ಕಿಂಗ್ಸ್ಟನ್(ಕೆನಡಾ): ಪರಮಾಣು ಒಪ್ಪಂದಕ್ಕೆ ಒಪ್ಪದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸಿದ್ದು, ಇರಾನ್ನ ಪರಮೋಚ್ಛ ನಾಯಕ ಅಯತೊಲ್ಲಾ ಖಮೇನಿಯನ್ನು ಕೊಂದಿವೆ. ಇದರ ವಿರುದ್ಧ ತಿರುಗಿ ಬಿದ್ದಿರುವ ಇರಾನ್, ಗಲ್ಫ್ನ ಅಮೆರಿಕ ಮಿತ್ರರಾಷ್ಟ್ರಗಳಲ್ಲಿರುವ ತೈಲ ಸಂಸ್ಕರಣಾ ಘಟಕಗಳೂ ಸೇರಿದಂತೆ ವಿವಿಧೆಡೆ ದಾಳಿ ನಡೆಸುತ್ತಿದೆ.

ಅಷ್ಟೇ ಅಲ್ಲದೇ, ಜಾಗತಿಕ ತೈಲ ಸರಬರಾಜು ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಈ ಮಾರ್ಗದಲ್ಲಿ ಯಾವುದೇ ಹಡಗು ಪ್ರಯಾಣಿಸಲು ಯತ್ನಿಸಿದರೆ ಬೆಂಕಿ ಹಚ್ಚುವುದಾಗಿ ಇರಾನ್ ರೆವಲ್ಯೂಶನರಿ ಗಾರ್ಡ್ಸ್(ಐಆರ್ಜಿಸಿ) ಬೆದರಿಕೆ ಹಾಕಿದೆ. ಹೀಗಾಗಿ, ಭಾರತ ಸೇರಿದಂತೆ ಈ ಜಲಸಂಧಿ ಮೇಲೆ ಅವಲಂಬಿತವಾಗಿದ್ದ ದೇಶಗಳಲ್ಲಿ ತೈಲ ಸರಬರಾಜಲ್ಲಿ ವ್ಯತ್ಯಯವಾಗಿ ಬೆಲೆ ಏರಿಕೆ, ದಿನನಿತ್ಯದ ವ್ಯಾಪಾರ ಚಟುವಟಿಕೆಗಳ ಏಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಾಗಾದರೆ, ಈ ಹೊರ್ಮುಜ್ ಜಲಸಂಧಿಯ ವಿಶೇಷವೇನು? ಇದನ್ನು ಬಿಟ್ಟರೆ ತೈಲ ಸರಬರಾಜಿಗೆ ಬೇರೆ ಜಲಮಾರ್ಗಗಳಿಲ್ಲವೇ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯೋಣ.

ಹೊರ್ಮುಜ್ ಇರಾನ್ ಮತ್ತು ಒಮಾನ್ ದೇಶಗಳ ನಡುವಿನ 55 ಕಿ.ಮೀ ಅಗಲದ ಜಲಸಂಧಿಯಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರದಿಂದ ಬೇರ್ಪಡಿಸುತ್ತದೆ. ಇಂಧನ ವಲಯದ ದೃಷ್ಟಿಯಿಂದ ಇದು ಜಾಗತಿಕ ರಿಯಲ್ ಎಸ್ಟೇಟ್ನ ಒಂದು ಪ್ರಮುಖ ಭಾಗವಾಗಿದೆ. ವಿಶ್ವದ ಅತ್ಯಂತ ಚಟುವಟಿಕೆ ಇರುವ ಮತ್ತು ಕಾರ್ಯತಂತ್ರದ ಮಹತ್ವದ ಹಡಗು ಮಾರ್ಗಗಳಲ್ಲಿ ಒಂದಾಗಿದೆ.

ಈ ಜಲಸಂಧಿಯ ಮುಚ್ಚುವಿಕೆಯು ಈ ಪ್ರದೇಶದಿಂದ ತೈಲ ಮತ್ತು ಅನಿಲ ಸಾಗಣೆಗೆ ತಡೆಯಾಗಿದೆ. ಪ್ರಪಂಚದಾದ್ಯಂತದ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಈ ಜಲಸಂಧಿಯನ್ನು ಬಂದ್ ಮಾಡಿದ ನಂತರ ಇದರ ಮೂಲಕ ನಡೆಯುತ್ತಿದ್ದ ಒಟ್ಟಾರೆ ಸಮುದ್ರ ಸಂಚಾರವು ಶೇ 70ರಷ್ಟು ಕಡಿಮೆಯಾಗಿದೆ, 40ಕ್ಕೂ ಹೆಚ್ಚು ಅನ್ಲೋಡೇಡ್ ಟ್ಯಾಂಕರ್ಗಳು ಪರ್ಷಿಯನ್ ಕೊಲ್ಲಿಯಲ್ಲೇ ಉಳಿದಿವೆ.

