ಮಂಗಳೂರಿನ ಗುಜ್ಜರ ಕೆರೆಯ ಪವಿತ್ರ ತೀರ್ಥಕ್ಕೆ ಕೊಳಚೆ ನೀರು ನಿರಂತರವಾಗಿ ಬಂದು ಸೇರುತ್ತಿದೆ. ಇದನ್ನು ತಪ್ಪಿಸಿ, ಜಲ ಶುದ್ಧೀಕರಣಗೊಳಿಸಿದರೆ, ಬೇಸಿಗೆಯಲ್ಲಿ ನಗರದ ಜಲಬವಣೆ ತೀರಿಸಬಹುದು
ಪಿ.ನೇಮು ಕೊಟ್ಟಾರಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ,ಮಂಗಳೂರು
ಒಳಚರಂಡಿಯ ಕೊಳಚೆ ನೀರು ಕೆರೆ ಹಾಗೂ ನಾಲೆಗಳ ಒಡಲು ಸೇರುತ್ತಿದೆ. ಮಲ, ಮೂತ್ರ ವಿಸರ್ಜನೆಯ ನೀರನ್ನು ಕೆರೆ, ಕಾಲುವೆಗಳಿಗೆ ಹರಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆಯವರೇ ಕೆರೆಯನ್ನು ಬಳಸಿಕೊಳ್ಳುತ್ತಿದ್ದರೂ ಅದರ ಸಂರಕ್ಷಣೆ ನಡೆದಿಲ್ಲ
ಮಂಗಲ ಎಂ. ಯೋಗೇಶ್, ಪರಿಸರ ಸಂಸ್ಥೆ ಅಧ್ಯಕ್ಷ, ಮಂಡ್ಯ
ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಮಹಾ ರಾಜಕಾಲುವೆಯಾಗಿದ್ದ ಪಾರಂಪರಿಕ ಪೂರ್ಣಯ್ಯ ನಾಲೆಯನ್ನೇ ಇಲ್ಲವಾಗಿಸಲಾಗುತ್ತಿದೆ. ಜಯನಗರದಲ್ಲಿದ್ದ 25 ಎಕರೆಯ ಮಳಲವಾಡಿ ಕೆರೆ ಮಾಯವಾಗಿದೆ.
ಯು.ಎನ್.ರವಿಕುಮಾರ್ ,ಪರಿಸರ ತಜ್ಞ, ಮೈಸೂರು
ಬೇರೆ ಕಾಮಗಾರಿಗೆಂದು ಕೆರೆ ಮಣ್ಣು ತುಂಬಿಕೊಂಡಿದ್ದಾರೆ. ನೀರು ಬಳಕೆದಾರರ ಸಂಘಗಳು ಕ್ರಿಯಾಶೀಲವಾಗಿಲ್ಲ. ನೀರು ಬೇಕು ಎನ್ನುವುದಾಗಲೀ, ಕೆರೆ ಕಟ್ಟೆ ಸಂರಕ್ಷಣೆಗೆ ಇಲ್ಲಿವರೆಗೂ ದನಿ ಎತ್ತಿಲ್ಲ
ಎನ್.ಎಲ್.ಭರತ್‌ರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ, ಮಂಡ್ಯ