ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಬೆಡ್‌ಶೀಟ್ ಒದಗಿಸದಿರುವುದು
ರೋಗಿಗಳೇ ಇಲ್ಲದೇ ಬಿಕೊ ಎನ್ನುತ್ತಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕು ಆಸ್ಪತ್ರೆಯ ಸ್ತ್ರೀ ರೋಗಿಗಳ ವಿಭಾಗ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕ ಸಾರ್ವಜನಿಕ ಆಸ್ಪತ್ರೆ
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮೂಲಸೌಕರ್ಯಕ್ಕಾಗಿ ಕಾದಿರುವ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆ
‘ತಾಲ್ಲೂಕು ಆಸ್ಪತ್ರೆಗಳ ಬಲವರ್ಧನೆ’

‘ತಾಲ್ಲೂಕು ಆಸ್ಪತ್ರೆಗಳ ಬಲವರ್ಧನೆ’ ತಾಲ್ಲೂಕು ಆಸ್ಪತ್ರೆಗಳ ಬಲವರ್ಧನೆಗೆ ಕ್ರಮಕೈಗೊಂಡಿದ್ದು ಗುಣಮಟ್ಟದ ವೈದ್ಯಕೀಯ ಸೇವೆ ನಮ್ಮ ಆದ್ಯತೆಯಾಗಿದೆ. ದಿನದ ಎಲ್ಲ ಅವಧಿ ವೈದ್ಯರು ಲಭ್ಯವಾಗವೇಕು. ಅದರಲ್ಲೂ ಹೆರಿಗೆ ಮಾಡಿಸುವ ವೈದ್ಯರ ತಂಡ 24x7 ಇರಬೇಕು. ಆದ್ದರಿಂದ ತಜ್ಞ ವೈದ್ಯರ ಮರು ಹೊಂದಾಣಿಕೆ ಮಾಡಿದ್ದೇವೆ. ಈ ಕ್ರಮದಿಂದ ತಾಯಿ–ಮಗುವಿನ ಆರೈಕೆಯ ಗುಣಮಟ್ಟ ಸುಧಾರಣೆಯಾಗುವ ಜತೆಗೆ ತಾಯಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಲಿದೆ. ಅಗತ್ಯ ಸಿಬ್ಬಂದಿಯನ್ನೂ ಒದಗಿಸಲಾಗುತ್ತಿದೆ. ನೂತನ ಮಾದರಿ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಸಿಬ್ಬಂದಿಯ ಸೇವೆ ಸರಿಯಾದ ರೀತಿಯಲ್ಲಿ ಜನರಿಗೆ ಸಿಗುವಂತೆ ಮಾಡಲಾಗಿದೆ. ವ್ಯವಸ್ಥೆಯ ಸುಧಾರಣೆಗೆ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