ದಿನಕ್ಕೆ ಸುಮಾರು 13 ಮಿಲಿಯನ್ ಬ್ಯಾರೆಲ್ ತೈಲವನ್ನು ಈ ಮಾರ್ಗದ ಮೂಲಕ ಸರಬರಾಜು ಮಾಡಲಾಗುತ್ತದೆ. ಇದು ಜಾಗತಿಕ ತೈಲ ಸಾಗಣೆಯ ಸುಮಾರು ಶೇ 31ರಷ್ಟಿದೆ. ಈ ಜಲಸಂಧಿಯ ಮೂಲಕ ಸಾಗಣೆಯನ್ನು ನಿರ್ಬಂಧಿಸುವುದು ಖಂಡಿತವಾಗಿಯೂ ವಿಶ್ವ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

2025ರ ಫೆಬ್ರುವರಿಯಲ್ಲಿ ಜಲಸಂಧಿಯನ್ನು ಅಲ್ಪಾವಧಿಗೆ ಮುಚ್ಚಿದ್ದರಿಂದ ತೈಲ ಬೆಲೆಯಲ್ಲಿ ಶೇ 6ರಷ್ಟು ಏರಿಕೆಯಾಗಿತ್ತು.

ಹೊರ್ಮುಜ್ ಜಲಸಂಧಿ ಪ್ರಾಮುಖ್ಯತೆ ಏನು?

ಈ ಜಲಸಂಧಿಯ ಮುಚ್ಚುವಿಕೆಯು ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಸೇರಿದ ಪ್ರಮುಖ ಬಂದರುಗಳ ಮೇಲೆ ಹಾಗೂ ಸ್ವತಃ ಇರಾನ್ನ ಮೇಲೆ ಪರಿಣಾಮ ಬೀರುತ್ತದೆ. ಈ ದೇಶಗಳ ಮೂಲಕ ತೈಲವು ಜಾಗತಿಕ ಮಾರುಕಟ್ಟೆಗಳನ್ನು ತಲುಪುವ ಪ್ರಾಥಮಿಕ ಮಾರ್ಗ ಇದಾಗಿದೆ.

ಮಾರ್ಚ್ 2ರಂದು, ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರಲ್ಗೆ 79 ಡಾಲರ್ಗೆ ತಲುಪಿತ್ತು. ಕಳೆದ ವಾರದ ಬೆಲೆಗಳಿಗಿಂತ ಸುಮಾರು ಶೇ 8ರಷ್ಟು ಹೆಚ್ಚಾಗಿತ್ತು. ಉತ್ತರ ಅಮೆರಿಕದ ಕಚ್ಚಾತೈಲ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್, ಬ್ಯಾರೆಲ್ಗೆ 71 ಡಾಲರ್ಗೆ ತಲುಪಿತ್ತು. ಇದು ಈ ಮೊದಲಿಗಿಂತ ಶೇ 6ರಷ್ಟು ಹೆಚ್ಚಳವಾಗಿದೆ.

ಈ ಬೆಲೆ ಏರಿಕೆಯ ಪರಿಣಾಮ ಈಗಾಗಲೇ ಪೆಟ್ರೋಲ್ ಬಂಕ್ಗಳಲ್ಲಿ ಕಂಡುಬರುತ್ತಿದೆ. ಕೆನಡಾ ಮತ್ತು ಅಮೆರಿಕದಲ್ಲಿ ಪೆಟ್ರೋಲ್ ಬೆಲೆಗಳು ಏರಿಕೆಯಾಗುತ್ತಿವೆ.

ಕಳೆದ 50 ವರ್ಷಗಳಲ್ಲಿ ತೈಲ ಬೆಲೆ ಏರಿಕೆಗಳು ಮುಂಬರುವ ಆರ್ಥಿಕ ಹಿಂಜರಿತದ ಮುನ್ಸೂಚನೆ ನೀಡಿದ್ದವು. 1970ರ ದಶಕ ಮತ್ತು 80ರ ದಶಕದ ಆರಂಭದಲ್ಲಿ ನಡೆದ ಮೊದಲ ಮತ್ತು ಎರಡನೇ ತೈಲ ಬಿಕ್ಕಟ್ಟುಗಳಂತಹ ಕೆಲವು ಘಟನೆಗಳು ಜಾಗತಿಕ ಆರ್ಥಿಕತೆಗಳಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಕಾರಣವಾಗಿದ್ದವು.

