ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಪ್ರಾತಿನಿಧ್ಯವನ್ನು ಕಲ್ಪಿಸಲು ಕ್ಷೇತ್ರ ಪುನರ್ ವಿಂಗಡಣೆಗಾಗಿ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026’ ಜಾರಿಯಾಗುತ್ತಿದೆ.

ಮತಕ್ಷೇತ್ರ ಪುನರ್ವಿಂಗಡಣೆ ಎಂದರೇನು?

ಮತಕ್ಷೇತ್ರ ಪುನರ್ವಿಂಗಡನೆ ಎಂದರೆ ಜನಗಣತಿ ಆಧಾರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸುವ ಪ್ರಕ್ರಿಯೆಯಾಗಿದೆ. ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಜನಸಂಖ್ಯೆಯ ಸಮಾನತೆ ಸಾಧಿಸುವ ಮೂಲಕ ಸಮಾನ ಪ್ರತಿನಿಧಿತ್ವ ಒದಗಿಸಿವುದು ಇದರ ಹಿಂದಿನ ಉದ್ದೇಶ.

ಭಾರತ ಸಂವಿಧಾನದ 82 ಮತ್ತು 170ನೇ ವಿಧಿ ಪ್ರಕಾರ, ಪ್ರತಿ ಜನಗಣತಿಯ ನಂತರ ಈ ಪ್ರಕ್ರಿಯೆ ನಡೆಯಬೇಕು. ಆದರೆ 2001ರಿಂದ ಇದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಕುಟುಂಬ ನಿಯಂತ್ರಣ ನೀತಿಗೆ ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೆನ್ನಲಾಗಿದೆ.

ಕ್ಷೇತ್ರ ಪುನರ್ವಿಂಗಡಣೆ ಯಾವಾಗೆಲ್ಲಾ ನಡೆದಿತ್ತು?

ಸ್ವಾತಂತ್ರ್ಯಾ ನಂತರ 1951ರಲ್ಲಿ ನಡೆದ ಮೊದಲ ಜನಗಣತಿಯ ನಂತರ 1952ರಲ್ಲಿ ಮೊದಲ ಬಾರಿ ಕ್ಷೇತ್ರಗಳ ಪುನರ್ ವಿಂಗಡಣೆಯಾಗಿತ್ತು. ಆಗ ಇದ್ದ 489 ಲೋಕಸಭಾ ಕ್ಷೇತ್ರಗಳನ್ನು 494ಕ್ಕೆ ಏರಿಸಲಾಗಿತ್ತು..

ಇದು ಸೇರಿ ಈವರೆಗೆ ದೇಶದಲ್ಲಿ ನಾಲ್ಕು ಬಾರಿ ಕ್ಷೇತ್ರಗಳ ಪುನರ್ವಿಂಗಡಣೆಯಾಗಿದೆ.

1961ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಕಾಯ್ದೆ 1962ರ ಅಡಿ 1963ರಲ್ಲಿ ಆಗಿನ ಜನಸಂಖ್ಯೆ ಹೆಚ್ಚಳವನ್ನು ಪರಿಗಣಿಸಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 522ಕ್ಕೆ ಏರಿಕೆ ಮಾಡಲಾಗಿತ್ತು.

1971ರ ಜನಗಣತಿ ಆಧರಿಸಿ 1973ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿತ್ತು. ಆಗ ಲೋಕಸಭೆಗೆ 543 ಸ್ಥಾನ ನಿಗದಿ ಮಾಡಲಾಗಿತ್ತು.

ಅದಾದ ಬಳಿಕ 2001ರ ಜನಗಣತಿ ಆಧರಿಸಿ 2002ರಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಲಾಗಿತ್ತಾದರೂ ಆಗ ಕ್ಷೇತ್ರಗಳ ಗಡಿಗಳನ್ನು ಮಾತ್ರ ಬದಲಾಯಿಸಲಾಯಿತು. ಹೀಗಾಗಿ ಸ್ಥಾನ 543ರಷ್ಟೇ ಇತ್ತು.

2020ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಕ್ಷೇತ್ರ ಪುನರ್ವಿಂಗಡಣೆ

2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ, ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್’ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು.

2020ರ ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ನೀಡಿದ ವರದಿಯನ್ನು ಆಧರಿಸಿ, 2011ರ ಜನಗಣತಿಯ ಆಧಾರದಲ್ಲಿ ಜಮ್ಮುವಿಗೆ 6 ಸ್ಥಾನ ಹಾಗೂ ಕಾಶ್ಮೀರಕ್ಕೆ ಒಂದು ಸ್ಥಾನ ಹೆಚ್ಚಿಸಲಾಗಿತ್ತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಒಟ್ಟು ಸ್ಥಾನಗಳನ್ನು 83 ರಿಂದ 90 ಕ್ಕೆ ಏರಿಕೆಯಾಯಿತು.

ಕ್ಷೇತ್ರ ಪುನರ್ವಿಂಗಡಣೆ ಏಕೆ ಅಗತ್ಯ?

ದೇಶದ ಎಲ್ಲಾ ಭಾಗಗಳಲ್ಲಿ ಜನಸಂಖ್ಯೆ ಬೆಳವಣಿಗೆ ಏಕರೂಪವಾಗಿರುವುದಿಲ್ಲ. ಕೆಲವು ರಾಜ್ಯಗಳಲ್ಲಿ ವೇಗವಾಗಿ ಹೆಚ್ಚಾದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ನಿಯಂತ್ರಿತ ಬೆಳವಣಿಗೆ ಕಂಡುಬರುತ್ತದೆ. ಇದನ್ನು ಉದಾಹರಣೆ ರೂಪದಲ್ಲಿ ವಿವರಿಸುವುದಾದರೆ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರದ ಕೆಲ ರಾಜ್ಯಗಳು ಹೆಚ್ಚಿನ ಜನಸಂಖ್ಯೆ ಹೊಂದಿವೆ. ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಕಡಿಮೆ ಜನಸಂಖ್ಯೆ ದಾಖಲಿಸಿವೆ. ಹೀಗಾಗಿ ಕೆಲವು ಕ್ಷೇತ್ರಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದರೆ, ಕೆಲವೆಡೆ 10 ಲಕ್ಷಕ್ಕಿಂತ ಕಡಿಮೆ ಮತದಾರರು ಮಾತ್ರ ಇರುತ್ತಾರೆ. ಇಂತಹ ಅಸಮಾನತೆ ಪ್ರಜಾಪ್ರಭುತ್ವದ ಸಮತೋಲನವನ್ನು ಹಾಳುಮಾಡುತ್ತದೆ. ಆದ್ದರಿಂದ ಪುನರ್ ವಿಂಗಡಣೆ ಅಗತ್ಯ.

ಪುನರ್ವಿಂಗಡಣೆ ನಂತರ ಕ್ಷೇತ್ರಗಳ ಸಂಖ್ಯೆ ಎಷ್ಟಾಗಲಿದೆ?

ಮಾದರಿ–1: ಜನಸಂಖ್ಯೆ ಆಧರಿಸಿದ ಕ್ಷೇತ್ರ ಮರುವಿಂಗಡನೆ

ಈ ಮಾದರಿಯಲ್ಲಿ ಕ್ಷೇತ್ರಗಳ ಪುನರ್ವಿಂಗಡನೆಗೆ ಜನಸಂಖ್ಯೆಯೇ ಮಾನದಂಡ.

ಮಾದರಿ 2: ಅನುಪಾತದ ಹೆಚ್ಚಳ (ರಾಜಕೀಯ ವಲಯದ ಪ್ರಸ್ತಾವ)

ಇದರಲ್ಲಿ ಪ್ರಸ್ತುತ ಸಂಖ್ಯೆಯನ್ನು ಹಾಗೆಯೇ ಇಟ್ಟುಕೊಂಡು, ಎಲ್ಲಾ ರಾಜ್ಯಗಳ ಕ್ಷೇತ್ರಗಳನ್ನು ಸಮಾನ ರೂಪದಲ್ಲಿ ಹೆಚ್ಚಿಸುವುದಾಗಿದೆ.

ಮಾದರಿ 3: ಹಿಂದಿನ ಅಧ್ಯಯನ ಆಧಾರಿತ (ಕಾರ್ನೇಗಿ ಅಧ್ಯಯನ ವಿಧಾನ). ಅತಿ ಹೆಚ್ಚು ಬಳಕೆಯಲ್ಲಿರುವ ಮಾದರಿ ಇದು

ಪುನರ್ ವಿಂಗಡಣೆಯ ಮಹತ್ವವೇನು?

ಕ್ಷೇತ್ರ ಪುನರ್ವಿಂಗಡಣೆಯು ಪ್ರಜಾಪ್ರಭುತ್ವದ ಗುಣಮಟ್ಟವನ್ನು ಕಾಪಾಡಲು ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸ್ಥಾನಗಳ ಸಮಾನ ಹಂಚಿಕೆಯಾಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿತ್ವ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲು ಸ್ಥಾನಗಳು ನಿರ್ಧಾರವಾಗಲಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲು ಸ್ಥಾನಗಳ ನಿರ್ಧಾರವಾಗಲಿದೆ. ಹೊಸ ಮತದಾರರನ್ನು ಒಳಗೊಂಡಂತೆ ಮತಪಟ್ಟಿ ನವೀಕರಣವಾಗಲಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಲಿದೆ. ಕ್ಷೇತ್ರ ಪುನರ್ವಿಂಗಡಣೆಗೆ ಸಂವಿಧಾನ ಅವಕಾಶ ನೀಡಿರುವುದು ಒಟ್ಟಾರೆಯಾಗಿ ಜನರ ಧ್ವನಿಗೆ ಸಮಾನ ಮೌಲ್ಯ ನೀಡುವ ಮತ್ತು ವ್ಯವಸ್ಥೆಯಲ್ಲಿ ಬಲಪಡಿಸುವ ಪ್ರಕ್ರಿಯೆಯಾಗಿದೆ.

ಈ ಪ್ರಕ್ರಿಯೆ ನಡೆಯುವುದು ಹೇಗೆ?

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಒಂದು ಸ್ವತಂತ್ರ ಆಯೋಗದ ಮೂಲಕ ನಡೆಯುತ್ತದೆ. ಮೊದಲಿಗೆ ಕ್ಷೇತ್ರ ಪುನರ್ವಿಂಗಡಣೆಯ ನಿರ್ಣಯವನ್ನು ಸಂಸತ್ತು ಅಂಗೀಕರಿಸುತ್ತದೆ. ರಾಷ್ಟ್ರಪತಿಯವರು ಕ್ಷೇತ್ರ ಪುನರ್ವಿಂಗಡಣೆಯ ಆಯೋಗವನ್ನು ನೇಮಿಸುತ್ತಾರೆ. ಈ ಆಯೋಗದಲ್ಲಿ ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇರುತ್ತಾರೆ. ಮುಖ್ಯ ಚುನಾವಣಾ ಆಯುಕ್ತ, ರಾಜ್ಯ ಚುನಾವಣಾ ಆಯುಕ್ತರು ಇರುತ್ತಾರೆ.

ಆಯೋಗವು ಪ್ರಾಥಮಿಕ ಕರಡು ಪ್ರಕಟಣೆ ಮಾಡುತ್ತದೆ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಸಭೆಗಳು ನಡೆಸುತ್ತದೆ ಅಗತ್ಯವಿದ್ದರೆ ತಿದ್ದುಪಡಿ ಮಾಡುತ್ತದೆ. ಅಂತಿಮ ಆದೇಶ ಹೊರಡಿಸುತ್ತದೆ. ಈ ಆದೇಶಗಳಿಗೆ ಕಾನೂನು ಬಲ ಇರುವುದರಿಂದ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇರುವುದಿಲ್ಲ.

ಲೋಕಸಭೆಯಲ್ಲಿ ಎನ್ಡಿಎ 293 ಸಂಸದರನ್ನು ಹೊಂದಿದೆ. ಇಂಡಿಯಾ ಮೈತ್ರಿಕೂಟದ 234 ಸಂಸದರು ಇದ್ದಾರೆ. ಇತರರು 13 ಸಂಸದರು ಇದ್ದಾರೆ.

ಎಲ್ಲ 540 ಸಂಸದರು (ಮೂರು ಖಾಲಿ ಹುದ್ದೆಗಳು) ಹಾಜರಿದ್ದರೆ, ಮಸೂದೆ ಅಂಗೀಕರಿಸಲು ಸರ್ಕಾರಕ್ಕೆ 360 ಮತಗಳು ಬೇಕಾಗುತ್ತವೆ.

ಏಪ್ರಿಲ್ 16, 17ರಂದು ಲೋಕಸಭೆಯಲ್ಲಿ ಮತ್ತು ಏಪ್ರಿಲ್ 18 ರಂದು ರಾಜ್ಯಸಭೆಯಲ್ಲಿ ಮಸೂದೆ ಬಗ್ಗೆ ಚರ್ಚಿಸಲಾಗುತ್ತದೆ.

ಸ್ಥಾನ ಹಂಚಿಕೆಯ ವಿಧಾನ ಏನು?

ಸಂವಿಧಾನದ 81(2)(ಎ) ವಿಧಿಯಡಿ ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಸ್ಥಾನಗಳು ಹಂಚಿಕೆ ಆಗಬೇಕು. 81(2)(ಬಿ) ಪ್ರಕಾರ, ರಾಜ್ಯದ ಒಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಜನಸಂಖ್ಯೆ ಇರಬೇಕು. ಆದರೆ ಇದು ಕಟ್ಟುನಿಟ್ಟಾದ ಗಣಿತ ಸೂತ್ರವಲ್ಲ. ಹೀಗಿದ್ದರೂ ಆಯೋಗವು ಕೆಲ ಅಂಶಗಳನ್ನು ಪರಿಗಣಿಸುತ್ತದೆ.

ಭೌಗೋಳಿಕ ಪರಿಸ್ಥಿತಿ, ಆಡಳಿತಾತ್ಮಕ ಗಡಿ, ಕ್ಷೇತ್ರದ ಸಾಂಧ್ರತೆ ಮತ್ತು ಸೌಕರ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆ ಪ್ರಮಾಣವನ್ನು ಪರಿಗಣಿಸಲಾಗುತ್ತದೆ.

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಈ ಕುರಿತು ದೇಶದಲ್ಲಿ ಚರ್ಚೆಗಳು ಜೋರಾಗಿವೆ. ಮಹಿಳಾ ಮೀಸಲಾತಿ ಜತೆಗೆ ಕ್ಷೇತ್ರ ಮರುವಿಂಗಡನೆ ಜಾರಿಗಾಗಿ ವಿಶೇಷ ಅಧಿವೇಶನವನ್ನು ಕೇಂದ್ರ ಸರ್ಕಾರ ಕರೆದಿದೆ. ಈ ಎರಡನ್ನೂ ಜೋಡಿಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಇದರೊಂದಿಗೆ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚು ಸ್ಥಾನ ಸಿಗಬಹುದು ಮತ್ತು ತಮ್ಮ ರಾಜ್ಯಗಳ ಧ್ವನಿ ಸಂಸತ್ತಿನಲ್ಲಿ ಕ್ಷೀಣಿಸಬಹುದು ಎಂದು ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.

ದೇಶದ ಬೆಳವಣಿಗೆಗಾಗಿ ಕುಟುಂಬ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಅನ್ಯಾಯವಾಗಬಹುದು. ಹೀಗಿದ್ದರೆ ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಹೇಗೆ ಕಾಪಾಡುವುದು ಎಂಬ ಪ್ರಶ್ನೆಗಳನ್ನೂ ಮುಂದಿಟ್ಟಿವೆ.
.ಮಹಿಳಾ ಮೀಸಲಿಗೆ ಮುಂದಡಿ: ಕ್ಷೇತ್ರ ಪುನರ್ವಿಂಗಡಣೆ ಜೋಡಣೆಗೆ ವಿಪಕ್ಷಗಳ ಆಕ್ಷೇಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.