ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೂರನೇ ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ಹಾರಿಸಬಲ್ಲ ಪರಮಾಣು ಚಾಲಿತ ಜಲಾಂತರ್ಗಾಮಿ 'ಐಎನ್ಎಸ್ ಅರಿಧಮನ್' ಅನ್ನು ಅಧಿಕೃತವಾಗಿ ನೌಕಾಪಡೆಗೆ ಸೇರುತ್ತಿದೆ.

ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಕ್ಸ್ನಲ್ಲಿ ‘ಕೇವಲ ಪದವಲ್ಲ, ಶಕ್ತಿ. ಅರಿಧಮನ್’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಈಗಾಗಲೇ ಭಾರತದ ನೌಕಾಪಡೆಗೆ ಎರಡು ಜಲಾಂತರ್ಗಾಮಿ ನೌಕೆಗಳಾದ ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ ಸೇರ್ಪಡೆಯಾಗಿವೆ. ಐಎನ್ಎಸ್ ಮೂರನೇ ಪರಮಾಣು ಜಲಾಂತರ್ಗಾಮಿ ನೌಕೆಯಾಗಿದೆ.

ಇದು ಶತ್ರು ರಾಷ್ಟ್ರಗಳ ಕಣ್ಣಿಗೆ ಬೀಳದೆ ಸಮುದ್ರದ ಆಳದಿಂದಲೇ ಪರಮಾಣು ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಈ ಜಲಾಂತರ್ಗಾಮಿಯು ಡೀಸೆಲ್ ಬದಲಾಗಿ ಪರಮಾಣು ರಿಯಾಕ್ಟರ್ ಮೂಲಕ ಕಾರ್ಯನಿರ್ವಹಿಸುತ್ತದೆ. ರಿಯಾಕ್ಟರ್, ಪರಮಾಣುಗಳನ್ನು ವಿಭಜಿಸುವ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತದೆ, ಇದನ್ನು ಜಲಾಂತರ್ಗಾಮಿ ಮತ್ತು ಅದರ ವ್ಯವಸ್ಥೆಗಳಿಗೆ ಶಕ್ತಿ ನೀಡುವ ಉಗಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ.

ಈ ಕಾರಣದಿಂದ ನೌಕೆ ಯಾವುದೇ ಇಂಧನ ಪೂರೈಕೆ ಅಗತ್ಯವಿಲ್ಲದೆ ದೀರ್ಘ ಕಾಲ ನೀರಿನ ಆಳದಲ್ಲಿ ಇರುವಂತೆ ಮಾಡುತ್ತದೆ. ಇದರಲ್ಲಿ ಆಮ್ಲಜನಕ ಮತ್ತು ಕುಡಿಯುವ ನೀರನ್ನು ಉತ್ಪಾದಿಸಬಹುದು. ಹೀಗಾಗಿ ಆಗಾಗ ನೀರಿನಿಂದ ಮೇಲಕ್ಕೆ ಬರುವ ಅಗತ್ಯವಿಲ್ಲದೆ, ಸದ್ದಿಲ್ಲದಂತೆ ಕಾರ್ಯನಿರ್ವಹಿಸಬಲ್ಲದು.

ಐಎನ್ಎಸ್ ಅರಿಧಮನ್ ವಿಶೇಷತೆಯೇನು?

ಎಸ್ಎಸ್ಬಿಎನ್ ಎಂಬ ವರ್ಗಕ್ಕೆ ಸೇರಿದ ಜಲಾಂತರ್ಗಾಮಿಯಾಗಿದ್ದು, ಇದು ಶಿಪ್, ಸಬ್ಮರ್ಸಿಬಲ್, ಬ್ಯಾಲಿಸ್ಟಿಕ್, ನ್ಯೂಕ್ಲಿಯರ್ ಎಂಬ ಪದಗಳ ಹೃಸ್ವರೂಪವಾಗಿದೆ.

ಐಎನ್ಎಸ್ ಅರಿಧಮನ್ ತನ್ನ ಪೂರ್ವಿಕ ಜಲಾಂತರ್ಗಾಮಿ ನೌಕೆಗಳಿಗೆ ಹೋಲಿಸಿದರೆ ಹೆಚ್ಚು ದೊಡ್ಡದೂ, ಹೆಚ್ಚು ಸಮರ್ಥವೂ ಆಗಿದೆ. ಅಂದಾಜು ಏಳು ಸಾವಿರ ಟನ್ ತೂಕ ಹೊಂದಿರುವ ಈ ಜಲಾಂತರ್ಗಾಮಿ ಐಎಸ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ಗಳಿಂದ ಹೆಚ್ಚು ಕೆ-4 ಕ್ಷಿಪಣಿಗಳನ್ನು ಒಯ್ಯಬಲ್ಲದು. ಕೆ-4 ಕ್ಷಿಪಣಿಗಳು ಆಧುನಿಕ ಪರಮಾಣು ಸಾಮರ್ಥ್ಯ ಹೊಂದಿರುವ ಖಂಡಾಂತರ ಕ್ಷಿಪಣಿಗಳಾಗಿದ್ದು, ಬಹುತೇಕ 3,500 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಅಂದರೆ, ಇವು ಹಿಂದೂ ಮಹಾಸಾಗರದ ಸುರಕ್ಷಿತ ಆಳದಲ್ಲಿ ಬಚ್ಚಿಟ್ಟುಕೊಂಡು, ಸಾಕಷ್ಟು ದೂರದಲ್ಲಿರುವ ಗುರಿಗಳ ಮೇಲೆ ನಿಖರ ದಾಳಿ ನಡೆಸಬಲ್ಲವು. ಈ ಹೆಚ್ಚುವರಿ ವ್ಯಾಪ್ತಿ ಭಾರತದ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸುತ್ತದೆ.

ಶೀತಲ ಸಮರದಲ್ಲಿ ಹುಟ್ಟಿಕೊಂಡ ಜಲಾಂತರ್ಗಾಮಿ

ಈ ಪರಮಾಣು ಜಲಾಂತರ್ಗಾಮಿ ಪದ ಶೀತಲ ಸಮರದ ಸಮಯದಲ್ಲಿ ಹುಟ್ಟಿಕೊಂಡಿತು. ಇದಕ್ಕೆ ಒಂದು ರೂಪ ಸಿಕ್ಕಿದ್ದು 1950 ರಲ್ಲಿ. 1954ರಲ್ಲಿ ಯುನೈಟೆಡ್ ಸ್ಟೇಟ್ಸ್ ‘ಯುಎಸ್ಎಸ್ ನೌಟಿಲಸ್’ ಎನ್ನುವ ಜಗತ್ತಿನ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿಯನ್ನು ಬಳಸಿತ್ತು.

ಅತಿ ಹೆಚ್ಚು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವುದು ಪ್ರಮುಖ ದೇಶಗಳೆಂದರೆ,

ಅಮೆರಿಕ

2026ರ ಜನವರಿ ಅಂಕಿ ಅಂಶಗಳ ಪ್ರಕಾರ, ಅತಿ ಹೆಚ್ಚು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಅಮೆರಿಕ ಮುಂಚೂಣಿಯಲ್ಲಿದೆ. ಅಮೆರಿಕ ಬಳಿ 70 ಸಕ್ರಿಯ ಹಡುಗುಗಳಿವೆ. ಪ್ರಮುಖ ಪರಮಾಣು ಚಾಲಿತ ಜಲಾಂತರ್ಗಾಮಿಗಳೆಂದರೆ, ಒಹಿಯೊ, ಲಾಸ್ ಏಂಜಲಿಸ್, ಸೀವೋಲ್ಫ್ ಮತ್ತು ವರ್ಜಿನಿಯಾ.

ಚೀನಾ

ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಚೀನಾ ರಷ್ಯಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಚೀನಾ ಬಳಿ 30 ಸಕ್ರಿಯ ಹಡಗುಗಳಿವೆ. ಅಲ್ಲದೆ ಅತ್ಯಾಧುನಿಕ ‘ಟೈಪ್ 093’ ಜಲಾಂತರ್ಗಾಮಿಯನ್ನೂ ಹೊಂದಿದೆ. ಜತೆಗೆ ಮುಂದಿನ ಪೀಳಿಗೆಯ ‘ಟೈಪ್ 096’ ಖಂಡಾಂತರ ಕ್ಷಿಪಣಿ ಸಾಮರ್ಥ್ಯದ ಜಲಾಂತರ್ಗಾಮಿಯನ್ನೂ ಅಭಿವೃದ್ಧಿಪಡಿಸುತ್ತಿದೆ.

ರಷ್ಯಾ

ರಷ್ಯಾ ಬಳಿ 14 ಖಂಡಾಂತರ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳಿವೆ. ಇದರಲ್ಲಿ ‘ಬೊರೆಯ್ ಕ್ಲಾಸ್’ ಮತ್ತು ‘ಡೆಲ್ಟಾ IV-ಕ್ಲಾಸ್’ ಕೂಡ ಸೇರಿದೆ.

ಬ್ರಿಟನ್

ಬ್ರಿಟನ್ ಬಳಿ 10 ಪರಮಾಣು ಜಲಾಂತರ್ಗಾಮಿ ನೌಕೆಗಳಿವೆ. ‘ವ್ಯಾನ್ಗಾರ್ಡ್ ಕ್ಲಾಸ್’ ಖಂಡಾಂತರ ಕ್ಷಿಪಣಿ ಜಲಾಂತರ್ಗಾಮಿ ಮತ್ತು ‘ಆಸ್ಟ್ಯೂಟ್ ಕ್ಲಾಸ್ ಅಟ್ಯಾಕ್’ ಜಲಾಂತರ್ಗಾಮಿ ಪ್ರಮುಖವಾದವು. ಇದರ ಜತೆಗೆ ಮುಂದಿನ ಪೀಳಿಗೆಯ ‘ಡ್ರೆಡ್ನೌಟ್ ಕ್ಲಾಸ್’ ಜಲಾಂತರ್ಗಾಮಿಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಫ್ರಾನ್ಸ್

ಫ್ರಾನ್ಸ್ ಬಳಿ 9 ಪರಮಾಣು ಶಕ್ತಿಯ ಜಲಾಂತರ್ಗಾಮಿ ನೌಕೆಗಳಿವೆ. ಅವುಗಳಲ್ಲಿ ಪ್ರಮುಖವಾದವು ಎಂದರೆ ರುಬಿಸ್ ಕ್ಲಾಸ್, ಸಫ್ರನ್ ಕ್ಲಾಸ್, ಟ್ರೈಯಂಫೆಂಟ್ ಕ್ಲಾಸ್ ಮತ್ತು ಬರಾಕುಡಾ ಕ್ಲಾಸ್. ರುಬಿಸ್ ಕ್ಲಾಸ್ ಜಲಾಂತರ್ಗಾಮಿ ನೌಕೆ 2030ರ ಹೊತ್ತಿಗೆ ನಿವೃತ್ತಿಯಾಗಲಿದೆ. ಸಫ್ರನ್ ಕ್ಲಾಸ್ ಫ್ರಾನ್ಸ್ನ ಹೊಸ ಪೀಳಿಗೆಯ ಜಲಾಂತರ್ಗಾಮಿ ನೌಕೆ ಎನಿಸಿದೆ.

ಭಾರತ

ಬಲಶಾಲಿ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರುತ್ತಿದೆ. ಐಎನ್ಎಸ್ ಅರಿಹಂತ್ 2016ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಐಎನ್ಎಸ್ ಅರಿಘಾಟ್ ಇತ್ತೀಚೆಗೆ ನೌಕಾಪಡೆಗೆ ಸೇರಿದೆ. ಈಗ ಅರಿಧಮನ್ ಸೇರ್ಪಡೆಯಾದ ಕಾರಣ ಭಾರತದ ಬಳಿ ಒಟ್ಟು 3 ಶಕ್ತಿಶಾಲಿ ಪರಮಾಣು ಜಲಾಂತರ್ಗಾಮಿ ನೌಕೆ ಇದ್ದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.