ತಮಿಳುನಾಡಿನಲ್ಲಿ ಸದ್ಯ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ. 234 ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ನಟ, ರಾಜಕಾರಣಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬೇಕಾಗಿರುವುದು 118 ಸ್ಥಾನಗಳು. ಹೀಗಾಗಿ ಬಹುಮತವಿಲ್ಲದ ಕಾರಣ ವಿಜಯ್ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ, ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಕಾರಣ ಒಂದನ್ನು ಬಿಟ್ಟುಕೊಡಬೇಕು. ಆಗ ಗೆದ್ದ ಒಟ್ಟು ಸ್ಥಾನಗಳ ಸಂಖ್ಯೆ 107 ಆಗುತ್ತದೆ. ಬಹುಮತಕ್ಕೆ ಮತ್ತೆ 11 ಸ್ಥಾನಗಳ ಕೊರತೆಯಾಗುತ್ತದೆ.

ಸದ್ಯ ಕಾಂಗ್ರೆಸ್ನ ಐವರು ಶಾಸಕರು ಟಿವಿಕೆಗೆ ಬೆಂಬಲ ಘೋಷಿಸಿದ್ದಾರೆ. ಆದರೂ ಬಹುಮತ ಸಿಗುತ್ತಿಲ್ಲ.

ಈ ಮಧ್ಯೆ ರಾಜ್ಯಪಾಲರನ್ನು ವಿಜಯ್ ಭೇಟಿಯಾಗಿದ್ದಾರೆ. ಆದರೆ ಅವರು ‘118 ಸ್ಥಾನಗಳನ್ನು ಶಾಸಕರ ಸಹಿಯೊಂದಿಗೆ ಸರ್ಕಾರ ರಚನೆಗೆ ಬನ್ನಿ’ ಎಂದಿದ್ದಾರೆ. ಹೀಗಾಗಿ ವಿಜಯ್ ಹೆಚ್ಚು ಸ್ಥಾನ ಗೆದ್ದರೂ ಸರ್ಕಾರ ರಚಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ.
.ಡಿಎಂಕೆ ಮೈತ್ರಿ ತೊರೆದು ವಿಜಯ್ 'ಕೈ' ಹಿಡಿದ ಕಾಂಗ್ರೆಸ್: ಏನಿದು ಬದಲಾದ ರಾಜಕೀಯ?.ವಿಜಯ್ ಸರ್ಕಾರ ರಚಿಸಲಿ, 6 ತಿಂಗಳು ತೊಂದರೆ ಕೊಡುವುದಿಲ್ಲ: ಎಂ.ಕೆ. ಸ್ಟಾಲಿನ್.
ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ವಿವೇಚನಾ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ. ಹಾಗಾದರೆ ರಾಜ್ಯಪಾಲರ ಎದುರು ಇರುವ ಆಯ್ಕೆಗಳೇನು ಎನ್ನುವುದನ್ನು ನೋಡುವುದಾದರೆ,

ಏಕೈಕ ದೊಡ್ಡ ಪಕ್ಷವನ್ನು ಆಹ್ವಾನಿಸುವುದು

ಸರ್ಕಾರ ರಚನೆಗೆ ಅನುಕೂಲ ಮಾಡಿಕೊಡುವುದು ರಾಜ್ಯಪಾಲರ ಆದ್ಯ ಕರ್ತವ್ಯ. ಹೀಗಾಗಿ ಅವರು ಸಂಪ್ರದಾಯದ ಪ್ರಕಾರ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವುದು.

ಸದ್ಯ ಸರ್ಕಾರ ರಚಿಸಲು ಬೇಕಾಗುವಷ್ಟು ಸಂಖ್ಯಾಬಲವಿಲ್ಲದ ಕಾರಣ ವಿಜಯ್ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಚುನಾವಣೋತ್ತರ ಒಕ್ಕೂಟಕ್ಕೆ ಆಹ್ವಾನ

108 ಸ್ಥಾನಗಳನ್ನು ಗೆದ್ದರೂ ಟಿವಿಕೆ ಸ್ವತಂತ್ರವಾಗಿ ಸ್ಪರ್ಧಿಸಿರುವುದರಿಂದ ಬಹುಮತವನ್ನು ಹೊಂದಿಸಬೇಕಿದೆ. ಐದು ಕಡೆ ಗೆದ್ದಿರುವ ಕಾಂಗ್ರೆಸ್, ತಲಾ ಎರಡು ಸ್ಥಾನ ಹೊಂದಿರುವ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆಯಂತ ಸಣ್ಣ ಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆಯಾಗಬಹುದು.

ಎಂ. ಎಂ. ಪುಂಚಿ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಏಕೈಕ ಅತಿದೊಡ್ಡ ಪಕ್ಷವು ಬಹುಮತ ಪ್ರದರ್ಶಿಸಲು ವಿಫಲವಾದರೆ, ರಾಜ್ಯಪಾಲರು ಬಹುಮತವನ್ನು ಗಳಿಸುವ ಚುನಾವಣೋತ್ತರ ಒಕ್ಕೂಟವನ್ನು ಆಹ್ವಾನಿಸಬೇಕಾಗುತ್ತದೆ.

ಕಾದು ನೋಡುವ ತಂತ್ರ

ಒಂದು ವೇಳೆ ಗೆದ್ದ ಪಕ್ಷ ಬಹುಮತವನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರಿಗೆ ಅನಿಸಿದರೆ ಅವರು ಕಾಲಾವಕಾಶವನ್ನು ನೀಡಬಹುದು.

ಆರ್ಟಿಕಲ್ 356ರ ಅಡಿ ರಾಷ್ಟ್ರಪತಿಗೆ ‘ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲಾಗಿದೆ’ ಎಂದು ವರದಿಯನ್ನು ನೀಡಬೇಕು. ಇದರಿಂದಾಗಿ ಗೆದ್ದ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸಮಯ ಸಿಗುತ್ತದೆ.

ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು

ಸರ್ಕಾರ ರಚನೆಯ ಎಲ್ಲಾ ಪ್ರಯತ್ನಗಳು ವಿಫಲವಾದರೆ ಕೊನೆಯ ಅಸ್ತ್ರವಾಗಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಾಗುತ್ತದೆ. ಇದು ಹೊಸ ಚುನಾವಣೆಗೆ ಕಾರಣವಾಗುತ್ತದೆ.

1994ರ ಎಸ್.ಆರ್. ಬೊಮ್ಮಾಯಿ vs ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ‘ಯಾವುದೇ ಸರ್ಕಾರಕ್ಕೆ ಬಹುಮತವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕಿರುವುದು ವಿಧಾನಸಭೆಯಲ್ಲೇ ಹೊರತು ರಾಜ್ಯಪಾಲರ ಖಾಸಗಿ ಕೊಠಡಿಯಲ್ಲಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ನಡೆಸದೆ ನೇರವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದರೆ, ಅದು ಸಂವಿಧಾನಬಾಹಿರ ಎಂದೂ ಪರಿಗಣಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಹುಮತ ಸಾಬೀತಿಗೆ ವಿಧಾನಸಭೆಯಲ್ಲಿ ಅವಕಾಶ ನೀಡಬೇಕು.
.ತಮಿಳುನಾಡು: ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರೆದುರು ಹಕ್ಕು ಮಂಡಿಸಿದ ವಿಜಯ್ .ಕಾಂಗ್ರೆಸ್ ಬಳಿಕ ವಿಸಿಕೆ ಬಳಿ ಬೆಂಬಲ ಕೋರಿದ ವಿಜಯ್.ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದ ವಿಜಯ್.ಪೆರಂಬೂರು ಉಳಿಸಿಕೊಂಡು ತಿರುಚಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ಸಾಧ್ಯತೆ; ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.