ಒಂದು ಸಾಲಿನಲ್ಲಿ
2026ರ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ನೋಂದಣಿ ಪ್ರಕ್ರಿಯೆ, ಹೊಸ ಸುರಕ್ಷತಾ ನಿಯಮಗಳು ಮತ್ತು ಪ್ರಯಾಣದ ಮಾರ್ಗಸೂಚಿಗಳ ಬಗ್ಗೆ ಈ ಲೇಖನ ಸಮಗ್ರ ಮಾಹಿತಿ ನೀಡುತ್ತದೆ.

ಹಿಮಾಲಯ ಶ್ರೇಣಿಯಲ್ಲಿನ ಪ್ರಮುಖ ದೇವಾಲಯಗಳ ‘ಚಾರ್ ಧಾಮ್’ ಯಾತ್ರೆ ಇಂದಿನಿಂದ (ಏಪ್ರಿಲ್ 22) ಆರಂಭವಾಗಿದೆ. ಮಂತ್ರಘೋಷಗಳ ನಡುವೆ ಉತ್ತರಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ಮತ್ತು ಯಮನೋತ್ರಿ ದೇವಾಲಯಗಳ ಬಾಗಿಲು ತೆರೆಯಲಾಗಿದ್ದು, 'ಚಾರ್ ಧಾಮ್ ಯಾತ್ರೆ 2026'ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.