ಮತ್ತೆ ಆರ್ಥಿಕ ಹಿಂಜರಿತ ಆಗಬಹುದೇ?

ಮೊದಲ ತೈಲ ಬಿಕ್ಕಟ್ಟಿನಿಂದ ಕಲಿತ ಪಾಠಗಳು

ಅರಬ್ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯು(ಒಎಪಿಇಸಿ ಈಗ ಒಪೆಕ್ ಎಂದು ಬದಲಾಗಿದೆ) ಇಸ್ರೇಲ್ ಪರ ನಿಂತಿದ್ದ ಅಮೆರಿಕಕ್ಕೆ ತೈಲ ಸರಬರಾಜಿಗೆ ನಿರ್ಬಂಧ ಹೇರಿತ್ತು. ಇದರ ಪರಿಣಾಮ ಅಮೆರಿಕದಲ್ಲಿ ಎರಡು ತಿಂಗಳ ಅವಧಿಯಲ್ಲಿ ತೈಲ ಬೆಲೆಯಲ್ಲಿ 4 ಪಟ್ಟು ಏರಿಕೆ, ಷೇರುಪೇಟೆ ಕುಸಿತ ಮತ್ತು ಆರ್ಥಿಕ ಹಿಂಜರಿತ ಆರಂಭವಾಗಿತ್ತು. ಒಪೆಕ್ ದೇಶಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಅಮೆರಿಕವು ತನ್ನ ದೇಶೀಯ ಅಗತ್ಯಕ್ಕೆ ತಕ್ಕಷ್ಟು ತೈಲ ಉತ್ಪಾದನೆ ಮಾಡುವ ನಿಕ್ಷೇಪಗಳನ್ನು ಹೊಂದಿರಲಿಲ್ಲ.

ಈ ನಡುವೆ ಅಮೆರಿಕ ಬೇರೆ ದೇಶಗಳಿಂದ ತೈಲ ಖರೀದಿ ಆರಂಭಿಸಿತ್ತು, ಇದರ ಪರಿಣಾಮ, ಜಾಗತಿಕ ಬೆಲೆ ಏರಿಕೆಗೆ ಎಡೆಮಾಡಿತು. ಇತರೆ ಕೆಲ ದೇಶಗಳ ತೈಲ ಬೆಲೆ ಏರಿಕೆಯ ಸಂಕಷ್ಟಕ್ಕೆ ಒಳಗಾದವು. ವಿಶ್ವದ ಮೊದಲ ತೈಲ ಬಿಕ್ಕಟ್ಟು ಆಟೊಮೊಬೈಲ್ ವಲಯ, ಇಂಧನ ವಲಯ ಮತ್ತು ಅಮೆರಿಕದಾದ್ಯಂತ ಇಂಧನ ನೀತಿ ಮೇಲೆ ಪರಿಣಾಮ ಬೀರಿತ್ತು.

ಇಂದು ಒಪೆಕ್ ದೇಶಗಳುತನ್ನ ಹಳೆಯ ಮಿತ್ರರಾಷ್ಟ್ರ ಇರಾನ್ ಜೊತೆ ತೈಲ ವ್ಯಾಪಾರ ಸಂಬಂಧ ಹೊಂದಿಲ್ಲ. ರಷ್ಯಾ ಜೊತೆ ಸೇರಿ ಒಪೆಕ್ ದೇಶಗಳು ದಿನಕ್ಕೆ 2,06,000 ಬ್ಯಾರಲ್ ತೈಲ ಉತ್ಪಾದಿಸುವ ಮೂಲಕ ತೈಲ ಮಾರುಕಟ್ಟೆಯ ಸ್ಥಿರತೆಗೆ ಕಾಯ್ದುಕೊಳ್ಳುತ್ತಿವೆ.

2ನೇ ತೈಲ ಬಿಕ್ಕಟ್ಟನ್ನೇ ಹೋಲುವ ಅಮೆರಿಕ–ಇರಾನ್ ಸಂಘರ್ಷ

ಇರಾನ್ನಲ್ಲಿ ಇಂದಿನ ಸಂಘರ್ಷವು ಎರಡನೇ ತೈಲ ಬಿಕ್ಕಟ್ಟಿನೊಂದಿಗೆ ಹೋಲಿಕೆ ಹೊಂದಿದೆ. 1979ರಲ್ಲಿ ಇರಾನಿನ ಕ್ರಾಂತಿಯು ಜಾಗತಿಕ ತೈಲ ಉತ್ಪಾದನೆಯಲ್ಲಿ ಸುಮಾರು ಶೇ 7ರಷ್ಟು ಕುಸಿತಕ್ಕೆ ಕಾರಣವಾಗಿತ್ತು. ಈ ಕುಸಿತವು ಚಿಕ್ಕದಾಗಿದ್ದರೂ 1980ರ ಆರಂಭದ ತಿಂಗಳುಗಳಲ್ಲಿ ಕಚ್ಚಾ ತೈಲದ ಬೆಲೆ ದ್ವಿಗುಣಗೊಂಡಿತ್ತು, ಇದು ಇಂಧನ ಕೊರತೆ ಮತ್ತು ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿತ್ತು. ಆದರೆ, ಇಂದು ಇರಾನ್ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಣ್ಣ ಪಾತ್ರವನ್ನು ವಹಿಸುತ್ತದೆ, ಒಟ್ಟು ವಾರ್ಷಿಕ ಉತ್ಪಾದನೆಯ ಸುಮಾರು ಶೇ 4ರಷ್ಟನ್ನು ಉತ್ಪಾದಿಸುತ್ತದೆ.

ಅಮೆರಿಕ ಇಂಧನ ಮಾಹಿತಿ ಸಂಸ್ಥೆಯ ಪ್ರಕಾರ, ಅಮೆರಿಕ (ಶೇ 22), ಸೌದಿ ಅರೇಬಿಯಾ (ಶೇ 11) ಮತ್ತು ರಷ್ಯಾ (ಶೇ 11), ನಂತರ ಕೆನಡಾ (ಶೇ 6) ಮತ್ತು ಚೀನಾ (ಶೇ 5) ತೈಲ ಉತ್ಪಾದನೆ ಮಾಡುತ್ತಿವೆ.

ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಇರಾನ್ನ ಸಾಮರ್ಥ್ಯ ಕಡಿಮೆಯಾಗಿದೆ. ಆದರೆ, ಅಮೆರಿಕ ಪಾತ್ರ ದೊಡ್ಡದಾಗಿದೆ. ಆದ್ದರಿಂದ, ಪ್ರಸ್ತುತ ಸಂಘರ್ಷದ ಸಂದರ್ಭದಲ್ಲಿ ಮಾರುಕಟ್ಟೆಯು ಪ್ರಮುಖ ಬೆಲೆ ಏರಿಕೆಯೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಹೊರ್ಮುಜ್ ಜಲಸಂಧಿ ವೈಲ್ಡ್ಕಾರ್ಡ್ ಆಗಿದೆ. ಸೌದಿ ಅರೇಬಿಯಾದ ತೈಲ ರಫ್ತಿನ ಅತಿದೊಡ್ಡ ಬಂದರು ಪರ್ಷಿಯನ್ ಕೊಲ್ಲಿಯ ರಾಸ್ ತನುರಾ, ಅಲ್ಲಿನ ಸ್ಥಳೀಯ ಸಂಸ್ಕರಣಾಗಾರವು ಇತ್ತೀಚೆಗೆ ಡ್ರೋನ್ ದಾಳಿಗೆ ತುತ್ತಾಗಿದೆ.

ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ರಾಸ್ ತನುರಾದಿಂದ ದಿನಕ್ಕೆ ಕನಿಷ್ಠ ಐದು ಮಿಲಿಯನ್ ಬ್ಯಾರೆಲ್ಗಳ ತೈಲ ಸಾಗಣೆಗೆ ತೊಡಕಾಗಿದೆ.

ಕೆನಡಾ ಮೇಲೆ ಹೊರ್ಮುಜ್ ಜಲಸಂಧಿ ಮುಚ್ಚುವಿಕೆ ಪರಿಣಾಮ

ಈ ಸಂಘರ್ಷವು ಕೆನಡಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಬಹುದು. ಅಲ್ಲದೆ, ಆಮದು ವಸ್ತುಗಳ ಬೆಲೆ ಏರಿಕೆಗೂ ಎಡೆಮಾಡಬಹುದು. ಕೆನಡಾ ನಿವ್ವಳ ತೈಲ ರಫ್ತುದಾರ ದೇಶವಾಗಿದ್ದರೂ, ದೇಶೀಯ ಇಂಧನ ಬೆಲೆಗಳು ಜಾಗತಿಕ ಮಾನದಂಡಗಳಿಗೆ ಸಂಬಂಧಿಸಿವೆ. ಅಂತರರಾಷ್ಟ್ರೀಯ ಏರಿಳಿತಗಳನ್ನು ಪ್ರತಿಬಿಂಬಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.