ಮಂಗಳವಾರ, 19 ಮೇ 2026
×
ADVERTISEMENT
ಒಳನೋಟ | ಗೋವಾದಂತೆ ಮಂಗಳೂರು ಬೀಚ್‌ ಪ್ರವಾಸೋದ್ಯಮಕ್ಕೂ ʼಜೀವʼ ತುಂಬಬೇಕಿದೆ..
ಒಳನೋಟ | ಗೋವಾದಂತೆ ಮಂಗಳೂರು ಬೀಚ್‌ ಪ್ರವಾಸೋದ್ಯಮಕ್ಕೂ ʼಜೀವʼ ತುಂಬಬೇಕಿದೆ..
ಫಾಲೋ ಮಾಡಿ
Published 2 ಮೇ 2026, 20:31 IST
Last Updated 2 ಮೇ 2026, 20:31 IST
Comments
ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಪ್ರವಾಸಿಗರು

ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಪ್ರವಾಸಿಗರು  

-ಪ್ರಜಾವಾಣಿ ಚಿತ್ರ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಪಟ್ಟಣದ ಶರಾವತಿ ನದಿಯಲ್ಲಿ ದೋಣಿ ವಿಹಾರಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುವ ದೋಣಿಗಳು ಸಾಲಾಗಿ ನಿಂತಿರುವುದು

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಪಟ್ಟಣದ ಶರಾವತಿ ನದಿಯಲ್ಲಿ ದೋಣಿ ವಿಹಾರಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುವ ದೋಣಿಗಳು ಸಾಲಾಗಿ ನಿಂತಿರುವುದು

ಅಳಿವೆ ಪ್ರದೇಶಗಳ ಕಾಂಡ್ಲಾವನಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬಯಸುತ್ತಾರೆ. ಇದರಿಂದಾಗಿ ಕಾರವಾರದ ಕಾಳಿ ನದಿ, ಹೊನ್ನಾವರದ ಕಾಸರಕೋಡದ ಕಾಂಡ್ಲಾ ನಡಿಗೆ ಪ್ರವಾಸಿಗರ ನೆಚ್ಚಿನ ಆಯ್ಕೆಯಾಗುತ್ತಿದೆ. ಇದು ಕಯಾಕಿಂಗ್, ಬೋಟಿಂಗ್‌ನಂತಹ ಜಲಸಾಹಸ ಚಟುವಟಿಕೆ ಉತ್ತೇಜನಕ್ಕೆ ಪೂರಕವಾಗಿದೆ. ಆದರೆ, ಜಲಸಾಹಸ ಚಟುವಟಿಕೆಗೆ ಪರವಾನಗಿ ನೀಡಲು ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ತೋರಿಸುತ್ತಿಲ್ಲ.
-ವಿನಯ ನಾಯ್ಕ, ಹೋಮ್ ಸ್ಟೇ ಮಾಲೀಕ, ಕಾರವಾರ
ಹೊನ್ನಾವರ ಭಾಗದಲ್ಲಿ ದೋಣಿ ವಿಹಾರ, ಪ್ರವಾಸಿ ಚಟುವಟಿಕೆಗಳು ಚಿಗಿತುಕೊಂಡಿವೆ. ಮಹಾನಗರಗಳಲ್ಲಿದ್ದವರು ಊರಿಗೆ ಮರಳಿದ ಬಳಿಕ ಇಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ಯಮ ಆರಂಭಿಸಿದರು. ಕೇವಲ ನಾಲ್ಕೈದು ವರ್ಷದಲ್ಲೇ ಇಲ್ಲಿನ ದೋಣಿ ವಿಹಾರ ಚಟುವಟಿಕೆ ಪ್ರಸಿದ್ಧಿಗೆ ಬಂದಿದೆ. ಪ್ರಿ ವೆಡ್ಡಿಂಗ್ ಫೋಟೊಶೂಟ್, ದೋಣಿ ವಿಹಾರಕ್ಕೆ ಶರಾವತಿ ನದಿ ದಂಡೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಹೊನ್ನಾವರ ಪಟ್ಟಣ ವ್ಯಾಪ್ತಿಯಿಂದ ಆರಂಭಿಸಿ ಕೆಳಗಿನೂರು, ತನ್ಮಡಗಿವರೆಗೆ ನದಿಯ ಇಕ್ಕೆಲದಲ್ಲಿ ಸುಮಾರು 15 ಕಿ.ಮೀ ದೂರದವರೆಗೂ ಈ ಚಟುವಟಿಕೆ ಹೆಚ್ಚಿದೆ. ನದಿ ದಡದಲ್ಲೇ ನೂರಾರು ಹೋಮ್ ಸ್ಟೇಗಳು ನಿರ್ಮಾಣಗೊಂಡಿದೆ. ಇದರಿಂದಾಗಿ ಸಣ್ಣ ಹೋಟೆಲ್‌ಗಳು, ಅಂಗಡಿಗಳಿಗೂ ವಹಿವಾಟು ಹೆಚ್ಚುತ್ತಿದೆ.
-ಎಂ.ಎನ್. ಗುರುಪ್ರಸಾದ್, ಹೊನ್ನಾವರ
ಗೋಕರ್ಣಕ್ಕೆ ನಿರೀಕ್ಷೆಗೂ ಮೀರಿ ಪ್ರವಾಸಿಗರು ಬರುತ್ತಿದ್ದಾರೆ. ಕಡಲ ತೀರಗಳಲ್ಲಿ, ಒಳ ಪ್ರದೇಶಗಳಲ್ಲಿ ರೆಸಾರ್ಟ್, ಹೋಮ್ ಸ್ಟೇಗಳು ಅಭಿವೃದ್ಧಿಯಾಗಿದೆ. ಇಲ್ಲಿನ ಶೇ 90ರಷ್ಟು ಜನರು ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳು ಅಭಿವೃದ್ಧಿಯಾಗಿಲ್ಲ. ಇದರಿಂದ ವಾಹನ ದಟ್ಟಣೆ ಸಮಸ್ಯೆ ಹೆಚ್ಚಿರುವ ಜೊತೆಗೆ ಒಳಚರಂಡಿ ವ್ಯವಸ್ಥೆ ಇಲ್ಲದೆ ಸ್ವಚ್ಛತೆಗೆ ತೊಡಕು ಉಂಟಾಗಿದೆ.
-ನಾಗಕುಮಾರ ಗೋಪಿ, ರೆಸಾರ್ಟ್ ಮಾಲೀಕ
ಕರಾವಳಿ ಭಾಗದಲ್ಲಿ ರೆಸಾರ್ಟ್‌, ಹೋಮ್ ಸ್ಟೇಗಳಿಂದ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದೆ. ಆದರೆ, ಇನ್ನೂ ಅವುಗಳಿಗೆ ಪರವಾನಗಿ ನೀಡುವ ಕೆಲಸ ಪ್ರವಾಸೋದ್ಯಮ ಇಲಾಖೆಯಿಂದ ಸಮರ್ಪಕವಾಗಿ ನಡೆಯುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಈ ಅಧಿಕಾರ ನೀಡಿದರೆ ಉದ್ಯಮಿಗಳಿಗೆ ಅನುಕೂಲವಾಗುತ್ತದೆ.
-ಜಾರ್ಜ್ ಫರ್ನಾಂಡಿಸ್, ಉದ್ಯಮಿ
ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಪ್ರವಾಸಿಗರ ಮೋಜು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಪ್ರವಾಸಿಗರ ಮೋಜು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
 ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಪ್ರವಾಸಿಗರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
 ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಪ್ರವಾಸಿಗರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಉಡುಪಿ ಜಿಲ್ಲೆಯ ಪಡುಬಿದ್ರಿಯ ಬ್ಲೂಫ್ಲಾಗ್ ಕಡಲತೀರ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಉಡುಪಿ ಜಿಲ್ಲೆಯ ಪಡುಬಿದ್ರಿಯ ಬ್ಲೂಫ್ಲಾಗ್ ಕಡಲತೀರ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಉಡುಪಿ ಜಿಲ್ಲೆ ಪಡುಬಿದ್ರಿಯ ಬ್ಲೂಫ್ಲಾಗ್ ಕಡಲತೀರದಲ್ಲಿ ಜೀವರಕ್ಷರರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಉಡುಪಿ ಜಿಲ್ಲೆ ಪಡುಬಿದ್ರಿಯ ಬ್ಲೂಫ್ಲಾಗ್ ಕಡಲತೀರದಲ್ಲಿ ಜೀವರಕ್ಷರರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಒಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಪ್ರವಾಸಿಗರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಒಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಪ್ರವಾಸಿಗರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಪ್ರವಾಸಿಗರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT