ಮಂಗಳವಾರ, 19 ಮೇ 2026
×
ADVERTISEMENT

ಕಾರ್ಮಿಕರ ದಿನಾಚರಣೆ: ಈ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ತಿಳಿದಿರುವುದು ಮುಖ್ಯ

Published : 1 ಮೇ 2026, 4:48 IST
Last Updated : 1 ಮೇ 2026, 4:48 IST
ADVERTISEMENT
ಫಾಲೋ ಮಾಡಿ
Comments
19ನೇ ಶತಮಾನದ ಅಂತ್ಯದ ವೇಳೆಗೆ ಅಮೆರಿಕದ ಶಿಕಾಗೋದಲ್ಲಿ ಕಾರ್ಮಿಕರು ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ ಮಾತ್ರ ಇರಬೇಕೆಂದು ನಡೆಸಿದ ಹೋರಾಟ ಹಾಗೂ ಬಲಿದಾನಗಳ ನೆನಪಿಗಾಗಿ ಮೇ 1ರಂದು ವಿಶ್ವಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದಲ್ಲಿ 1923ರಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ದೇಶದ ಆರ್ಥಿಕತೆಯ ಬೆನ್ನೆಲುಬು ಎಂತಲೇ ಕಾರ್ಮಿಕರನ್ನು ಕರೆಯಲಾಗುತ್ತದೆ. ನಿರಂತರವಾಗಿ ದುಡಿಯುವ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳಿವೆ. ರಾಜ್ಯದಲ್ಲಿ ಕಾರ್ಮಿಕರರಿಗಾಗಿಯೇ ಜಾರಿ ಮಾಡಿದ ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ.
ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿ
ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಕಾರ್ಮಿಕರ ದಿನಾಚರಣೆ: ಈ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ತಿಳಿದಿರುವುದು ಮುಖ್ಯ

ಒಂದು ಸಾಲಿನಲ್ಲಿ
ಕರ್ನಾಟಕದ ನೋಂದಾಯಿತ ನಿರ್ಮಾಣ ಕಾರ್ಮಿಕರಿಗಾಗಿ ಸರ್ಕಾರವು ಪಿಂಚಣಿ, ಆರೋಗ್ಯ ಮತ್ತು ಶಿಕ್ಷಣ ಸೇರಿ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪ್ರಯೋಜನ ಪಡೆಯುವುದು ಅವಶ್ಯಕವಾಗಿದೆ.
• ಕಾರ್ಮಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ
ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ 60 ವರ್ಷದ ನಂತರ ಮಾಸಿಕ ₹3,000 ಪಿಂಚಣಿ ಸಿಗುತ್ತದೆ. ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪಿಂಚಣಿ ಹಾಗೂ ಅಂಗವೈಕಲ್ಯ ಸಂಭವಿಸಿದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ.
• ಅಪಘಾತ ಪರಿಹಾರದ ನೆರವು
ಉದ್ಯೋಗದ ಹೊರತಾದ ಅಪಘಾತಗಳ ಸಂದರ್ಭದಲ್ಲಿ ಮಂಡಳಿಯಿಂದ ₹8 ಲಕ್ಷದವರೆಗೆ ಪರಿಹಾರ ಲಭ್ಯವಿದೆ. ಶಾಶ್ವತ ಅಂಗವೈಕಲ್ಯಕ್ಕೆ ₹2 ಲಕ್ಷ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ.
• ಆರೋಗ್ಯ ಮತ್ತು ಹೆರಿಗೆ ಸೌಲಭ್ಯಗಳು
ಅನಾರೋಗ್ಯದ ಸಂದರ್ಭದಲ್ಲಿ ದಿನಕ್ಕೆ ಗರಿಷ್ಠ ₹20,000 ವರೆಗೆ ಆಸ್ಪತ್ರೆ ವೆಚ್ಚ, ಮತ್ತು ತಾಯಿ-ಮಗು ಯೋಜನೆ ಹಾಗೂ ಹೆರಿಗೆ ಭತ್ಯೆಯಡಿ ಆರ್ಥಿಕ ನೆರವು ನೀಡುವ ವ್ಯವಸ್ಥೆ ಇದೆ.
• ವಿವಾಹ ಮತ್ತು ಶಿಕ್ಷಣ ಸಹಾಯಧನ
ಕಾರ್ಮಿಕರು ಅಥವಾ ಅವರ ಅವಲಂಬಿತ ಮಕ್ಕಳ ವಿವಾಹಕ್ಕೆ ₹60,000 ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರವು ವಿಶೇಷ ಸಹಾಯಧನವನ್ನು ಒದಗಿಸುತ್ತದೆ.
• ಅಂತ್ಯಕ್ರಿಯೆ ಮತ್ತು ಸಾರಿಗೆ ನೆರವು
ಕಾರ್ಮಿಕರ ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ₹1.46 ಲಕ್ಷದವರೆಗೆ ಅಂತ್ಯಕ್ರಿಯೆ ವೆಚ್ಚ ಭರಿಸಲಾಗುತ್ತದೆ. ಅಲ್ಲದೆ, ಬಿಎಂಟಿಸಿ ಬಸ್‌ಗಳಲ್ಲಿ ರಿಯಾಯಿತಿ ದರದ ಪಾಸ್ ಸೌಲಭ್ಯವಿದೆ.
₹3,000
ಮಾಸಿಕ ಪಿಂಚಣಿ ಮೊತ್ತ
₹8 ಲಕ್ಷ
ಅಪಘಾತ ಪರಿಹಾರ ಮೊತ್ತ
₹50,000
ಹೆರಿಗೆ ಭತ್ಯೆ ಮೊತ್ತ
₹60,000
ವಿವಾಹ ಸಹಾಯಧನ
₹1.46 ಲಕ್ಷ
ಅಂತ್ಯಕ್ರಿಯೆ ವೆಚ್ಚದ ಸೌಲಭ್ಯ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಪಿಂಚಣಿ ಯೋಜನೆ
ಪ್ರತಿಯೊಬ್ಬ ನೋಂದಾಯಿತ ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಮಿಕರು ಈ ಯೋಜಗೆಯ ಫಲಾನುಭವಿಯಾಗಿರುತ್ತಾರೆ. 60 ವರ್ಷ ವಯಸ್ಸಾಗುವ ಮೊದಲು ಕನಿಷ್ಠ 3 ವರ್ಷಗಳ ಕಾಲ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕಾಗುತ್ತದೆ. ಪಿಂಚಣಿ ಮೊತ್ತವು ತಿಂಗಳಿಗೆ ₹3000 ಸಿಲಿದೆ. ಪಿಂಚಣಿ ಪಡೆಯುತ್ತಿರುವ ಕಾರ್ಮಿಕರು ಮರಣ ಹೊಂದಿದರೆ, ಅವರ ಪತಿ ಅಥವಾ ಪತ್ನಿಗೆ ಮಾಸಿಕವಾಗಿ ₹1,500 ಕುಟುಂಬ ಪಿಂಚಣಿ ಹಾಗೂ ಕೆಲಸದ ಸಮಯದಲ್ಲಿ ಶಾಶ್ವತ ಅಂಗವಿಕಲರಾದರೆ, ಮಾಸಿಕ ₹2,000 ಪಿಂಚಣಿ ಮತ್ತು ಹೆಚ್ಚುವರಿಯಾಗಿ ₹2 ಲಕ್ಷ ವರೆಗೆ ಆರ್ಥಿಕ ನೆರವು ಸಿಗುತ್ತದೆ.
ಅಪಘಾತ ಪರಿಹಾರ
 ಉದ್ಯೋಗದ ಸಮಯದಲ್ಲಿ ಅಪಘಾತಕ್ಕೀಡಾದ ಪ್ರತಿಯೊಬ್ಬ ನೋಂದಾಯಿತ ನಿರ್ಮಾಣ ಕಾರ್ಮಿಕನಿಗೆ ಉದ್ಯೋಗದಾತರು ಪರಿಹಾರ ನೀಡಬೇಕು. ಮಾತ್ರವಲ್ಲದೆ ಕೆಲಸದಿಂದಾಚೆಗೆ ಅಪಘಾತ ಸಂಭವಿಸಿದರೆ ಮಂಡಳಿಯಿಂದ ₹8 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆತ್ಮಹತ್ಯೆ, ಮಾದಕ ದ್ರವ್ಯದ ಸೇವನೆಯಿಂದ ಮೃತಪಟ್ಟರೆ, ಕ್ರಿಮಿನಲ್ ಉದ್ದೇಶ, ಮಗುವಿನ ಜನನತ ಸಮಯದಲ್ಲಿ ಅನಿರೀಕ್ಷಿತ ಸಾವು, ಲೈಂಗಿಕ, ಅಲೈಂಗಿಕವಾಗಿ ಹರಡುವ ಕಾಯಿಲೆಗಳು ಹಾಗೂ ಎಚ್ಐವಿಯಿಂದ ಮೃತಪಟ್ಟರೆ ಪರಿಹಾರವಿರುವುದಿಲ್ಲ. ಅಂಗವೈಕಲ್ಯಕ್ಕೆ ₹2 ಲಕ್ಷ ಶಾಶ್ವತ, ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ.
ಕಾರ್ಮಿಕ ಆರೋಗ್ಯ ಭಾಗ್ಯ
ಮಂಡಳಿಯಿಂದ ನೋಂದಾಯಿತರಾದ ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆ ಅಥವಾ ಕರ್ನಾಟಕ ಸರ್ಕಾರಿ ನೌಕರರ ಅಡಿಯಲ್ಲಿ ಸೇರಿಸಲಾದ ಖಾಸಗಿ ಆಸ್ಪತ್ರೆಯಲ್ಲಿ ವಿಮಾ ಯೋಜನೆ ಮೂಲಕ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾದ ಕಾರ್ಮಿಕರಿಗೆ ಹಣಕಾಸಿನ ನೆರವು ಮಂಜೂರು ಮಾಡಲಾಗುತ್ತದೆ. ದಿನಕ್ಕೆ ಗರಿಷ್ಠ ₹20 ಸಾವಿರಗಳವರೆಗೆ ನೀಡಲಾಗುತ್ತದೆ. ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬಹುದು
ತಾಯಿ–ಮಗು ಸಹಾಯ ಹಸ್ತ
ನೋಂದಾಯಿತ ಮಹಿಳಾ ನಿರ್ಮಾಣ ಕಾರ್ಮಿಕರ ಮಗುವಿನ ಪ್ರಿ-ಸ್ಕೂಲ್ ಶಿಕ್ಷಣ ಮತ್ತು ಪೌಷ್ಠಿಕಾಂಶದ ಬೆಂಬಲಕ್ಕಾಗಿ ಸಹಾಯ ಮಾಡುವ ಉದ್ದೇಶದಿಂದ ತಾಯಿ–ಮಗು ಸಹಾಯ ಹಸ್ತ ಯೋಜನೆ ಇದೆ. ಮಗುವಿನ ಜನ್ಮ ದಿನಾಂಕದಿಂದ 3 ವರ್ಷಗಳ ಅವಧಿಗೆ ಪ್ರಿ-ಸ್ಕೂಲ್ ಶಿಕ್ಷಣ ಮತ್ತು ಮಗುವಿನ ಪೌಷ್ಠಿಕಾಂಶ ಬೆಂಬಲವಾಗಿ ಈ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ.  ನೋಂದಾಯಿತ ಮಹಿಳಾ ನಿರ್ಮಾಣ ಕಾರ್ಯಕರ್ತೆಗೆ ₹6 ಸಾವಿರವನ್ನು ತಿಂಗಳಿಗೆ ₹500 ರಂತೆ ಮಂಜೂರು ಮಾಡಲಾಗುತ್ತದೆ. ಮೊದಲ ಎರಡು ಮಕ್ಕಳ ಜನನಕ್ಕೆ ಮಾತ್ರ ಸೌಲಭ್ಯವಿರುತ್ತದೆ. ಹೆರಿಗೆಯಾದ 6 ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹೆರಿಗೆ ಭತ್ಯೆ
ಮಹಿಳಾ ನಿರ್ಮಾಣ ಕೆಲಸಗಾರರ ಅರ್ಜಿಯ ಮೇರೆಗೆ, ಅವರಿಗೆ ಮಗುವಿನ ಹೆರಿಗೆಯ ಪುರಾವೆಯನ್ನು ಒದಗಿಸಿದರೆ, ಮೊದಲ ಎರಡು ಹೆರಿಗೆಗಳಿಗೆ ಮಾತ್ರ ₹50 ಸಾವಿರ ಮಂಜೂರು ಮಾಡಲಾಗುತ್ತದೆ. ಎರಡು ಬಾರಿ ಮಾತ್ರ ಪಡೆಯಬಹುದು. ಈಗಾಗಲೇ ಇಬ್ಬರು ಜೀವಂತ ಮಕ್ಕಳಿದ್ದರೆ ಈ ಸಹಾಯಧನಕ್ಕೆ ಅರ್ಹರಾಗಿರುವುದಿಲ್ಲ.
ವಿವಾಹ ಸಹಾಯಧನ
ವಿವಾಹ ಸಹಾಯಧನ ನೋಂದಾಯಿತ ನಿರ್ಮಾಣ ಕಾರ್ಮಿಕರ ಅರ್ಜಿಯ ಮೇರೆಗೆ, ಕೆಲಸಗಾರ ಅಥವಾ ಅವರ ಇಬ್ಬರು ಅವಲಂಬಿತ ಮಕ್ಕಳ ವಿವಾಹ ವೆಚ್ಚವನ್ನು ಪೂರೈಸಲು ₹60 ಸಾವಿರ ಮಂಜೂರು ಮಾಡಲಾಗುತ್ತದೆ. ಒಂದು ಕುಟುಂಬವು 2 ಬಾರಿ ಮಾತ್ರ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕಾನೂನಿ ಪ್ರಕಾರ ವಿವಾಹದ ವಯೋಮಿತಿ  ಹೊಂದಿರಬೇಕು. ಮದುವೆಯಾದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
ಶಿಕ್ಷಣ ನೆರವು
ನೋಂದಾಯಿತ ನಿರ್ಮಾಣ ಕಾರ್ಮಿಕರ ಮಗ ಅಥವಾ ಮಗಳ ಶಿಕ್ಷಣಕ್ಕೆ ಸಹಾಯಧನವನ್ನು ನೀಡುವ ಸೌಲಭ್ಯವಿದೆ. ಕರ್ನಾಟಕ ದೂರ ಶಿಕ್ಷಣ ಕೋರ್ಸ್‌ಗಳು, ಹೋಂ ಸ್ಟಡಿ ಕೋರ್ಸ್‌ಗಳು, ಆನ್‌ಲೈನ್ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರಯೋಜನಗಳನ್ನು ಪಡೆಯಲು ಅರ್ಹರಿರುವುದಿಲ್ಲ.
ಅಂತ್ಯಕ್ರಿಯೆಯ ವೆಚ್ಚ
ನೋಂದಾಯಿತ ನಿರ್ಮಾಣ ಕಾರ್ಮಿಕ ಮರಣ ಹೊಂದಿದಲ್ಲಿ ಹಠಾತ್ ಮರಣದಿಂದ ಉಂಟಾಗುವ ಆರ್ಥಿಕ ತೊಂದರೆಯನ್ನು ತಗ್ಗಿಸಲು ₹1.46 ಲಕ್ಷದ ವರೆಗೂ ಸೌಲಭ್ಯ ಸಿಗಲಿದೆ. ಈ ಹಣ ನಾಮನಿರ್ದೇಶಿತರಿಗೆ ಸಿಗುತ್ತದೆ. ಮರಣ ಹೊಂದಿದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.
ಉಚಿತ ಬಿಎಂಟಿಸಿ ಬಸ್ ಪಾಸ್‌
ಬೆಂಗಳೂರು ಮಹಾನಗರ ಸಾರಿಗೆ ನಿಗಮ ಬಸ್‌ಗಳಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‌ ವ್ಯವಸ್ಥೆ ಇದೆ. ಕಾರ್ಮಿಕ ಕಾರ್ಡ್,  ಆಧಾರ್ ಕಾರ್ಡ್ ದಾಖಲೆ ಸಲ್ಲಿಸಿ ಯೋಜನೆ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT