ದೇಶದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆಗಳ ಪರಂಪರೆ ದೊಡ್ಡದು. ಜನಪ್ರತಿನಿಧಿಗಳು ತಾವು ಸಾಮಾನ್ಯರ ಪ್ರತಿನಿಧಿಗಳೆಂದು ಗುರುತಿಸಿಕೊಳ್ಳಲು, ಸಾರ್ವಜನಿಕರಿಗೆ ಹತ್ತಿರವಾಗಲು ಪಾದಯಾತ್ರೆಗೆ ಪರ್ಯಾಯ ಮತ್ತೊಂದಿಲ್ಲ.

ಜನಾಭಿಪ್ರಾಯವನ್ನು ಒಟ್ಟುಗೂಡಿಸಲು, ಬೆಂಬಲವನ್ನು ಗಿಟ್ಟಿಸಿಕೊಳ್ಳಲು ಹಲವು ನಾಯಕರು ಪಾದಯಾತ್ರೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಸಾಕಷ್ಟು ಮಂದಿ ಯಾತ್ರೆ–ಪಾದಯಾತ್ರೆಗಳ ನಂತರ ಅಧಿಕಾರಕ್ಕೇರಿದ ಉದಾಹರಣೆಗಳು ನಮ್ಮ ಮುಂದಿವೆ.

ಕರ್ನಾಟದದಲ್ಲಿ ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಯಾತ್ರೆಗಳ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿದ್ದರು. ಅದರ ಫಲ ಏನು, ಎಷ್ಟು ಎಂಬುದನ್ನು ಚುನಾವಣಾ ಫಲಿತಾಂಶಗಳೇ ಹೇಳಿದ್ದವು.

ಇಂದು (ಜೂನ್ 03ರಂದು) ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರೂ 2022ರ ‘ಮೇಕೆದಾಟು ಪಾದಯಾತ್ರೆ’ ಮೂಲಕ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು. ಈ ಹೊತ್ತಿನಲ್ಲಿ ಸಿಎಂ ಗಾದಿಗೇರುವ ಮುನ್ನ ಪ್ರಮುಖ ವಿಚಾರಗಳತ್ತ ಜನರನ್ನು ಸೆಳೆಯಲು ಪಾದಯಾತ್ರೆ ನಡೆಸಿದ ಪ್ರಮುಖ ನಾಯಕರ ಬಗ್ಗೆ ತಿಳಿಯೋಣ..

ಎಸ್.ಎಂ. ಕೃಷ್ಣರ ‘ಪಾಂಚಜನ್ಯ’
1999ರ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣರ ‘ಪಾಂಚಜನ್ಯ’ ಯಾತ್ರೆ ರಾಜ್ಯದಾದ್ಯಂತ ಮನೆಮಾತಾಗಿತ್ತು. ಜೊತೆಗೆ ಕೃಷ್ಣರ ಗ್ರಾಫ್ ಏರಿಸಿತ್ತು.

ಪಕ್ಷ ಸಂಘಟನೆ ಸಲುವಾಗಿ ಕೈಗೊಂಡ ಈ ಯಾತ್ರೆಯ ಯಶಸ್ಸು ಜೆಡಿಯು – ಬಿಜೆಪಿಯನ್ನು ಬದಿಗೆ ಸರಿಸಿತ್ತು. ಪಕ್ಷದ ನಾಯಕರೆಲ್ಲ ಒಂದೇ ಬಸ್ಸಿನಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಸುತ್ತಾಡಿದ ಪರಿಣಾಮ, 99ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ದೊರೆತಿತ್ತು. ಕೃಷ್ಣ ಮುಖ್ಯಮಂತ್ರಿಯಾಗಿದ್ದರು.

ವೈ.ಎಸ್.ರಾಜಶೇಖರ ರೆಡ್ಡಿಯ ‘ಪ್ರಜಾ ಪ್ರಶಾಂತಂ’
ವೈ.ಎಸ್.ಆರ್ ಎಂದೇ ಖ್ಯಾತರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ಅವರು 2003ರಲ್ಲಿ ಅವಿಭಜಿತ ಆಂಧ್ರ ಪ್ರದೇಶದಲ್ಲಿ ‘ಪ್ರಜಾ ಪ್ರಶಾಂತಂ’ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ್ದರು. ಇದು 11 ಜಿಲ್ಲೆಗಳಲ್ಲಿ ಸುಮಾರು 1,1475 ಕಿ.ಮೀ. ವರೆಗೂ ಸಾಗಿತ್ತು.

ಆಗಲೂ ಎನ್. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ರೆಡ್ಡಿ ಅವರು, ರಾಜ್ಯ ಗ್ರಾಮೀಣ ಪ್ರದೇಶದಲ್ಲಿ ಬರ ತಂದಿಟ್ಟಿದ್ದ ಸಂಕಷ್ಟಗಳು, ರೈತರ ಸಮಸ್ಯೆ, ಆತ್ಮಹತ್ಯೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿತ್ತು. 294 ಸದಸ್ಯ ಬಲದ ವಿಧಾನಸಭಾ ಚುನಾವಣೆಯಲ್ಲಿ ‘ಕೈ’ 185 ಕಡೆ ಜಯ ಗಳಿಸಿತ್ತು. ವೈ.ಎಸ್.ಆರ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.

ಸಿದ್ದರಾಮಯ್ಯರ ‘ಬಳ್ಳಾರಿ ಚಲೋ’
2010ರಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು.

‘ಬಳ್ಳಾರಿ ಚಲೋ’ ಹೆಸರಿನಲ್ಲಿ ಈ ಯಾತ್ರೆಯು ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ.ವರೆಗೆ 15 ದಿನ ಸಾಗಿತ್ತು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ವಿಚಾರದ ಬಗ್ಗೆ ಸಿದ್ದರಾಮಯ್ಯ ಗುಡುಗಿದ್ದರು. ಈ ಯಾತ್ರೆ ಸರ್ಕಾರದ ಬೆವರಿಳಿಸಿದ್ದಷ್ಟೇ ಅಲ್ಲದೆ, ಕಾಂಗ್ರೆಸ್ನಲ್ಲೂ ಒಗ್ಗಟ್ಟು ಮೂಡಿಸಿತ್ತು. ಸಿದ್ದರಾಮಯ್ಯಗೆ ಮಾಸ್ ಲೀಡರ್ ಇಮೇಜ್ ತಂದುಕೊಟ್ಟಿತ್ತು. ಬಿಜೆಪಿಯ ವರ್ಚಸ್ಸನ್ನು ಕುಗ್ಗಿಸಿತ್ತು.

ಹೀಗಾಗಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಲಭಿಸಿ, ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು.

ಎನ್. ಚಂದ್ರಬಾಬು ನಾಯ್ಡು ಅವರ ‘ನಿಮಗಾಗಿ ಬರುತ್ತಿದ್ದೇವೆ’
ಆಂಧ್ರ ಪ್ರದೇಶದಲ್ಲಿ ಮತ್ತೊಮ್ಮೆ ಸರ್ಕಾರ ಬದಲಾವಣೆಗೆ ಕಾರಣವಾಗಿದ್ದು ಪಾದಯಾತ್ರೆಯೇ. ‘ವಸ್ತುನ್ನಾ ಮೀ ಕೋಸಂ’ (ನಿಮಗಾಗಿ ಬರುತ್ತಿದ್ದೇವೆ) ಎನ್ನುತ್ತಾ 2012–13ರಲ್ಲಿ ಕಾಲ್ನಡಿಗೆ ಹೊರಟಿದ್ದರು. ಸುಮಾರು 208 ದಿನ ಸಾಗಿದ ಈ ಯಾತ್ರೆ ಬರೋಬ್ಬರಿ 2,840 ಕಿ.ಮೀ ಕ್ರಮಿಸಿತ್ತು.

ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) 2004ರಲ್ಲಿ ಅಧಿಕಾರ ಕಳೆದುಕೊಂಡದ್ದಷ್ಟೇ ಅಲ್ಲದೆ, 2009ರ ಚುನಾವಣೆಯನ್ನೂ ಸೋತಿತ್ತು. ರೆಡ್ಡಿ ಪಾದಯಾತ್ರೆಯಿಂದಾಗಿ ನಾಯ್ಡು ಅವರು ನಗರ ಕೇಂದ್ರಿತ ರಾಜಕಾರಣಿ ಎನ್ನುವ ಅಭಿಪ್ರಾಯ ರಾಜ್ಯದಾದ್ಯಂತ ಮೂಡಿತ್ತು. ಹೀಗಾಗಿ, ಟಿಡಿಪಿಯಲ್ಲಿ ರಾಜಕೀಯ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿತ್ತು.

ಅವೆಲ್ಲವನ್ನೂ ಸರಿಪಡಿಸಿಕೊಳ್ಳಲು ಮತ್ತೊಮ್ಮೆ ಅವಕಾಶ ನೀಡಬೇಕೆಂದು ಕೋರಿ ನಾಯ್ಡು ಜನರತ್ತ ಹೊರಟಿದ್ದರು. ಮಹಿಳೆಯರು, ಯುವಕರು ಮತ್ತು ರೈತಾಪಿಯನ್ನು ಸೆಳೆಯಲು ಅವರು ಮಾಡಿದ ಕಸರತ್ತು ಫಲಿಸಿತ್ತು. ರಾಜ್ಯ ವಿಭಜನೆಯ ನಂತರ 2014ರಲ್ಲಿ ನಡೆದ ಚುನಾವಣೆಯಲ್ಲಿ ಟಿಡಿಪಿಗೆ ಜನಾಶೀರ್ವಾದ ದೊರಕಿತ್ತು. ನಾಯ್ಡು ಮತ್ತೊಮ್ಮೆ ಮುಖ್ಯಮಂತ್ರಿಯಾದರು.

ವೈ.ಎಸ್. ಜಗನ್ ಮೋಹನ್ ರೆಡ್ಡಿಯವರ ‘ಪ್ರಜಾ ಸಂಕಲ್ಪ ಯಾತ್ರಾ’
ವೈ.ಎಸ್.ಆರ್ ಪುತ್ರ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು 2011ರಲ್ಲಿ ಕಾಂಗ್ರೆಸ್ನಿಂದ ಹೊರಬಂದು ಯುವಜನ ಶ್ರಮಿಕ ರೈತು ಕಾಂಗ್ರೆಸ್ (ವೈಎಸ್ಆರ್ ಕಾಂಗ್ರೆಸ್) ಹೆಸರಿನಲ್ಲಿ ಹೊಸ ಪಕ್ಷ ಸ್ಥಾಪಿಸಿದ್ದರು.

2014ರ ಚುನಾವಣೆಯಲ್ಲಿ ಟಿಡಿಪಿ – ಬಿಜೆಪಿ ಮೈತ್ರಿಕೂಟದ ಎದುರು ವೈಎಸ್ಆರ್ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿತ್ತು. ಹೀಗಾಗಿ, ಜನರನ್ನು ಸೆಳೆಯಲು ಮತ್ತಷ್ಟು ಕಾರ್ಯತಂತ್ರ ಮಾಡಿದ್ದ ಜಗನ್, 2017 – 19ರ ಅವಧಿಯಲ್ಲಿ ಒಟ್ಟು 341 ದಿನ 13 ಜಿಲ್ಲೆಗಳಾದ್ಯಂತ 3,648 ಕಿ.ಮೀ ‘ಪ್ರಜಾ ಸಂಕಲ್ಪ ಯಾತ್ರಾ’ ನಡೆಸಿದ್ದರು.

ರಾಜ್ಯಕ್ಕೆ ವಿಶೇಷ ಸ್ಥಾನಮಾನ, ರೈತರ ಸಾಲಮನ್ನಾ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ‘ನಡೆದ’ ಅವರು ತಂದೆಯ ಹಾದಿಯಲ್ಲೇ ಸಾಗುವ ಭರವಸೆ ಮೂಡಿಸಿದರು. ಅಧಿಕಾರಕ್ಕೇರಿದರೆ ಜನಪರವಾದ ಒಂಬತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದರು. ಇದರ ಫಲವಾಗಿ 2019ರಲ್ಲಿ ವೈಎಸ್ಆರ್ ಕಾಂಗ್ರೆಸ್ ಪರ ಜನಾದೇಶ ಬಂದಿತು. 175 ವಿಧಾನಸಭಾ ಕ್ಷೇತ್ರಗಳ ಪೈಕಿ 151ರಲ್ಲಿ ಗೆದ್ದು ಜಗನ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು.

ದಿಗ್ವಿಜಯ್ ಸಿಂಗ್ ಅವರ ‘ನರ್ಮದಾ ಪರಿಕ್ರಮ’
ದಿಗ್ವಿಜಯ್ ಸಿಂಗ್ ಅವರು 2017–18ರಲ್ಲಿ ‘ನರ್ಮದಾ ಪರಿಕ್ರಮ’ ಪಾದಯಾತ್ರೆ ಆರಂಭಿಸುವ ಮೊದಲೂ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ (1993–2003) ಅಧಿಕಾರ ನಡೆಸಿದ್ದರು. ಆದರೆ, 192 ದಿನ ಸುಮಾರು 3,300 ಕಿ.ಮೀ ವರೆಗೆ ನಡೆದ ಈ ಯಾತ್ರೆಯು ಕಾಂಗ್ರೆಸ್ಗೆ ಮತ್ತೊಮ್ಮೆ ಅಧಿಕಾರ ತಂದುಕೊಟ್ಟಿತ್ತು.

ಸುಮಾರು 15 ವರ್ಷ (2003 – 2018) ಅಧಿಕಾರದಿಂದ ದೂರ ಉಳಿದ ಕಾಗ್ರೆಸ್ನಲ್ಲಿ ಬಣ ಕಲಹ ಆರಂಭವಾಗಿತ್ತು. ಹೀಗಾಗಿ, ಬಿಜೆಪಿಯ ಹ್ಯಾಟ್ರಿಕ್ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಕೆಳಗಿಳಿಸುವುದು ಅನಿವಾರ್ಯವಾಗಿತ್ತು.

ಅದೇ ಕಾರಣಕ್ಕಾಗಿ ಪವಿತ್ರ ನರ್ಮದಾ ನದಿ ವಿಚಾರವನ್ನು ಕೈಗೆತ್ತಿಕೊಂಡ ಸಿಂಗ್, ಜನರ ಧಾರ್ಮಿಕ ಭಾವನೆಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು. ಸುಮಾರು 110 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನು ಸಂಘಟಿಸಿದ್ದರು. ಸರ್ಕಾರದ ವಿರುದ್ಧ ಜನಾಕ್ರೋಶವನ್ನು ಮುನ್ನೆಲೆಗೆ ತಂದರು. ಇದರ ಫಲಿತಾಂಶ 2018ರ ಚುನಾವಣೆಯಲ್ಲಿ ಗೋಚರಿಸಿತ್ತು. ವಿಧಾನಸಭೆಯ 230 ಸ್ಥಾನಗಳ ಪೈಕಿ ಕಾಂಗ್ರೆಸ್ಗೆ 114 ಮತ್ತು ಬಿಜೆಪಿಗೆ 109 ಕಡೆ ಜಯ ಒಲಿದಿತ್ತು. ಕಮಲನಾಥ್ ಮುಖ್ಯಮಂತ್ರಿಯಾಗಿದ್ದರು.

ಆದರೆ, ಕಾಂಗ್ರೆಸ್ನಲ್ಲಿದ್ದ ಬಂಡಾಯ ಬಿಸಿಯನ್ನು ಬಳಸಿಕೊಂಡ ಬಿಜೆಪಿ, ಹದಿನೈದೇ ತಿಂಗಳಲ್ಲಿ ಮತ್ತೆ ಅಧಿಕಾರಕ್ಕೆ ಮರಳಿತು.

ರೇವಂತ್ ರೆಡ್ಡಿಯ ‘ನನ್ನ ಊರು ನನ್ನ ಹೋರಾಟ’
ತೆಲಂಗಾಣದಲ್ಲಿ ಸದ್ಯ ಮುಖ್ಯಮಂತ್ರಿಯಾಗಿರುವ ರೇವಂತ್ ರೆಡ್ಡಿ ಅವರು 2023ರಲ್ಲಿ ‘ನನ್ನ ಊರು ನನ್ನ ಹೋರಾಟ’ ಹೆಸರಿನಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿದ್ದರು.

2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದಾಗಿನಿಂದಲೂ ಅಧಿಕಾರದಲ್ಲಿದ್ದ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಅವಧಿಯಲ್ಲಿ ಕಾಂಗ್ರೆಸ್ ಬಲ ಕುಸಿದಿತ್ತು. ಅದನ್ನು ಸಂಘಟಿಸುವ ಉದ್ದೇಶದಿಂದ ರೇವಂತ್ ಪಾದಯಾತ್ರೆಗೆ ಚಾಲನೆ ನೀಡಿದ್ದರು.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷರಾದ ನಂತರ, ರಾಜ್ಯದ ಗ್ರಾಮೀಣ ಪ್ರದೇಶಗಳ ಜನರನ್ನು ಸೆಳೆಯಲು ರೇವಂತ್ ರಣತಂತ್ರ ರೂಪಿಸಿದರು. ಅದರಂತೆ ಕಾಲ್ನಡಿಗೆ ಆರಂಭಿಸಿದರು. ಕೆಸಿಆರ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ನಿರುದ್ಯೋಗ, ನೇಮಕಾತಿ ಅಕ್ರಮ, ರೈತರ ಸಂಕಷ್ಟಗಳನ್ನು ಎತ್ತಿ ತೋರಿಸಿದರು.

ಹೀಗಾಗಿ, ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಧಿಕಾರ ಒಲಿದು, ರೇವಂತ್ ಮುಖ್ಯಮಂತ್ರಿಯಾದರು.

ಡಿ.ಕೆ. ಶಿವಕುಮಾರ್ – ‘ಮೇಕೆದಾಟು’
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು 2022ರಲ್ಲಿ ‘ನಮ್ಮ ನೀರು, ನಮ್ಮ ಹಕ್ಕು’ ಘೋಷವಾಕ್ಯದ ಅಡಿಯಲ್ಲಿ ಮೇಕೆದಾಟು ಪಾದಯಾತ್ರೆ ನಡೆಸಿತ್ತು.

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಪ್ರತಿಪಾದಿಸಲಾಗಿತ್ತು. ಇದರ ನೇತೃತ್ವವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ವಹಿಸಿಕೊಂಡಿದ್ದರು.

ಕೋವಿಡ್ ಸಂಕಷ್ಟದ ನಡುವೆಯೂ ಈ ಯಾತ್ರೆಗೆ ಅಪಾರ ಜನಬೆಂಬಲ ದೊರೆತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.