ನವದೆಹಲಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಬದಲಿಗೆ ಕೇಂದ್ರ ಸರ್ಕಾರವು ರೂಪಿಸಿರುವ ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ ಜಿರಾಮ್ಜಿ) ಕಾಯ್ದೆಯು ಜುಲೈ 1 ರಿಂದ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಈ ಹೊಸ ಕಾಯ್ದೆಯು ಮುಂದಿನ ಪೀಳಿಗೆಗೆ ಗ್ರಾಮೀಣಾಭಿವೃದ್ಧಿ ಚೌಕಟ್ಟು ರೂಪಿಸಲಿದೆ ಎಂದಿರುವ ಸರ್ಕಾರ, 2047ರ ಹೊತ್ತಿಗೆ ವಿಕಸಿತ ಭಾರತ ಗುರಿ ಸಾಧಿಸುವ ದೃಷ್ಟಿಯಿಂದಲೂ ನೆರವಾಗಲಿದೆ ಎಂದಿದೆ.
.ಜುಲೈ 1 ರಿಂದ ದೇಶದಾದ್ಯಂತ ವಿಬಿ ಜಿರಾಮ್ಜಿ ಕಾಯ್ದೆ ಜಾರಿ.
ಹೊಸ ಕಾಯ್ದೆಯಲ್ಲಿ ಏನೇನು ಬದಲಾವಣೆ?

ಈ ಹೊಸ ಕಾಯ್ದೆಯ ಅಡಿಯಲ್ಲಿ ಗ್ರಾಮೀಣ ಕುಟುಂಬದ ವ್ಯಕ್ತಿಯು ನರೇಗಾದಲ್ಲಿದ್ದ 100 ದಿನಗಳ ಕೆಲಸದ ಬದಲಾಗಿ 125 ದಿನಗಳ ಕೆಲಸವನ್ನು ಪಡೆಯುತ್ತಾನೆ.

ನೀರಾವರಿಗೆ ಸಂಬಂಧಿಸಿದ ಕೆಲಸ, ಮೂಲ ಸೌಕರ್ಯಗಳ ಅಭಿವೃದ್ಧಿ, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹಾಗೂ ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲಿ ಹಾನಿಯನ್ನು ತಡೆಯಲು ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಅಂದರೆ, ಅತಿವೃಷ್ಟಿ ಸಮಯದಲ್ಲಿ ಸಮಸ್ಯೆಯಾಗದಂತೆ ಚರಂಡಿ ವ್ಯವಸ್ಥೆ ಮಾಡುವುದು, ಅನಾವೃಷ್ಟಿ ಸಮಯದಲ್ಲಿ ನೀರಿನ ಕೊರತೆ ನೀಗಿಸಲು ಕೆರೆಗಳ ಹೂಳೆತ್ತುವುದು ಅಥವಾ ಹೊಸ ಕೆರೆಗಳ ನಿರ್ಮಾಣ ಇತ್ಯಾದಿ ಕೆಲಸಗಳು ನಡೆಯುತ್ತವೆ.

ಅಲ್ಲದೆ, ಹೊಸ ಕಾಯ್ದೆಯಲ್ಲಿ ವಿಕಸಿತ ಗ್ರಾಮ ಪಂಚಾಯಿತಿ ಯೋಜನೆಯನ್ನೂ ಪರಿಚಯಿಸಲಾಗಿದೆ. ಇದು ಗ್ರಾಮ ಪಂಚಾಯಿತಿಗಳು ಸಿದ್ಧಪಡಿಸಿದ ಮತ್ತು ಗ್ರಾಮ ಸಭೆಗಳಿಂದ ಅನುಮೋದಿಸಲ್ಪಟ್ಟ ಸ್ಥಳೀಯ ಅಭಿವೃದ್ಧಿ ಕಾರ್ಯಗಳ ಕೆಲಸವನ್ನು ಮಾಡುವುದಾಗಿದೆ. ಸರ್ಕಾರದ ಪ್ರಕಾರ, ಕಾಯ್ದೆಯಡಿಯಲ್ಲಿನ ಎಲ್ಲಾ ಕೆಲಸಗಳು ಈ ಗ್ರಾಮ ಅಭಿವೃದ್ಧಿ ಯೋಜನೆಗಳಿಂದಲೇ ನಡೆಯಬೇಕು.
.ವಿಬಿ–ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ನವರಿಗೆ ತಿಳಿವಳಿಕೆಯಿಲ್ಲ: ಜೋಶಿ.
ಹೊಸ ಕಾಯ್ದೆಗೆ ವರ್ಗಾವಣೆ ಎಂದರೇನು?

ನರೇಗಾದಿಂದ ಹೊಸ ಕಾನೂನಿನ ಪರಿವರ್ತನೆಗೆ ಯಾವುದೇ ತಡೆ ಇರುವುದಿಲ್ಲ ಎಂದು ಕೇಂದ್ರ ಹೇಳಿದೆ. 2026ರ ಜುಲೈ 1ರಂದು ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ಬಂದ ನಂತರ ನರೇಗಾ ಔಪಚಾರಿಕವಾಗಿ ರದ್ದಾಗಲಿದೆ.

ಈಗ ನರೇಗಾದಡಿ ನಡೆಯುತ್ತಿರುವ ಕೆಲಸಗಳು ಮುಂದುವರಿಯಲಿದ್ದು, ಹೊಸ ಚೌಕಟ್ಟಿಗೆ ವರ್ಗಾಯಿಸಲಾಗುವುದು. ಸಾರ್ವಜನಿಕ ಆಸ್ತಿಗಳ ದುರಸ್ತಿ ಕೆಲಸ ಮತ್ತು ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಹೊಸ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ಗಳನ್ನು ನೀಡುವವರೆಗೆ, ಈಗಾಗಲೇ ಇ–ಕೆವೈಸಿ ಪೂರ್ಣಗೊಂಡಿರುವ ಕಾರ್ಮಿಕರಿಗೆ ಈಗಿರುವ ಜಾಬ್ ಕಾರ್ಡ್ಗಳೇ ತಾತ್ಕಾಲಿಕವಾಗಿ ಮಾನ್ಯವಾಗಿರುತ್ತವೆ. ಅಲ್ಲದೆ ನಡೆಯುತ್ತಿರುವ ಕೆಲಸಗಳು ಕಾರ್ಮಿಕರ ಬೇಡಿಕೆಯನ್ನು ಪೂರೈಸುವಷ್ಟು ಇಲ್ಲದಿದ್ದರೆ, ವರ್ಗಾವಣೆ ಹಂತದಲ್ಲಿ ಹೊಸ ಕೆಲಸಗಳನ್ನೂ ಆರಂಭಿಸಬಹುದು ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.
.ನರೇಗಾ: ’ಸುಪ್ರೀಂ’ಗೆ ರಾಜ್ಯದ ಮೊರೆ, ಕಾಯ್ದೆ ಮುಂದುವರಿಸುವಂತೆ ಕೋರಲು ತೀರ್ಮಾನ.
ಬದಲಾಗದೇ ಉಳಿಯುವ ನಿಯಮಗಳಾವುವು?

ಹೊಸ ಕಾಯ್ದೆ ಅನುಷ್ಠಾನಗೊಂಡ ಮೇಲೂ ಕೆಲವು ನಿಯಮಗಳು ಬದಲಾಗುವುದಿಲ್ಲ.

ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗೆ ಉದ್ಯೋಗ ಒದಗಿಸಬೇಕು, ಇಲ್ಲದಿದ್ದರೆ ಕಾರ್ಮಿಕರು ರಾಜ್ಯ ಸರ್ಕಾರಗಳು ಪಾವತಿಸುವ ನಿರುದ್ಯೋಗ ಭತ್ಯೆಗೆ ಅರ್ಹರಾಗುತ್ತಾರೆ.

ವೇತನವನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಿಗೆ ನೇರ ಲಾಭ ವರ್ಗಾವಣೆಯ ಮೂಲಕ ಪಾವತಿಸುವುದನ್ನು ಮುಂದುವರಿಸಲಾಗುತ್ತದೆ.

ಮಸ್ಟರ್ ರೋಲ್ ಮುಗಿದ ನಂತರ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳ ಒಳಗೆ ವಿತರಿಸಬೇಕು. ವೇತನ ಪಾವತಿ ವಿಳಂಬವಾದ ಸಂದರ್ಭದಲ್ಲಿ ಪರಿಹಾರಕ್ಕಾಗಿ ಕಾನೂನು ನಿಬಂಧನೆಗಳು ನರೇಗಾದಲ್ಲಿ ಇರುವಂತೆ ಪಾಲನೆಯಾಗಲಿದೆ.

ಹೊಸ ಕಾಯ್ದೆಯಲ್ಲಿನ ವೈಶಿಷ್ಟ್ಯಗಳೇನು?

ಕೆಲಸದ ಸ್ಥಳಗಳಲ್ಲಿ ಹಾಜರಾತಿಗಾಗಿ ಮುಖ ದೃಢೀಕರಣ ಆಧಾರಿತ ಹಾಜರಾತಿ (face authentication) ವ್ಯವಸ್ಥೆಯ ಇರುತ್ತದೆ. ಕಳಪೆ ಸಂಪರ್ಕ, ತಾಂತ್ರಿಕ ಸಮಸ್ಯೆಗಳು ಅಥವಾ ನಿಜವಾಗಿಯೂ ಇತರ ತೊಂದರೆಗಳು ಕಂಡುಬಂದ ಸಂದರ್ಭಗಳಲ್ಲಿ ವಿನಾಯಿತಿಯಿದೆ ಎಂದು ಸರ್ಕಾರ ಹೇಳಿದೆ.

ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ, ಋತುಮಾನಗಳ ಕೆಲಸದ ಅವಧಿಯಲ್ಲಿ ಕೆಲಸವನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ಕಾರ್ಮಿಕರ ಕೊರತೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರದ ವಾದವೇನು?

ಹೊಸ ಕಾಯ್ದೆಯು ಜೀವನೋಪಾಯ ನೀಡುವುದಲ್ಲದೆ, ಮೂಲಸೌಕರ್ಯ ಸೃಷ್ಟಿಗೆ ಮತ್ತು ಹವಾಮಾನ ವೈಪರೀತ್ಯಗಳ ಸಂದರ್ಭಗಳಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಜಿಸುವುದು ಮಾತ್ರವಲ್ಲದೆ ಅಭಿವೃದ್ಧಿಯನ್ನೂ ಮಾಡುತ್ತದೆ.

ಗ್ರಾಮೀಣ ಮಟ್ಟದಲ್ಲಿ ಹಳ್ಳಿಗಳಲ್ಲಿ ಶಾಶ್ವತ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ.

ಹವಾಮಾನ ವೈಪರೀತ್ಯಗಳನ್ನು ಎದುರಿಸಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪರಿಣಾಮ, ಗ್ರಾಮಗಳಲ್ಲಿ ಅಪಾಯಗಳನ್ನು ತಪ್ಪಿಸಬಹುದು.

100 ದಿನಗಳ ಬದಲಾಗಿ 125 ದಿನಗಳ ಕಾಲ ಕೆಲಸ ಸಿಗುವ ಕಾರಣ, ಹೆಚ್ಚು ದಿನ ಕೆಲಸ ಸಿಗಲಿದೆ.

ವಿರೋಧ ಪಕ್ಷಗಳ ವಾದವೇನು?

ಹೊಸ ಕಾಯ್ದೆಗೆ ಬೆಂಬಲ ನೀಡುವ ಬದಲು ವಿರೋಧ ಪಕ್ಷಗಳು ನರೇಗಾ ರದ್ದತಿ ಬಗ್ಗೆಯೇ ಹೆಚ್ಚು ವಿವಾದ ಸೃಷ್ಟಿಸಿದ್ದವು.

ನರೇಗಾದಲ್ಲಿ ಕೆಲಸಕ್ಕೆ ಬೇಡಿಕೆ ಇದ್ದರೆ ಸರ್ಕಾರ ಹೆಚ್ಚುವರಿ ಹಣವನ್ನು ನಿಗದಿಪಡಿಸಬೇಕಾಗುತ್ತದೆ. ಆದರೆ ಹೊಸ ಕಾಯ್ದೆಯಲ್ಲಿ ರಾಜ್ಯಗಳಿಗೆ ಪ್ರಮಾಣಿತ ಹಂಚಿಕೆಯನ್ನು ಒದಗಿಸುತ್ತದೆ. ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ.

ಮುಖ ದೃಢೀಕರಣ ಆಧಾರಿತ ಹಾಜರಾತಿಯ ಕಾರಣದಿಂದ ವಯಸ್ಸಾದ ಕಾರ್ಮಿಕರನ್ನು ಕೆಲಸದಿಂದ ಹೊರಗಿಡುವ ಸಾಧ್ಯತೆಯ ಬಗ್ಗೆಯೂ ವಿರೋಧ ಪಕ್ಷಗಳು ಆತಂಕ ಸೃಷ್ಟಿಸಿವೆ.

100 ದಿನಗಳ ಕೆಲಸದ ಅವಧಿಯಿರುವ ನರೇಗಾದಲ್ಲಿ ಈಗಾಗಲೇ ವೇತನ ಪಾವತಿ ಮತ್ತು ನಿಧಿ ಬಿಡುಗಡೆ ವಿಳಂಬವಾಗುತ್ತಿದೆ. ಈ ನಡುವೆ 125 ದಿನ ಕೆಲಸ ನೀಡುವಾಗ ಇವೆಲ್ಲವೂ ಸರಿಯಾಗುತ್ತದೆ ಎನ್ನುವ ಖಾತರಿ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.