ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

ಒಳನೋಟ: ಸವಾಲು ಮೆಟ್ಟಿ ಉದ್ಯಮ ಕಟ್ಟಿ

ಅಡೆತಡೆಗಳ ಮೀರಿ ಉದ್ಯಮ ಕಟ್ಟಿದ ಗಟ್ಟಿಗಿತ್ತಿಯರು
Published : 7 ಮಾರ್ಚ್ 2026, 20:01 IST
Last Updated : 7 ಮಾರ್ಚ್ 2026, 20:01 IST
ADVERTISEMENT
ಫಾಲೋ ಮಾಡಿ
Comments
ಸಬಲೀಕರಣವೇ ಉದ್ದೇಶ
ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶ. ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ಹಾಗೆಯೇ ಮಹಿಳಾ ಉದ್ಯೋಗಿಗಳು ಹೆಚ್ಚಿರುವ ಸಂಸ್ಥೆ, ಉದ್ಯಮಗಳಿಗೆ ಹೆಚ್ಚುವರಿಯಾಗಿ ವಿಶೇಷ ರಿಯಾಯಿತಿಗಳನ್ನೂ ಘೋಷಿಸಲಾಗಿದೆ.
– ಎಂ.ಬಿ. ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ
ಕೈಗಾರಿಕಾ ಪಾರ್ಕ್‌ನಲ್ಲಿ ಮಹಿಳಾ ಮೀಸಲಾತಿ ನೀಡಿ
ಈ ಹಿಂದೆ ಮಹಿಳಾ ಉದ್ಯಮಿಗಳ ಸಂಖ್ಯೆ ಶೇ 10–12ರಷ್ಟಿತ್ತು. ಈಗ ಆ ಪ್ರಮಾಣ ಶೇ 23ರಷ್ಟು ಆಗಿದೆ. ಆದರೆ, ಅಸಂಘಟಿತ ವಲಯದ ಮಹಿಳಾ ಉದ್ಯಮಿಗಳನ್ನೂ ಒಳಗೊಂಡಲ್ಲಿ ಈ ಪ್ರಮಾಣ ಇನ್ನೂ ಹೆಚ್ಚುತ್ತದೆ. ಟೈರ್–2,3 ನಗರಗಳಲ್ಲೂ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಎಫ್‌ಕೆಸಿಸಿಐನಲ್ಲಿ ಈಗಿನ ಸದಸ್ಯರ ಪೈಕಿ ಶೇ 15ರಷ್ಟು ಮಂದಿ ಮಹಿಳೆಯರು ಇದ್ದಾರೆ. ರಾಜ್ಯದ ಹೊಸ ಕೈಗಾರಿಕಾ ಪಾರ್ಕ್‌ಗಳಲ್ಲಿ ಶೇ 30ರಷ್ಟು ಸ್ಥಳಾವಕಾಶವನ್ನು ಮಹಿಳಾ ಉದ್ಯಮಿಗಳಿಗೆ ಮೀಸಲಿರಿಸಬೇಕು. ಮಹಿಳಾ ಉದ್ಯಮಗಳಿಗೆ ಸೇವಾ ವಲಯದಲ್ಲಿ ರಿಯಾಯಿತಿ ದರಕ್ಕೆ ಸಾಲ ಕೊಡುವ ವ್ಯವಸ್ಥೆಯನ್ನು ತಯಾರಿಕಾ ವಲಯದ ಮಹಿಳಾ ಉದ್ಯಮಿಗಳಿಗೂ ಸರ್ಕಾರ ವಿಸ್ತರಿಸಬೇಕು.
– ಉಮಾರೆಡ್ಡಿ, ಅಧ್ಯಕ್ಷೆ, ಎಫ್‌ಕೆಸಿಸಿಐ
ಸ್ವಾವಲಂಬನೆಗೆ ‘ಅವೇಕ್‌’
‘ಅವೇಕ್’ನಿಂದಲೇ ರಾಜ್ಯದಲ್ಲಿ ನೂರಾರು ಮಹಿಳೆಯರು ಸ್ವಾವಲಂಬನೆಯ ಬದುಕು ಸಾಗಿಸುತ್ತಿದ್ದಾರೆ. ‘ಅವೇಕ್‌’ನಲ್ಲಿ ಐದರಿಂದ ಹತ್ತು ಕೆಜಿಯಷ್ಟು ಆಹಾರೋತ್ಪನ್ನಗಳನ್ನು ತಯಾರಿಸಲು ಅವಕಾಶವಿದೆ. ರಾಜ್ಯದಲ್ಲಿ ಅಂದಾಜು ಶೇ 25ರಷ್ಟು ಮಹಿಳಾ ಉದ್ಯಮಿಗಳಿದ್ದಾರೆ. ಜಿಎಸ್‌ಟಿ ಮತ್ತಿತರ ಕಾರಣಕ್ಕೆ ನೋಂದಣಿಯಾಗದ ಮಹಿಳಾ ಉದ್ಯಮಿಗಳು ಅನೇಕರಿದ್ದಾರೆ. ಅವರನ್ನೂ ಸೇರಿಸಿದರೆ ಈ ಪ್ರಮಾಣ ಹೆಚ್ಚುತ್ತದೆ. ಉದ್ಯಮದಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಲು ಕೌಶಲದ ಜತೆಗೆ ತಾಳ್ಮೆಯೂ ಅಗತ್ಯ. ಕಷ್ಟಪಡಲೂ ರೆಡಿ ಇರಬೇಕು.
– ಭುವನೇಶ್ವರಿ, ಅಧ್ಯಕ್ಷೆ ‘ಅವೇಕ್’
ಮಹಿಳಾ ಉದ್ಯಮಿಗಳಿಗೆ ಸಹಕಾರ ಏನೇನು?
ಪೂರಕ ಮಾಹಿತಿ ಮತ್ತು ಸಂದರ್ಶನ: ಪವಿತ್ರಾ ಭಟ್‌, ವಿದ್ಯಾ ಹಂಚಿನಮನಿ, ಕೀರ್ತಿಕುಮಾರಿ, ಸಿಂಧು ಕೆ.ಟಿ., ಅಶ್ವಿನಿ ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT