ನವದೆಹಲಿ: ನಿಂತಲ್ಲೇ ನಿಂತ 2,000 ಹಡಗು, 20,000ಕ್ಕೂ ಹೆಚ್ಚು ನಾವಿಕರ ಮೊಗದಲ್ಲಿ ಭವಿಷ್ಯದ ಅನಿಶ್ಚಿತತೆಯ ಆತಂಕ.. ಎತ್ತ ನೋಡಿದರೂ ಒಂದೇ ದೃಶ್ಯ, ಸಂಗ್ರಹಿಸಿದ್ದ ಆಹಾರ, ಕುಡಿಯುವ ನೀರು ಮುಗಿಯುತ್ತಿದೆ.. ಸಹಾಯಕ್ಕಾಗಿ ಮೊರೆ ಇಡುವ ಸಂದರ್ಭ ನಿರ್ಮಾಣವಾಗಿದೆ.

ಇದು ಸದ್ಯ ಹೊರ್ಮುಜ್ ಜಲಸಂಧಿಯ ಓಮಾನ್ ಭಾಗದಲ್ಲಿ ಕಂಡುಬರುತ್ತಿರುವ ಸ್ಥಿತಿ.. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್, ಹೊರ್ಮುಜ್ ಜಲಸಂಧಿಯನ್ನು ಬಂದ್ ಆಗಿದ್ದು, ತೈಲ, ಸರಕನ್ನು ಹೊತ್ತ ಸಾವಿರಾರು ಹಡಗುಗಳು ಆ ಬದಿಯಲ್ಲಿ ನಿಂತಿವೆ. ಸಾವಿರಾರು ಮಂದಿ ನಾವಿಕರು ಜೀವ ಕೈಯಲ್ಲಿ ಹಿಡಿದು ಹಡಗು ಸಂಚಾರಕ್ಕಾಗಿ ಕಾಯುತ್ತಿದ್ದಾರೆ. ಆಗಾಗ್ಗೆ ಸ್ಫೋಟದ ಸದ್ದು, ಬೆಂಕಿ ಕೆನ್ನಾಲಿಗೆ ಕಂಡುಬರುತ್ತಿದ್ದು, ಯಾವಾಗ ಏನಾಗುತ್ತದೋ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.

ನೆರವಿಗೆ ಮೊರೆ

ನಾವಿಕರ ಸಹಾಯವಾಣಿಗೆ ದಿನಕ್ಕೆ ನೂರಾರು ಕರೆಗಳು ಬರುತ್ತಿವೆ. ಹಡಗುಗಳಲ್ಲಿ ನೀರು ಮತ್ತು ಆಹಾರ ಸೇರಿದಂತೆ ಅಗತ್ಯ ವಸ್ತುಗಳು ಮುಗಿದುಹೋಗಿದ್ದು, ಕೂಡಲೇ ಪೂರೈಸುವಂತೆ ನಾವಿಕರ ಅಂತರರಾಷ್ಟ್ರೀಯ ಸಂಚಾರ ಕಾರ್ಮಿಕರ ಸಂಘಕ್ಕೆ(ಐಟಿಎಫ್) ಮೊರೆ ಇಟ್ಟಿದ್ದಾರೆ.

ಇದೊಂದು ವಿಚಿತ್ರ ಸಂದರ್ಭ, ಎಲ್ಲೆಡೆ ಭಯದ ವಾತಾವರಣವಿದೆ ಎಂದು ಐಟಿಎಫ್ನ ಅರಬ್ ಮತ್ತು ಇರಾನ್ ವಲಯದ ನಾವಿಕರ ಸಮನ್ವಯಕಾರ ಮೊಹಮ್ಮದ್ ಅರ್ರಾಚೆಡಿ ಹೇಳಿದ್ದಾರೆ.

ನಾವಿಕರೊಬ್ಬರಿಂದ ಮಧ್ಯರಾತ್ರಿ 2 ಗಂಟೆಗೆ ನಾನು ಕರೆ ಸ್ವೀಕರಿಸಿದೆ. ಅತ್ಯಂತ ಗಾಬರಿಗೊಂಡಿದ್ದ ನಾವಿಕ ಬಾಂಬ್ ದಾಳಿಯಲ್ಲಿ ಸಾಯಲು ನಾವು ಇಲ್ಲಿಗೆ ಬಂದಿದ್ದೇವೆಯೇ? ನಮಗೆ ಸಾಯಲು ಇಷ್ಟವಿಲ್ಲ. ದಯವಿಟ್ಟು ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಗೋಗರೆದರು ಎಂದು ಅವರು ಹೇಳಿದ್ದಾರೆ.

ನಾವಿಕರು ಏಕೆ ಹೊರಬರಲಾಗುತ್ತಿಲ್ಲ?

ಸಂಘರ್ಷ ಆರಂಭವಾದ ನಂತರ, ಹೊರ್ಮುಜ್ ಜಲಸಂಧಿಯ ಸುತ್ತಲಿನ ಪ್ರದೇಶವನ್ನು ಯುದ್ಧ ವಲಯವೆಂದು ಘೋಷಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಾವಿಕರು ಕಂಪನಿಯ ವೆಚ್ಚದಲ್ಲಿ ವಾಪಸಾತಿ ಮತ್ತು ಕೆಲಸ ಮಾಡುವವರು ಎರಡು ಪಟ್ಟು ವೇತನಕ್ಕೆ ಅರ್ಹರಾಗಿರುತ್ತಾರೆ. ಆದರೆ, ಅನೇಕ ನಾವಿಕರು ಈ ಒಪ್ಪಂದಗಳಿಗೆ ಒಳಪಡದೇ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ್ಮುಜ್ ದಿಗ್ಬಂಧನವು ಅವರ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ.

ನಮ್ಮನ್ನು ಹೊರಗೆ ಕಳುಹಿಸುವಂತೆ ಹಡಗಿನ ನಿರ್ವಾಹಕರಿಗೆ ಸಿಬ್ಬಂದಿ ಮಾಡಿದ ವಿನಂತಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮಾರ್ಚ್ 18ರಂದು ಐಟಿಎಫ್ಗೆ ಮಾಡಲಾದ ಇಮೇಲ್ನಲ್ಲಿ ನಾವಿಕರೊಬ್ಬರು ಆರೋಪಿಸಿದ್ದಾರೆ. ನಮ್ಮ ಸುರಕ್ಷತೆಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ಯುದ್ಧದಂತಹ ಪ್ರದೇಶದಲ್ಲಿದ್ದಾಗಲೂ ಸರಕು ಕಾರ್ಯಾಚರಣೆಗಳು ಮತ್ತು ಎಸ್ಟಿಎಸ್ (ಹಡಗಿನಿಂದ ಹಡಗಿಗೆ ಕಾರ್ಯಾಚರಣೆ) ಮಾಡುವುದನ್ನು ಮುಂದುವರಿಸಲು ಅವರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮಗೆ ಯಾವುದೇ ಆಯ್ಕೆಗಳಿಲ್ಲದಂತೆ ಮಾಡಿದ್ದಾರೆ ಎಂದೂ ಅವರು ಇಮೇಲ್ನಲ್ಲಿ ನೋವು ತೋಡಿಕೊಂಡಿದ್ದಾರೆ.

ನಾವಿಕರ ವಿನಂತಿಗಳನ್ನು ಸ್ಪಂದಿಸುತ್ತಿರುವ ಐಟಿಎಫ್ನ ಬೆಂಬಲ ತಂಡದ ಸದಸ್ಯರಲ್ಲಿ ಒಬ್ಬರಾದ ಲೂಸಿಯನ್ ಕ್ರಾಸಿಯುನ್ ಅವರು ಸ್ವೀಕರಿಸಿದ ಇಮೇಲ್ಗಳಲ್ಲಿ ಸುಮಾರು ಶೇ 50ರಷ್ಟು ನಾವಿಕರು ವೇತನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅನೇಕ ನಾವಿಕರು ಅಪಾಯದ ಹೊರತಾಗಿಯೂ ಹೊರಹೋಗಲು ಸಾಧ್ಯವಾಗದ್ದರಿಂದ ಅನಿವಾರ್ಯವಾಗಿ ಹಡಗುಗಳಲ್ಲಿಯೇ ಉಳಿದಿದ್ದಾರೆ.

ಯುದ್ಧ ವಲಯದಲ್ಲಿರುವ ಕಾರಣ ತನ್ನ ಸಂಬಳ ದಿನಕ್ಕೆ 16 ಡಾಲರ್ನಿಂದ 32 ಡಾಲರ್ಗೆ ಏರುತ್ತದೆಯೇ ಎಂದು ಒಬ್ಬ ನಾವಿಕ ಇಮೇಲ್ ಮೂಲಕ ದೃಢೀಕರಣ ಕೇಳಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ, ಯುದ್ಧ ವಲಯಕ್ಕೆ ತಕ್ಕಷ್ಟು ವೇತನ ಪಾವತಿ ಮಾಡಲು ಬೇಕಾದ ಒಪ್ಪಂದವನ್ನು ಹಡಗಿನ ಮಾಲೀಕರು ನಾವಿಕರ ಜೊತೆ ಮಾಡಿಕೊಂಡಿಲ್ಲ ಎಂದು ಐಟಿಎಫ್ ತಿಳಿಸಿದೆ.

10 ನಾವಿಕರ ಸಾವು

ಅಂತರರಾಷ್ಟ್ರೀಯ ನೌಕಾ ಸಂಘಟನೆಯ ಪ್ರಕಾರ, ಅಮೆರಿಕ ಮತ್ತು ಇರಾನ್ ಯುದ್ಧ ಆರಂಭವಾದಾಗಿನಿಂದ 19 ಮಂದಿ ನಾವಿಕರು ಮೃತಪಟ್ಟಿದ್ದಾರೆ ಎಂಬ ವರದಿ ಇದೆ. ಆದರೆ, 10 ಮಂದಿ ಮೃತಪಟ್ಟಿರುವ ಬಗ್ಗೆ ದೃಢಪಟ್ಟಿದೆ.

ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸುವ ಹಡಗಿನ ಮೇಲೆ ದಾಳಿ ನಡೆಸುವುದಾಗಿ ಇರಾನ್ ಬೆದರಿಕೆ ಹಾಕಿದೆ. ಕೆಲವೊಮ್ಮೆ ದಾಳಿಯನ್ನು ನಡೆಸಿಯೇಬಿಟ್ಟಿದೆ. ವಿಶ್ವದ ಐದನೇ ಒಂದರಷ್ಟು ತೈಲ ಮತ್ತು ಅನಿಲ ಸರಬರಾಜಿನ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿ ಮುಚ್ಚಿರುವುದು ಏಷ್ಯಾದಲ್ಲಿ ಇಂಧನ ಸುರಕ್ಷತೆಯೆ ಕಳವಳಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.