2026ರ ಐಪಿಎಲ್ ಟೂರ್ನಿಯ 40ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು . ಈ ಪಂದ್ಯದ ಸಂದರ್ಭದಲ್ಲಿ ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ಇ–ಸಿಗರೇಟ್ ಸೇದುತ್ತಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಭಾರತದಲ್ಲಿ 2019ರಿಂದ ಇ-ಸಿಗರೇಟ್ ಮತ್ತು ವೇಪ್ಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ನಡುವೆಯೂ ರಿಯಾನ್ ಪರಾಗ್, ವೇಪರ್ ಸೇದಿರುವುದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸಂಸದ ಸೌಗತ ರಾಯ್, ಟಿಎಂಸಿಯ ಸಂಸದ ಕೀರ್ತಿ ಆಜಾದ್, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಮೇಲೆ ಇ–ಸಿಗರೇಟ್ ಬಳಸಿರುವ ಆರೋಪಗಳಿದ್ದವು. ಇದೀಗ ಈ ಪಟ್ಟಿಗೆ ಕ್ರಿಕೆಟಿಗ ರಿಯಾನ್ ಪರಾಗ್ ಸೇರಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿಯಮಾವಳಿಗಳಂತೆ ಆಟಗಾರರು ಡ್ರೆಸ್ಸಿಂಗ್ ರೂಮ್ ಅಥವಾ ಡಗೌಟ್ನಲ್ಲಿ ತಂಬಾಕು ಅಥವಾ ಸಂಬಂಧಿತ ಉತ್ಪನ್ನಗಳ ಬಳಕೆಯನ್ನು ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್ ಅಡಿಯಲ್ಲಿ ನಿಷೇಧಿಸಿದೆ.

ಏನಿದು ಎಲೆಕ್ಟ್ರಾನಿಕ್ ಸಿಗರೇಟು ?

ಇದೊಂದು ಎಲೆಕ್ಟ್ರಾನಿಕ್ ಬ್ಯಾಟರಿ ಚಾಲಿತ ಯಂತ್ರವಾಗಿದೆ. ಅದರ ಒಳಗಿನ ದ್ರಾವಣ ಬಿಸಿ ಮಾಡಿದಾಗ, ದ್ರಾವಣ ಹಬೆಯಾಗಿ ಮಾರ್ಪಪಡುತ್ತದೆ. ಯಂತ್ರದೊಳಗಿನ ದ್ರಾವಣವನ್ನು ಇ-ದ್ರಾವಣ ಎಂದೂ ಕರೆಯುತ್ತಾರೆ. ಇ-ದ್ರಾವಣದಲ್ಲಿ ನಿಕೋಟಿನ್ ಜೊತೆ ಸುಗಂಧ ದ್ರವ್ಯವನ್ನೂ ಸೇರಿಸಲಾಗಿರುತ್ತದೆ.

ಇದು ಆರೋಗ್ಯದ ಮೇಲೆ ತೀವ್ರ ಹಾನಿ ಉಂಟುಮಾಡುತ್ತದೆ. ದ್ರಾವಣ ಬಿಸಿಯಾಗಿಸಿದಾಗ ಸುಗಂಧಯುಕ್ತ ಹೊಗೆ ಮತ್ತು ನಿಕೋಟಿನ್ಯುಕ್ತ ಹೊಗೆ ಬಿಡುಗಡೆಯಾಗುತ್ತದೆ. ಇದು ವ್ಯಸನಿಗಳಿಗೆ ಚಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇ-ಸಿಗರೇಟ್ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, ಇ-ಸಿಗಾರ್, ಇ- ಪೈಪ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.

ಇದರ ಉದಯ..

2003ರಲ್ಲಿ ಚೀನಾದ ಹಾನ್ಲಿಕ್ ಎಂಬ ಫಾರ್ಮಸಿಸ್ಟ್ (ಔಷಧಿ ವಿಜ್ಞಾನಿ) ಕಂಪನಿಯು ಇ-ಸಿಗರೇಟನ್ನು ಕಂಡುಹಿಡಿಯುತ್ತದೆ. 2004 ರಿಂದ ಜಗತ್ತಿನಾದ್ಯಂತ ಇದರ ಲಭ್ಯತೆ ಆರಂಭವಾಗಿದೆ. ಬಹುತೇಕ ಇ-ಸಿಗರೇಟುಗಳ ಉತ್ಪಾದನೆ ಚೀನಾ ದೇಶದಲ್ಲಿಯೇ ಆಗುತ್ತದೆ. ಶೇ 90ರಷ್ಟು ಉತ್ಪಾದನೆ ಚೀನಾ ದೇಶವೊಂದರಲ್ಲಿಯೇ ಆಗುತ್ತದೆ. ಆದರೆ ಇ-ಸಿಗರೇಟಿನ ಅತೀ ಹೆಚ್ಚು ಬಳಕೆದಾರರು ಅಮೇರಿಕ ಮತ್ತು ಇಂಗ್ಲೆಡ್ ದೇಶದಲ್ಲಿದ್ದಾರೆ. ಇತ್ತೀಚೆಗೆ ಭಾರತದಲ್ಲಿಯೂ ಇದರ ಮಾರಾಟ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಸಂಪೂರ್ಣ ನಿಷೇಧ ಸಾಧ್ಯವಾಗಿಲ್ಲ

ಇ-ಸಿಗರೇಟನ್ನು ಭಾರತ ಸರ್ಕಾರವು 2019ರಲ್ಲಿ ನಿಷೇಧಿಸಿದೆ. ಆದರೆ ಮಾರುಕಟ್ಟೆಯಲ್ಲಿ ಇಂದಿಗೂ ಅಕ್ರಮವಾಗಿ ಸಿಗುತ್ತಿದೆ. ಇಂದು ನಿಕೋಟಿನ್ ಇಲ್ಲದೆ ಇರುವ ಇ-ಸಿಗರೇಟುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂದಿಗೂ ಆಕ್ರಮವಾಗಿ ಇ–ಸಿಗರೇಟ್ಗಳು ಮಾರಾಟವಾಗುತ್ತಿವೆ. ಈ ಸಾಧನಕ್ಕೆ ಬೇಕಾದ ಬಿಡಿಭಾಗಗಳ ಆಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ₹35 ಲಕ್ಷ ಮೌಲ್ಯದ 1,026 ಬಂಡಲ್ ವಿದೇಶಿ ಇ–ಸಿಗರೇಟ್ ವಶಕ್ಕೆ ಪಡೆಯಲಾಗಿದೆ.

16,000 ಕ್ಕೂ ಅಧಿಕ ಫ್ಲೇವರ್ ಲಭ್ಯ

ಇ-ಸಿಗರೇಟಿನಲ್ಲಿ ಯುವಕರು ಇಷ್ಟಪಡುವಂತಹ ಬಬಲ್ಗಮ್, ಕಾಟನ್ ಕ್ಯಾಂಡಿ, ಚೆರ್ರಿ, ಮಿಂಟ್, ವೆನಿಲಾದಂತಹ ಸುಮಾರು 16,000ಕ್ಕೂ ಹೆಚ್ಚು ಫ್ಲೇವರ್ಗಳಲ್ಲಿ ಲಭ್ಯವಿದೆ. ಮಾತ್ರವಲ್ಲದೆ ಮಕ್ಕಳು ಇಷ್ಟಪಡುವಂತಹ ಕ್ಯಾಂಡಿ ರೂಪದಲ್ಲೂ ದೊರೆಯುತ್ತದೆ. ಜಾಗತಿಕವಾಗಿ ವಿಶ್ವದೆಲ್ಲೆಡೆ ಸುಮಾರು 500ಕ್ಕೂ ಅಧಿಕ ಬ್ರಾಂಡ್ಗಳ ಇ-ಸಿಗರೇಟ್ ಲಭ್ಯ ಇವೆ. ಭಾರತದಲ್ಲಿ ಇಂದಿಗೂ ಆಕ್ರಮವಾಗಿ 36 ಬಗೆಯ ಇ–ಸಿಗರೇಟ್ಗಳು ಮಾರಾಟವಾಗುತ್ತಿವೆ.

ಆರೋಗ್ಯದ ಮೇಲೆ ಪರಿಣಾಮಗಳು

ತಂಬಾಕು ಉತ್ಪನ್ನಗಳಿಂದ ಬಾಯಿ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯಾಘಾತ ಮುಂತಾದ ಮಾರಣಾಂತಿಕ ರೋಗಗಳು ಬರುತ್ತವೆ. ಮಾತ್ರವಲ್ಲ, ಮೆದುಳಿನ ಬೆಳವಣಿಗೆಯಲ್ಲಿ ಕುಂಠಿತ ಹಾಗೂ ತೀವ್ರ ಉಸಿರಾಟದ ಸಮಸ್ಯೆಗಳಿಗೂ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.