

ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ಮಲ್ನಾಡು ಗ್ರಾಮದಲ್ಲಿ ಮಳೆಗಾಲದಲ್ಲಿ ಕಂಡು ಬರುವ ಸ್ಥಿತಿ

ಕಾಲು ಸಂಕವನ್ನು ದಾಟಿಕೊಂಡು ಮನೆಗೆ ತೆರಳುತ್ತಿರುವ ಜನ :ಪ್ರಜಾವಾಣಿ ಚಿತ್ರ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಮಿನಗರದಿಯಲ್ಲಿ ರಸ್ತೆ ಮಧ್ಯದಲ್ಲಿ ವಿದ್ಯಾರ್ಥಿಗಳನ್ನು ಹಳ್ಳ ದಾಟಿಸುತ್ತಿರುವ ಪೋಷಕರು



ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ 300 ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪಿವೆ. ಇದಕ್ಕೆ ₹300 ಕೋಟಿ ಅನುದಾನ ಬೇಕಿದೆ. ಕೇಂದ್ರ ಸರ್ಕಾರದಿಂದ ಪರಿಹಾರಾತ್ಮಕ ಅರಣ್ಯಾಭಿವೃದ್ಧಿ ನಿಧಿ ನಿರ್ವಹಣಾ ಮತ್ತು ಯೋಜನಾ ಪ್ರಾಧಿಕಾರದ(ಸಿಎಎಂಪಿಎ) ಮೂಲಕ ಬರಬೇಕಿರುವ ₹500 ಕೋಟಿ ಅನುದಾನ ಕೇಳಲಾಗಿದೆ. ಹಂತ–ಹಂತವಾಗಿ ಸ್ಥಳಾಂತರ ಮಾಡಲಾಗುವುದು.–ಈಶ್ವರ ಬಿ.ಖಂಡ್ರೆ ಅರಣ್ಯ ಸಚಿವ

ಸರ್ಕಾರವೇ ಇವರ ಜಾಗ ಸ್ವಾಧೀನಕ್ಕೆ ಪಡೆದು ಪುನರ್ವಸತಿ ಪ್ಯಾಕೇಜ್ ಕಲ್ಪಿಸಿದರೆ ಮೂರ್ನಾಲ್ಕು ಪಟ್ಟು ಪರಿಹಾರ ನೀಡಬೇಕಾಗುತ್ತದೆ. ಅದಕ್ಕಾಗಿ ಮೂಲಭೂತ ಸೌಲಭ್ಯ ನೀಡದೆ ಹಿಂಸೆ ನೀಡಿ ಸ್ವಇಚ್ಛೆಯಿಂದ ಹೊರ ಹೋಗುವಂತೆ ಮಾಡುತ್ತಿದೆ. ಇದು ಘೋರ ಅಪರಾಧ. ಇನ್ನು ಪರಿಹಾರಕ್ಕೆ 2005ರ ಎಸ್‌ಆರ್ ದರ ನಿಗದಿ ಮಾಡಿ ಮತ್ತೊಂದು ಮೋಸ ಮಾಡುತ್ತಿದೆ.–ಕಲ್ಕುಳಿ ವಿಠಲ ಹೆಗ್ಗಡೆ ಅಧ್ಯಕ್ಷರು ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ

ವಡ್ಡನಕರ್ಕೆಯಲ್ಲಿ ಏಳು ಮನೆಗಳಿದ್ದು ಐದು ಮನೆಗಳಲ್ಲಿ ಒಂಟಿ ಹೆಂಗಸರು ಉಳಿದಿದ್ದೇವೆ. ಹುಲಿ ನಾಲ್ಕು ದನುಗಳನ್ನು ತಿಂದಿದೆ. ಒಂಟಿಯಾಗಿ ಓಡಾಡಬೇಕು ಮಳೆಗಾಲದಲ್ಲಿ ಹೊಳೆ ದಾಟಿ ಪೇಟೆಗೆ ಹೋಗಲು ಸಾಧ್ಯವಿಲ್ಲ. ಈ ಜೀವನಕ್ಕೆ ಸರ್ಕಾರ ಆದಷ್ಟು ಬೇಗ ಮುಕ್ತಿ ದೊರಕಿಸಿಕೊಡಬೇಕು.– ಆಶಾ ವಡ್ಡನಕರ್ಕೆ ನಿವಾಸಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೂಕ್ಷ್ಮ ವಲಯ ಮತ್ತು ಕಂದಾಯ ಭೂಮಿಯಲ್ಲಿರುವ ಎಲ್ಲಾ ಜಮೀನು ಮತ್ತು ಮನೆಗಳಿಗೆ ಪುನರ್ವಸತಿ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತ್ವರಿತವಾಗಿ ನೀಡಬೇಕು–ದಿನೇಶ್ ಹೆಗ್ಗಡೆ ಸಂತ್ರಸ್ತರ ಪರ ಹೋರಾಟಗಾರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪುನರ್ವಸತಿ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. 2013ರ ಭೂಸ್ವಾದೀನ ಕಾಯ್ದೆಯಂತೆ 1ಕ್ಕೆ 4 ಪಟ್ಟು ಹೆಚ್ಚು ಪರಿಹಾರ ನೀಡಬೇಕು.–ಮಾತೋಳ್ಳಿ ಸುನೀಲ್ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ವಸತಿ ಹೋರಾಟ ಸಮಿತಿ ಅಧ್ಯಕ್ಷ
ಸದ್ಯ ಸರ್ಕಾರದಿಂದ ಅನುದಾನ ಬಾರದ ಕಾರಣ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಪುನರ್ವಸತಿ ಕಾರ್ಯ ವಿಳಂಬವಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ಕೂಡಲೇ ಪುನರ್ವಸತಿ ಕಾರ್ಯ ಮತ್ತೆ ಆರಂಭಿಸಲಾಗುವುದು.–ಶಿವರಾಮ್ ಬಾಬು ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ
ಪೂರಕ ಮಾಹಿತಿ: ನವೀನ್‌ಕುಮಾರ್ ಜಿ., ವಿಕ್ರಂ ಕಾಂತಿಕೆರೆ, ಕೆ.ಎನ್.ರಾಘವೇಂದ್ರ (ಶೃಂಗೇರಿ).– ಚಂದ್ರಶೇಖರ್ ಕೊಡಿಗೆ ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.