ಶುಕ್ರವಾರ, 17 ಏಪ್ರಿಲ್ 2026
×
ADVERTISEMENT
ಒಳನೋಟ: ಸಾಯುತ್ತಿರುವ ಜೀವ ನದಿಗಳು!
ಒಳನೋಟ: ಸಾಯುತ್ತಿರುವ ಜೀವ ನದಿಗಳು!
ಕೈಗಾರಿಕೆ, ಕೃಷಿ, ಮಾನವ ತ್ಯಾಜ್ಯದಿಂದ ಅವಸಾನದತ್ತ ನಾಡಿನ ಜೀವ ನಾಡಿಗಳು
ಫಾಲೋ ಮಾಡಿ
Published 21 ಮಾರ್ಚ್ 2026, 23:30 IST
Last Updated 21 ಮಾರ್ಚ್ 2026, 23:30 IST
Comments
ಕೊಪ್ಪಳ ಜಿಲ್ಲೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ತುಂಗಭದ್ರಾ ನದಿಯಲ್ಲಿ ಬಿಸಾಡಿರುವ ವಸ್ತುಗಳಿಂದ ನದಿ ಚರಂಡಿಯಂತಾಗಿರುವುದು

ಕೊಪ್ಪಳ ಜಿಲ್ಲೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ತುಂಗಭದ್ರಾ ನದಿಯಲ್ಲಿ ಬಿಸಾಡಿರುವ ವಸ್ತುಗಳಿಂದ ನದಿ ಚರಂಡಿಯಂತಾಗಿರುವುದು

ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಕೃಷ್ಣಾ– ಮಲಪ್ರಭಾ ನದಿ ಸಂಗಮ ಸ್ಥಾನದಲ್ಲಿ ಕಂಡುಬಂದ ಹರಕಲು ಬಟ್ಟೆಗಳ ರಾಶಿ

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಕೃಷ್ಣಾ– ಮಲಪ್ರಭಾ ನದಿ ಸಂಗಮ ಸ್ಥಾನದಲ್ಲಿ ಕಂಡುಬಂದ ಹರಕಲು ಬಟ್ಟೆಗಳ ರಾಶಿ

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಜನ ಎಸೆದುಹೋದ ವ್ಯರ್ಥ ವಸ್ತುಗಳು

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಜನ ಎಸೆದುಹೋದ ವ್ಯರ್ಥ ವಸ್ತುಗಳು

ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್‌ ಬಳಿ ಕಾವೇರಿ ನದಿಯ ಒಡಲು ಸೇರುತ್ತಿರುವ ಒಳಚರಂಡಿಯ ಕೊಳಚೆ ನೀರು

ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್‌ ಬಳಿ ಕಾವೇರಿ ನದಿಯ ಒಡಲು ಸೇರುತ್ತಿರುವ ಒಳಚರಂಡಿಯ ಕೊಳಚೆ ನೀರು

ಶಿವಮೊಗ್ಗದ ಭೀಮನ ಮಡು ಬಳಿ ತುಂಗೆಯ ಒಡಲಿಗೆ ಒಳಚರಂಡಿಯ ಸಂಪರ್ಕ 
ಶಿವಮೊಗ್ಗದ ಭೀಮನ ಮಡು ಬಳಿ ತುಂಗೆಯ ಒಡಲಿಗೆ ಒಳಚರಂಡಿಯ ಸಂಪರ್ಕ 
ಕಾವೇರಿ ನದಿ ಒಡಲಿಗೆ ಕೊಳಚೆ ನೀರು ನೇರವಾಗಿ ಸೇರುತ್ತಿದೆ. ಶ್ರೀರಂಗಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ರೂಪಿಸಿದ್ದರೂ ಮಲಿನ ನೀರು ನದಿಗೆ ಸೇರುವುದು ತಪ್ಪಿಲ್ಲ. ನದಿ ಚರಂಡಿಯಂತಾಗಿದೆ. ನದಿಯಲ್ಲಿ ಸ್ನಾನ ಮಾಡುವುದನ್ನೇ ನಿಲ್ಲಿಸಿದ್ದೇನೆ.
–ಗಣೇಶ ಸ್ವರೂಪಾನಂದಗಿರಿ, ಗಂಜಾಂ ಆದಿ ಶಂಕರ ಮಠದ ಸ್ವಾಮಿ ಶ್ರೀರಂಗಪಟ್ಟಣ
ಶೃಂಗೇರಿಯಿಂದ ಮಂತ್ರಾಲಯದವರೆಗಿನ 630 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಚರಂಡಿ ನೀರನ್ನು ಸ್ವಚ್ಛಗೊಳಿಸಿ ತುಂಗಭದ್ರಾ ನದಿಗೆ ಬಿಡುವ ಸಾಮಾನ್ಯ ಕೆಲಸವೂ ಆಗಿಲ್ಲ. ಇದು ನದಿಯ ಆವಸ್ಥೆಗೆ ಹಿಡಿದ ಕೈಗನ್ನಡಿ.
–ಪ್ರೊ.ಬಿ.ಎಂ.ಕುಮಾರಸ್ವಾಮಿ, ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಶಿವಮೊಗ್ಗ
ಅರ್ಕಾವತಿ ನದಿ ಪುನಶ್ಚೇತನ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ. ಕೈಗಾರಿಕೆಗಳ ತ್ಯಾಜ್ಯ ನದಿಗೆ ಕಣ್ಣೆದುರೇ ಸೇರುತ್ತಿದ್ದರೂ ಅದನ್ನು ತಡೆಯಲು ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿಲ್ಲ. ನದಿಯನ್ನು ಮಾಲಿನ್ಯ ಮುಕ್ತಗೊಳಿಸುವ ಬದ್ಧತೆ ಯಾರಲ್ಲೂ ಕಾಣಿಸುತ್ತಿಲ್ಲ.
–ಆರ್.ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ರಾಜ್ಯದಲ್ಲಿರುವ ನದಿಗಳಿಗೆ ಯಾವ ರೀತಿಯ ಮಾಲಿನ್ಯ ಸೇರುತ್ತಿದೆ ಎಂಬುದನ್ನು ಪರಿಗಣಿಸಿ ಆಯ್ದ ಸ್ಥಳಗಳಲ್ಲಿ ನದಿ ನೀರು ಗುಣಮಟ್ಟ ತಪಾಸಣೆ ಘಟಕಗಳನ್ನು ಅಳವಡಿಸಲಾಗುತ್ತದೆ. ಅದರ ವರದಿಯನ್ವಯ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗುತ್ತದೆ.
–ಪಿ.ಎಂ. ನರೇಂದ್ರಸ್ವಾಮಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಕಲಬುರಗಿ ಜಿಲ್ಲೆಯಲ್ಲಿರುವ ಎಂಟೂ ಸಿಮೆಂಟ್ ಕಾರ್ಖಾನೆಗಳು ಸುರಕ್ಷಾ ನಿಯಮಗಳ ‍ಪಾಲಿಸಲು ವಿಫಲವಾಗಿವೆ. ಪರಿಶಿಲನೆ ನಡೆಸಿ ಅಷ್ಟೂ ಕಾರ್ಖಾನೆಗಳನ್ನು ಮುಚ್ಚಲು ಶಿಫಾರಸು ಮಾಡಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದ್ದು ಅಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಬೇಕು.
–ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT