ಯುದ್ಧವೆಂಬುದು ಕೇವಲ ಸೇನಾ ಸಂಘರ್ಷವಾಗಿ ಈಗ ಉಳಿದಿಲ್ಲ. ಆಧುನಿಕ ಯುದ್ಧದಲ್ಲಿ ರಾಜಕೀಯ, ಆರ್ಥಿಕ ಮತ್ತು ಭೌಗೋಳಿಕ ಒತ್ತಡವೂ ಸಮರದ ಭಾಗವಾಗಿವೆ. ಇರಾನ್ ತನ್ನ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಪ್ರತಿಯಾಗಿ ನೇರ ಯುದ್ಧದ ಜೊತೆಗೆ ಪರೋಕ್ಷ ಒತ್ತಡ ತಂತ್ರಗಳನ್ನೂ ಬಳಸುತ್ತಿದೆ. ಮತ್ತೊಂದೆಡೆ ಅಮೆರಿಕಾ ಮತ್ತು ಇಸ್ರೇಲ್ ಇರಾನ್‌ನ ಸೇನಾ ಸಾಮರ್ಥ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ.