದೆ‘ ಎಂದು ಹೇಳಿದ್ದಾರೆ. ಇದರಲ್ಲಿ ದೇವರ ಪಾತ್ರವನ್ನು ಅವರು ಒಪ್ಪಿರಲಿಲ್ಲ.

ಇತರ ನಂಬಿಕೆಗಳು:

ಅನೇಕ ಪ್ರಾಚೀನ ಸಂಸ್ಕೃತಿಗಳಲ್ಲಿಯೂ ಮಿಂಚು ಮತ್ತು ಗುಡುಗು ಧಾರ್ಮಿಕ ಮಹತ್ವ ಹೊಂದಿದೆ ಎಂದು ನಂಬಲಾಗುತ್ತಿತ್ತು.

ಪ್ರಾಚೀನ ಪರ್ಷಿಯಾದ ಪ್ರಮುಖ ಧರ್ಮ ಜರೋಸ್ತ್ರೀಯದಲ್ಲಿ, ಮಿಂಚು 16 ವಿಧದ ಅಗ್ನಿಗಳಲ್ಲಿ ಅತ್ಯಂತ ವೇಗವಾದ ಅಗ್ನಿ ಎಂದೇ ಪರಿಗಣಿಸಲಾಗುತ್ತಿತ್ತು. ಅಗ್ನಿ, ಜರೋಸ್ತ್ರೀಯ ಧರ್ಮದ ಪರಮ ದೇವರಾದ ಅಹುರ ಮಜ್ದನ ಆರಾಧನೆಯಲ್ಲಿ ಕೇಂದ್ರಸ್ಥಾನದಲ್ಲಿತ್ತು.

ಆಸ್ಟ್ರೇಲಿಯಾದ ಉತ್ತರ ಭಾಗದ ಆರ್ನೆಮ್ ಲ್ಯಾಂಡ್ನ ಕುನ್ವಿಂಜ್ಕು ಜನಾಂಗದವರಲ್ಲಿ, ‘ನಾಮರ್ರ್ಕೋನ್’ ಎಂಬಾತ ಮಿಂಚು ಮತ್ತು ಗುಡುಗಿನ ಪ್ರತಿರೂಪವಾಗಿದ್ದನು. ಅವನು ಕಲ್ಲಿನ ಕೊಡಲಿಗಳನ್ನು ಬಳಸಿ ಮೋಡಗಳನ್ನು ಸೀಳಿ, ಮಿಂಚನ್ನು ಆಯುಧವಾಗಿ ಬಳಸುತ್ತಿದ್ದನು ಎಂಬ ನಂಬಿಕೆಯಿದೆ.

ಹಿಂದೂ ಧರ್ಮದ ನಂಬಿಕೆಯ ಪ್ರಕಾರ:

ಹಿಂದೂ ಪೌರಾಣಿಕ ನಂಬಿಕೆಗಳ ಪ್ರಕಾರ, 'ಇಂದ್ರ' ಗುಡುಗು, ಮಿಂಚು ಮತ್ತು ಮಳೆಯ ಅಧಿದೇವತೆ ಎಂದೇ ಪರಿಗಣಿಸಲಾಗಿದೆ. ಅವನು ತನ್ನ ಶಸ್ತ್ರವಾದ ‘ವಜ್ರಾಯುಧ’ದಿಂದ ಮಿಂಚನ್ನು ಸೃಷ್ಟಿಸಿದ್ದ ಎಂಬ ನಂಬಿಕೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.