ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಕಾರಣ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ತಾತ್ಕಾಲಿಕ ವಿರಾಮ ದೊರೆತಿದೆ. ಈ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಪಾಕಿಸ್ತಾನಕ್ಕೆ ಉಭಯ ದೇಶಗಳ ನಾಯಕರು ಧನ್ಯವಾದ ಹೇಳಿದ್ದಾರೆ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ, ‘ನನ್ನ ಪ್ರೀತಿಯ ಸಹೋದರರಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಪ್ ಹಾಗೂ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ನೆರವಿನಿಂದ ಯುದ್ಧಕ್ಕೆ ತಡೆ ದೊರೆತಿದೆ’ ಎಂದಿದ್ದಾರೆ.

ಇತ್ತ ಡೊನಾಲ್ಡ್ ಟ್ರಂಪ್ ಕೂಡ ಟ್ರುತ್ ಸೋಷಿಯಲ್ನಲ್ಲಿ ಇರಾನ್ ಪೋಸ್ಟ್ಅನ್ನು ಹಂಚಿಕೊಂಡು ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಕೊಂಡಾಡಿದ್ದಾರೆ.

ಇದರ ಬೆನ್ನಲ್ಲೇ ಎಕ್ಸ್ನಲ್ಲಿ ಪ್ರತಿಕ್ರಿಯಿಸರುವ ಷರಿಫ್, ‘ಲೆಬನಾನ್ ಸೇರಿದಂತೆ ಇತರ ಪ್ರದೇಶಗಳಲ್ಲಿ ದಾಳಿ ಮಾಡುವುದನ್ನು ನಿಲ್ಲಿಸಿ ತಕ್ಷಣದಿಂದಲೇ ಕದನ ವಿರಾಮ ಜಾರಿಗೊಳಿಸಲು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಯುನೈಡೆಟ್ ಸ್ಟೇಟ್ಸ್ ಆಫ್ ಅಮೆರಿಕ ಒಪ್ಪಿವೆ. ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ಅಂತಿಮ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಏಪ್ರಿಲ್ 10ರ ಶುಕ್ರವಾರದಂದು ಇಸ್ಲಾಮಾಬಾದ್ಗೆ ಆಗಮಿಸಿ ಮಾತುಕತೆ ನಡೆಸಿ’ ಎಂದು ಆಹ್ವಾನಿಸಿ ಪೋಸ್ಟ್ ಮಾಡಿದ್ದಾರೆ.

ವರದಿಗಳ ಪ್ರಕಾರ ಕದನ ವಿರಾಮ ಘೋಷಣೆಗೂ ಮುನ್ನ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನಿರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
.ಕದನ ವಿರಾಮ: ಇರಾನ್ ಮೇಲೆ ಎರಡು ವಾರ ಬಾಂಬ್ ಹಾಕುವುದಿಲ್ಲ ಎಂದ ಟ್ರಂಪ್.Explainer: ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಇರಾನ್ ಶುಲ್ಕ ವಿಧಿಸಬಹುದೇ?.
ಪಾಕಿಸ್ತಾನದ ರಾಜತಾಂತ್ರಿಕತೆ

ಪಶ್ಚಿಮ ಏಷ್ಯಾದ ರಾಷ್ಟ್ರವಾದ ಇರಾನ್ ಅನ್ನು ಭೂಪಟದಿಂದ ಅಳಿಸಿಹಾಕುವುದಾಗಿ ಗುಡುಗಿದ್ದ ಟ್ರಂಪ್ ಇದ್ದಕ್ಕಿದ್ದ ಹಾಗೆ ಕದನ ವಿರಾಮ ಘೋಷಿಸುವ ನಿರ್ಧಾರ ಮಾಡಿರುವುದರ ಹಿಂದೆ ಪಾಕಿಸ್ತಾನದ ರಾಜತಾಂತ್ರಿಕತೆ ಕೆಲಸ ಮಾಡಿದೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ನಡುವೆ ಮಥ್ಯಸ್ಥಿಕೆ ವಹಿಸಿದ್ದು ಮುನೀರ್.

ಪಾಕಿಸ್ತಾನ ಕಳೆದ ಮಾರ್ಚ್ನಿಂದಲೂ ಕೊಲ್ಲಿ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಬೇಕೆಂದು ಒತ್ತಡ ಹೇರುತ್ತಿತ್ತು. ಇದಕ್ಕಾಗಿ ಮಾರ್ಚ್ 29ರಂದು ಟರ್ಕಿ, ಸೌದಿ ಅರೇಬಿಯಾ, ಈಜಿಪ್ಟ್ನ ವಿದೇಶಾಂಗ ಸಚಿವರೊಂದಿಗೆ ಮಾತುಕತೆಯನ್ನೂ ನಡೆಸಿತ್ತು.

ಯುದ್ಧ ತೀವ್ರವಾಗಿ ಮುಂದುವರಿಯುತ್ತಿದ್ದಂತೆ ಅಮೆರಿಕ ಮತ್ತು ಇರಾನ್ ಮಾತುಕತೆಯಿಂದ ದೂರವುಳಿಯಲು ನಿರ್ಧರಿಸಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆಗಾರನಾಗಿ ಕೆಲಸ ಮಾಡಿತ್ತು. ಅಮೆರಿಕ ಪ್ರಸ್ತಾಪಗಳನ್ನು ಇರಾನ್ಗೆ ತಲುಪಿಸಿ, ಇರಾನ್ ಪ್ರತಿಕ್ರಿಯೆಗಳನ್ನು ಅಮೆರಿಕಕ್ಕೆ ರವಾನಿಸಿ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡು ಬಂದಿದೆ.
.ಇರಾನ್ ಮೇಲಿನ ದಾಳಿ ನಿಲ್ಲಿಸುವ ಅಮೆರಿಕ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ: ನೆತನ್ಯಾಹು.‘ಯುದ್ಧ ಅಂತ್ಯವಲ್ಲ’: ಎರಡು ವಾರ ಕದನ ವಿರಾಮ ಒಪ್ಪಿಕೊಂಡ ಬಳಿಕ ಖಮೇನಿ ಹೇಳಿಕೆ.
ಅಮೆರಿಕ ಮತ್ತು ಇರಾನ್ ಪಾಕಿಸ್ತಾನವನ್ನು ನಂಬಿದ್ದೇಕೆ?

ಎರಡು ದೇಶಗಳ ನಡುವೆ ಮಧ್ಯಸ್ಥಿಕೆವಹಿಸಬೇಕೆಂದರೆ, ಎರಡೂ ರಾಷ್ಟ್ರಗಳ ನಂಬಿಕಸ್ಥನಾಗಿರಬೇಕು. ಅರಬ್ ದೇಶಗಳು ಅಮೆರಿಕದೊಂದಿಗೆ ಉತ್ತಮ ನಂಟು ಹೊಂದಿರುವ ಕಾರಣ ಇರಾನ್ ತನ್ನ ನೆರೆಯ ರಾಷ್ಟ್ರಗಳನ್ನು ಎಂದಿಗೂ ನಂಬುವುದಿಲ್ಲ. ಅಮೆರಿಕದೊಂದಿಗೆ ಆತ್ಮೀಯತೆ ಹೊಂದಿರುವ ಗಲ್ಫ್ ದೇಶಗಳ ಮೇಲೆ ಇರಾನ್ ದಾಳಿಯನ್ನೂ ನಡೆಸಿರುವುದು ಇದಕ್ಕೊಂದು ಉದಾಹರಣೆ.

ಇದಲ್ಲದೆ, ಪಾಕಿಸ್ತಾನ ಇರಾನ್ನೊಂದಿಗೆ ಗಡಿ ಹಂಚಿಕೊಂಡಿದೆ. ಅಮೆರಿಕ ಕೂಡ ಪಾಕಿಸ್ತಾನದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದೆ. ಇರಾನ್ ಸಚಿವ ಮುನಿರ್ ಮತ್ತು ಷರೀಪ್ ಅವರನ್ನು ‘ಪ್ರೀತಿಯ ಸಹೋದರ‘ ಎಂದು ಸಂಬೋಧಿಸಿದ್ದರಲ್ಲೇ ಸಂಬಂಧದ ಆಳವನ್ನು ಗಮನಿಸಬಹುದು. ಇವೆಲ್ಲದರ ಜೊತೆಗೆ ಪ್ಯಾಲಿಸ್ಟೀನ್ ಸಮಸ್ಯೆಯಿಂದಾಗಿ ಪಾಕಿಸ್ತಾನವು ಇಸ್ರೇಲ್ ಜೊತೆ ಯಾವುದೇ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ ಎನ್ನುವುದು ಇರಾನ್, ಪಾಕಿಸ್ತಾನದ ಮೇಲೆ ನಂಬಿಕೆ ಇಡಲು ಮತ್ತೊಂದು ಕಾರಣ.

ಪಾಕಿಸ್ತಾನ ಕೂಡ ಇತರ ಗಲ್ಫ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ, ಹೀಗಾಗಿ ಸಂಘರ್ಷವನ್ನು ಶಮನಗೊಳಿಸಲು ಪಾಕಿಸ್ತಾನಕ್ಕೆ ಇನ್ನಷ್ಟು ಬಲ ನೀಡಿದೆ.
.ವಿಟೊ ಅಧಿಕಾರ: ಹೊರ್ಮುಜ್ ತೆರೆಯುವ ವಿಶ್ವಸಂಸ್ಥೆ ನಿರ್ಣಯ ಸೋಲಿಸಿದ ರಷ್ಯಾ, ಚೀನಾ.ಸಂಪೂರ್ಣ ಹಾನಿ ಭರಿಸಬೇಕು: ಅಮೆರಿಕ ಎದುರು ಇರಾನ್ ಇಟ್ಟಿರುವ 10 ಷರತ್ತುಗಳಿವು.
ಪಾಕಿಸ್ತಾನಕ್ಕೂ ಇದೆ ಲಾಭ

ಕದನ ವಿರಾಮದಿಂದ ಪಾಕಿಸ್ತಾನಕ್ಕೂ ಲಾಭವಿದೆ. ಪಾಕಿಸ್ತಾನ ಬಹುತೇಕ ತೈಲವನ್ನು ಪಶ್ಚಿಮ ಏಷ್ಯಾದಿಂದಲೇ ಪಡೆಯುತ್ತದೆ. ಅಲ್ಲದೆ ಸಾಕಷ್ಟು ಪಾಕಿಸ್ತಾನಿಯರು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಹಣ ಕಳಿಸುತ್ತಿದ್ದಾರೆ. ಹೊರ್ಮುಜ್ ಜಲಸಂಧಿ ಬಂದ್ ಆಗಿದ್ದರಿಂದ ತೈಲ ರವಾನೆ ಕುಸಿತ ಕಂಡಿತ್ತು. ಇದರಿಂದ ಪಾಕಿಸ್ತಾನದಲ್ಲಿ ತೈಲ ಬೆಲೆ ಗಗನಕ್ಕೇರಿತ್ತು.

ಪಾಕಿಸ್ತಾನದಲ್ಲಿ ಈಗಾಗಲೇ ಆರ್ಥಿಕತೆ ನೆಲಕಚ್ಚಿದೆ. ಒಂದೆಡೆ ಅಫ್ಗಾನಿಸ್ತಾನದೊಂದಿಗೆ ಸಂಘರ್ಷ, ಇತ್ತ ಭಾರತದೊಂದಿಗೆ ಸಂಬಂಧ ಸರಿ ಇಲ್ಲದಿರುವುದರ ನಡುವೆ ಇರಾನ್ನೊಂದಿಗೂ ಸಂಬಂಧ ಕೆಡಿಸಿಕೊಳ್ಳಲು ಪಾಕಿಸ್ತಾನಕ್ಕೆ ಇಷ್ಟವಿರಲ್ಲಿಲ್ಲ. ಇವಲ್ಲದೆ ಅಯತೊಲ್ಲಾ ಖಮೇನಿ ಹತ್ಯೆಯಿಂದಾಗಿ ಪಾಕಿಸ್ತಾನದಲ್ಲಿ ಪ್ರತಿಭಟನೆ, ಗಲಭೆ ಭುಗಿಲೆದ್ದು ಸಾವು ನೋವುಗಳು ಸಂಭವಿಸಿತ್ತು.

ಹೀಗಾಗಿ ತನ್ನ ಹಿತಾಸಕ್ತಿಯನ್ನೂ ಗಮನಿಸಿ ಉಭಯ ದೇಶಗಳ ನಂಬಿಕೆ ಗಳಿಸಿ, ಕದನ ವಿರಾಮಕ್ಕೆ ಒತ್ತಡ ಹೇರಿತ್ತು. ಇದಕ್ಕೆ ಚೀನಾ ಬೆಂಬಲ ಕೂಡ ನೆರವಾಯಿತು.
.ರಂಗಕ್ಕೆ ಬಾರದೆ ಸದ್ದಿಲ್ಲದೆ ಯುದ್ಧ ವಿರಾಮದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಚೀನಾ.ಕದನ ವಿರಾಮ ಮಾತುಕತೆ ಬೆನ್ನಲ್ಲೇ ಗರಿಗೆದರಿದ ಮಾರುಕಟ್ಟೆ: ಏರಿದ ಚಿನ್ನ, ಇಳಿದ ತೈಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.