ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್ಗೆ ₹3ರಷ್ಟು ಹೆಚ್ಚಿಸಿವೆ. ಬೆಲೆ ಏರಿಕೆಯು ಮೇಲ್ನೋಟಕ್ಕೆ ಸಾಧಾರಣ ಎಂಬಂತೆ ಕಾಣಬಹುದು. ಆದರೆ ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಇದು ದೊಡ್ಡ ಹೊರೆ. ಕೆಲವೇ ವಾರಗಳಲ್ಲಿ ಇದರ ಬಿಸಿ ಅಡುಗೆಮನೆ, ಶಾಲಾ ಶುಲ್ಕ ದಿನಸಿ ವೆಚ್ಚಕ್ಕೂ ತಟ್ಟಲಿದೆ. ಟಿಕೆಟ್ ದರವನ್ನು ಶೇ 30ರಷ್ಟು ಏರಿಕೆ ಮಾಡುವುದಾಗಿ ಖಾಸಗಿ ಬಸ್ ಮಾಲಕರು ಹೇಳಿದ್ದಾರೆ.

ಸದ್ದಿಲ್ಲದೇ ಆರ್ಥಿಕ ಸಂಕಷ್ಟ:

ಇಂಧನ ಬೆಲೆಗಳು ಏರಿಕೆಯಾದಾಗ, ಅದರ ಪರಿಣಾಮ ಕೇವಲ ಪೆಟ್ರೋಲ್ ಬಂಕ್ಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಇಡೀ ದೇಶದ ಆರ್ಥಿಕತೆಗೆ ಹರಡುತ್ತದೆ. ಸಾರಿಗೆ ವೆಚ್ಚ, ತರಕಾರಿ ಮಾರುಕಟ್ಟೆಗಳು, ದಿನಸಿ ಅಂಗಡಿ, ಕೊನೆಗೆ ಜನಸಾಮಾನ್ಯರ ಮಾಸಿಕ ಬಜೆಟ್ಟ್ಗೂ ಸದ್ದಿಲ್ಲದೇ ಪ್ರವೇಶಿಸುತ್ತದೆ. ಇಂದು ಪ್ರಯಾಣಕ್ಕಾಗಿ ತಿಂಗಳಿಗೆ ₹2,000 ಖರ್ಚು ಮಾಡುವ ಕುಟುಂಬವು ಮುಂದಿನ ತಿಂಗಳು ₹2,500 ಖರ್ಚು ಮಾಡಬೇಕಾಗಬಹುದು. ಇದು ಕೇವಲ ಆರಂಭವಷ್ಟೆ.

ಹಾಲು, ತರಕಾರಿ ಮತ್ತು ಧಾನ್ಯಗಳ ಸಾಗಣೆ ವೆಚ್ಚಗಳು ಹೆಚ್ಚಾಗುತ್ತವೆ. ಸಗಟು ವ್ಯಾಪಾರಿಗಳು ಈ ವೆಚ್ಚವನ್ನು ಚಿಲ್ಲರೆ ವ್ಯಾಪಾರಿಗಳ ಮೇಲೆ ಹಾಕುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಅದನ್ನು ಗ್ರಾಹಕರ ಹಾಕುತ್ತಾರೆ. ಇಂಧನ ಬೆಲೆ ಏರಿಕೆಯ ಬಿಸಿ ಅಡುಗೆಮನೆ ಮುಟ್ಟುವಷ್ಟರಲ್ಲಿ, ಅದು ಕೇವಲ ₹3 ಆಗಿ ಉಳಿದಿರುವುದಿಲ್ಲ. ದಿನಬಳಕೆಯ ವಸ್ತುಗಳ ಮೇಲೆ ಹತ್ತಾರು ರೂಪಾಯಿ ಹೆಚ್ಚಾಗಿರುತ್ತದೆ.

ಕಡಿಮೆ ಆದಾಯದ ಕುಟುಂಬಗಳಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ಇದು ತೀವ್ರ ಸಂಕಷ್ಟ ತಂದೊಡ್ಡಲಿದೆ. ಈಗಾಗಲೇ ತಮ್ಮ ಸಂಬಳದ ಶೇ 60-70 ರಷ್ಟನ್ನು ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡುತ್ತಿರುವ ಕುಟುಂಬಕ್ಕೆ ಈ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ತಿಂಗಳ ಖರ್ಚಿನಲ್ಲಿ ₹200-300 ಹೆಚ್ಚಾದರೂ ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳಬಹುದು.

ಶಾಲಾ ಶುಲ್ಕ, ಆಟೋ ಬಾಡಿಗೆ ಮತ್ತು ಬದುಕು

ಖಾಸಗಿ ಶಾಲೆಗಳ ಸಾರಿಗೆ ವೆಚ್ಚ ಹಾಗೂ ಆಟೋ ಬಾಡಿಗೆಗಳು ಹೆಚ್ಚಾಗುತ್ತವೆ. ಡೆಲಿವರಿ ಬಾಯ್ಸ್ಗಳ ಸಂಬಳ ಹೆಚ್ಚಾಗದಿದ್ದರೆ ಅವರಿಗೆ ನಷ್ಟ. ಒಂದು ವೇಳೆ ಸಂಬಳ ಹೆಚ್ಚಿಸಿದರೆ ಅದರ ಹೊರೆಯನ್ನೂ ಗ್ರಾಹಕರು ಹೊರಬೇಕಾಗುತ್ತದೆ. ಫುಡ್ ಡೆಲಿವರಿ ಮಾಡುವವರು, ಕೊರಿಯರ್ ನೌಕರರು ಮತ್ತು ಟ್ಯಾಕ್ಸಿ ಚಾಲಕರ ಆದಾಯ ಇಂಧನ ವೆಚ್ಚ ಸ್ಥಿರವಾಗಿರುವುದರ ಮೇಲೆ ಅವಲಂಬಿತರಾಗಿರುತ್ತದೆ. ಇಂಧನ ಬೆಲೆಗಳು ಹಠಾತ್ ಏರಿಕೆಯಾದಾಗ, ಅವರ ನಿವ್ವಳ ಗಳಿಕೆ ಕಡಿಮೆಯಾಗುತ್ತದೆ.

ಸಣ್ಣ ಉದ್ಯಮಿಗಳಿಗೆ ಕೇವಲ ಎರಡೇ ಆಯ್ಕೆಗಳಿವೆ. ಒಂದು ಹೆಚ್ಚಿನ ನಿರ್ವಹಣಾ ವೆಚ್ಚವನ್ನು ತಾವೇ ಭರಿಸಬೇಕು ಇಲ್ಲವೇ ಬೆಲೆ ಹೆಚ್ಚಿಸಬೇಕು. ಹೆಚ್ಚಿನವರು ಬೆಲೆಯನೇ ಏರಿಕೆ ಮಾಡುತ್ತಾರೆ. ಬೆಳಗಿನ ಚಹಾದ ಬೆಲೆ, ತರಕಾರಿ ಅಥವಾ ಕ್ಷೌರದ ವೆಚ್ಚ ಎಲ್ಲವೂ ಹಂತ ಹಂತವಾಗಿ ಏರತೊಡಗುತ್ತವೆ.

ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವ ನಗರಗಳಲ್ಲಿ, ಕೆಲವು ಉದ್ಯೋಗಿಗಳು ಬಸ್ಗಳು ಮತ್ತು ಮೆಟ್ರೊ ಬಳಸಬಹುದು. ಆದರೆ ಲಕ್ಷಾಂತರ ಜನರು ವಾಸಿಸುವ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಇರುವವರಿಗೆ ಸ್ವಂತ ಗಾಡಿ ಅನಿವಾರ್ಯ. ವೈಯಕ್ತಿಕ ವಾಹನಗಳು ಐಷಾರಾಮಿ ಬದುಕಿನ ಸಂಕೇತಗಳಾಗಿರದೇ ಅತ್ಯಗತ್ಯವಾಗಿರುತ್ತವೆ. ಸಮರ್ಪಕ ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇಲ್ಲದಿರುವಾಗ ಅವರಿಗೆ ಬೇರೆ ದಾರಿಯೇ ಇರುವುದಿಲ್ಲ.

ಉಳಿತಾಯಕ್ಕೆ ಬರೆ

ಮನೆ ಖರೀದಿಸಲು ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಉಳಿತಾಯ ಮಾಡಲು ಈಗಾಗಲೇ ಹೆಣಗಾಡುತ್ತಿರುವರ ಉಳಿತಾಯ ಮತ್ತಷ್ಟು ಕಡಿಮೆಯಾಗುತ್ತದೆ. ನಿಗದಿತ ಆದಾಯ ಹೊಂದಿರುವ ಪಿಂಚಣಿದಾರರು ಅನಿವಾರ್ಯವಲ್ಲದ ಇತರ ಖರ್ಚುಗಳನ್ನು ಕಡಿತಗೊಳಿಸಬೇಕಾಗುತ್ತದೆ. ಸಣ್ಣ ಪ್ರವಾಸಗಳನ್ನು ಯೋಜಿಸುತ್ತಿದ್ದ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುತ್ತಿದ್ದ ಕುಟುಂಬಗಳು ಆ ಯೋಜನೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕಾಗುತ್ತದೆ. ಹೀಗೆ ಹಣದುಬ್ಬರವು ಜನರ ಜೀವನದ ಗುಣಮಟ್ಟವನ್ನು ಕ್ರಮೇಣ ಕುಸಿಯುವಂತೆ ಮಾಡುತ್ತದೆ.

ಆಧಾರ: ರಾಯಿಟರ್ಸ್, ಆರ್ಬಿಐ , ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.