ಮಂಗಳವಾರ, ಅಕ್ಟೋಬರ್ 26, 2021
27 °C
ಭಾರತದ ಶೈಕ್ಷಣಿಕ ವರದಿ–2021

ಆಳ–ಅಗಲ: ದೇಶದಲ್ಲಿ ಶಿಕ್ಷಣದ ಸ್ಥಿತಿಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶಿಕ್ಷಕರೂ ಇಲ್ಲ, ತರಗತಿಯೂ ಇಲ್ಲ’ (ನೋ ಟೀಚರ್‌, ನೋ ಕ್ಲಾಸ್‌) ಎಂಬ ಹೆಸರಿನಲ್ಲಿ ಭಾರತದಲ್ಲಿ ಶಿಕ್ಷಣದ ಸ್ಥಿತಿ 2021ರ ವರದಿಯನ್ನು ಯುನೆಸ್ಕೊ ಬಿಡುಗಡೆ ಮಾಡಿದೆ. ಕೋವಿಡ್‌ ಕಾಲದಲ್ಲಿ ಶಾಲಾ ಶಿಕ್ಷಣ ಸಂಪೂರ್ಣವಾಗಿ ಸ್ಥಗಿತವಾದ ಹಿನ್ನೆಲೆಯಲ್ಲಿ ವರದಿಗೆ ಈ ಹೆಸರು ಇರಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಬೋಧನೆ ಮತ್ತು ಕಲಿಕೆಯನ್ನು ಕೇಂದ್ರವಾಗಿ ಇರಿಸಿಕೊಂಡು ವರದಿಯನ್ನು ಸಿದ್ಧಪಡಿಸಲಾಗಿದೆ. ಶಾಲೆಗಳು ಸ್ಥಗಿತವಾದ ಕಾರಣ ಆನ್‌ಲೈನ್‌ ತರಗತಿಗಳಿಗೆ ಒತ್ತು ಕೊಡಲಾಗಿತ್ತು. ಹಾಗಾಗಿ, ಅಂತರ್ಜಾಲ, ಸ್ಮಾರ್ಟ್‌ ಫೋನ್‌ ಮತ್ತು ಇತರ ಸಂವಹನ ಸಾಧನಗಳ ಲಭ್ಯತೆಯ ಬಗ್ಗೆ ವರದಿಯು ಬೆಳಕು ಚೆಲ್ಲಿದೆ. ಶಿಕ್ಷಕರ ಸ್ಥಿತಿ ಹೇಗಿದೆ, ಶಾಲೆಗಳ ಮೂಲಸೌಕರ್ಯದ ಪರಿಸ್ಥಿತಿ ಬಗ್ಗೆಯೂ ವರದಿಯಲ್ಲಿ ವಿವರಗಳು ಇವೆ

****

ಶಾಲಾ ಶೌಚಾಲಯಗಳ ಸ್ಥಿತಿಗತಿ (ಶೇ)

ರಾಜ್ಯ;ಬಾಲಕರ ಶೌಚಾಲಯ;ಬಾಲಕಿಯರ ