ಕನ್ನಡ ನಾಡಿನ ಮಣ್ಣಿನ ಮಗ ಎಚ್.ಡಿ. ದೇವೇಗೌಡ ಅವರು ದೇಶದ 12ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಜೂನ್ 1ಕ್ಕೆ 30 ವರ್ಷಗಳು ಸಂದಿವೆ.

ದೇವೇಗೌಡರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಹೇಗಿತ್ತು, ಅವರೊಂದಿಗೆ ಎಷ್ಟು ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು, ಯಾವೆಲ್ಲ ಖಾತೆಗಳನ್ನು ಉಳಿಸಿಕೊಂಡರು ಎನ್ನುವ ಬಗ್ಗೆ ‘ಪ್ರಜಾವಾಣಿ ಪತ್ರಿಕೆ’ 1996ರ ಜೂನ್ 2 ರಂದು ಪ್ರಕಟಿಸಿದ್ದ ವರದಿ ಇಲ್ಲಿದೆ...

ಕನ್ನಡ ನಾಡಿನ ಮಣ್ಣಿನ ಮಗ ಹರದನ ಹಳ್ಳಿ, ದೊಡ್ಡಗೌಡ ದೇವೇಗೌಡ ಅವರು ಹನ್ನೆರಡನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡಿಗರೊಬ್ಬರು ದೇಶದ ಸೂತ್ರಧಾರರಾದರು.

ಅವರ ಜತೆಗೆ ಹನ್ನೆರಡು ಮಂದಿ ಸಂಪುಟ ದರ್ಜೆಯ ಸಚಿವರಾಗಿ ಮತ್ತು ಎಂಟು ಮಂದಿ ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು.

ರಾಷ್ಟ್ರಪತಿ ಭವನದ ಆಶೋಕ ಪಾಲ್ ನಲ್ಲಿ ಮಧ್ಯಾಹ್ನ 12-30ಕ್ಕೆ ಸಂಯುಕ್ತ ರಂಗದ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ ಅವರು ಪ್ರಮಾಣ ವಚನ ಬೋಧಿಸಿದರು.

ಆಂಗ್ಲ ಅಕ್ಷರ ಮಾಲೆಯ ಪ್ರಕಾರ ಪಂಜಾಬಿನ ಬಲವಂತ್ ಸಿಂಗ್ ರಾಮುವಾಲಿಯಾ, ಕರ್ನಾಟಕದ, ಸಿ.ಎಂ. ಇಬ್ರಾಹಿಂ, ಬಿಹಾರದ ದೇವೇಂದ್ರ ಪ್ರಸಾದ್ ಯಾದವ್, ಐ.ಕೆ. ಗುಜ್ರಾಲ್ (ಜನತಾದಳ), ತಮಿಳುನಾಡಿನ ಎಂ. ಅರುಣಾಚಲಂ (ಟಿಎಂಸಿ), ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ (ಸಮಾಜವಾದಿ ಪಕ್ಷ), ಪಿ. ಚಿದಂಬರಂ, (ಟಿಎಂಸಿ), ಬಿಹಾರದ ರಾಂ ವಿಲಾಸ್ ಪಾಸ್ವಾನ್, ಕರ್ನಾಟಕದವರಾದರೂ ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಜನತಾದಳ), ತಮಿಳುನಾಡಿ ಟಿ.ಜಿ. ವೆಂಕಟರಾಮನ್ (ಡಿಎಂಕೆ) ಮತ್ತು ಆಂಧ್ರಪ್ರದೇಶದ ಕೆ.ಯರ್ರಂ ನಾಯ್ಡು (ಟಿಡಿಪಿ). ಇವರೆಲ್ಲ ಸಂಪುಟ ದರ್ಜೆಯ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯ ಮಂತ್ರಿಗಳು: ಉತ್ರರ ಪ್ರದೇಶದ ಬೇನಿ ಪ್ರಸಾದ್ ವರ್ಮಾ (ಎಸ್.ಪಿ), ಚಂದ್ರ ದೇವ್ ಪ್ರಸಾದ್ ವರ್ಮಾ (ಜನತಾದಳ), ಬಿಹಾರದ ಕ್ಯಾಪ್ಟನ್ ಜೈ ನಾರಾಯಣ್ ಪ್ರಸಾದ್ ನಿಶಾದ್, ಶ್ರೀಮತಿ ಕಾಂತಿ ಸಿಂಗ್, ಮಹಮ್ದ್ ತಸ್ಲೀಮ್ ಉದ್ದೀನ್ (ಜನತಾದಳ), ಆಂಧ್ರದ ಎಸ್. ವೇಣುಗೋಪಾಲಚಾರಿ (ಟಿಡಿಪಿ), ಉತ್ತರ ಪ್ರದೇಶದ ಸಲೀಂ ಇಕ್ಬಾಲ್ ಶೇರ್ವಾನಿ (ಎಸ್ಪಿ) ಮತ್ತು ಆಂಧ್ರದ ಡಾ.ಉಮಾರೆಡ್ಡಿ ವೆಂಕಟೇಶ್ವರಲು (ಟಿಡಿಪಿ)

ಉತ್ತರ ಭಾರತದ ಮಂದಿಯೆಲ್ಲ ಹಿಂದಿಯಲ್ಲಿ ಮತ್ತು ದಕ್ಷಿಣ ಭಾರತದ ರಾಜ್ಯಗಳವರೆಲ್ಲ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಗಣ್ಯರ ಹಾಜರಿ: ಈ ನೂತನ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ಕೆ.ಆರ್.ನಾರಾಯಣನ್, ದೇವೇಗೌಡರು ಪ್ರಮಾಣವಚನ ಸ್ವೀಕಾರ ಮಾಡುವವರೆಗೆ ಉಸ್ತುವಾರಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಲೋಕಸಭೆಯ ಸ್ಪೀಕರ್ ಪೆ.ಎ. ಸಂಗ್ಮಾ, ರಾಜ್ಯಸಭೆಯ ಉಪಾಧ್ಯಕ್ಷೆ ನಜ್ಮಾ, ಮಾಜಿ ಪ್ರಧಾನ ಮಂತ್ರಿಗಳಾದ ಪಿ.ವಿ ನರಸಿಂಹರಾವ್, ವಿಶ್ವನಾಥ ಪ್ರತಾಪ್ ಸಿಂಗ್ ಮತ್ತು ಚಂದ್ರಶೇಖರ ಅವರು ಮೊದಲ ಸಾಲಿನಲ್ಲಿ ಆಸೀನರಾಗಿದ್ದರು.

13 ದಿನಗಳ ವಾಜಪೇಯಿ ಅವರ ಸಂಪುಟದ ಸದಸ್ಯರಾಗಿದ್ದ ಡಾ.ಮುರಳೀ ಮನೋಹರ ಜೋಷಿ, ಜಸ್ವಂತ್ ಸಿಂಗ್, ಸುಷ್ಮಾ ಸ್ವರಾಜ್ ಅವರೂ ಆಗಮಿಸಿದ್ದರು.

ಮಹತ್ವದ ಖಾತೆ ಉಳಿಸಿಕೊಂಡಿದ್ದ ಗೌಡರು

ಎಚ್.ಡಿ. ದೇವೇಗೌಡ ಅವರು ಸಂಪುಟದ ಖಾತೆಗಳನ್ನು ಹಂಚಿಕೆ ಮಾಡುವ ವೇಳೆ ಮಹತ್ವದ ಗೃಹ ಖಾತೆ, ಕೃಷಿ, ಸಿಬ್ಬಂದಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಅಣುಶಕ್ತಿ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು.

ಮುಲಾಯಂ ಸಿಂಗ್ ಯಾದವ್ ಅವರಿಗೆ ರಕ್ಷಣಾ ಖಾತೆ, ಪಿ. ಚಿದಂಬರಂ ಅವರಿಗೆ ಹಣಕಾಸು ಖಾತೆ ಹಾಗೂ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರ ಖಾತೆ ವಹಿಸಿದ್ದರು.

ರಾಮ ವಿಲಾಸ ಪಾಸ್ವಾನ್ ಅವರಿಗೆ ರೈಲ್ವೇ ಮತ್ತು ಸಂಸದೀಯ ವ್ಯವಹಾರ ಖಾತೆ ನೀಡಿದ್ದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ, ಕಲ್ಲಿದ್ದಲು ಖಾತೆ ಜವಾಬ್ದಾರಿ ನೀಡಿದ್ದರು. ಸಿ.ಎಂ. ಇಬ್ರಾಹಿಂ ಅವರಿಗೆ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ವಾರ್ತಾ ಮತ್ತು ಪ್ರಸಾರ ಖಾತೆ ವಹಿಸಲಾಗಿತ್ತು.

ಎಂ.ಇಂದ್ರಕುಮಾರ್ ಗುಜ್ರಾಲ್ ಅವರಿಗೆ ವಿದೇಶಾಂಗ ವ್ಯವಹಾರ ಖಾತೆಯ ಜೊತೆಗೆ ಜಲ ಸಂಪನ್ಮೂಲ ಖಾತೆಯ ಹೊಣೆ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.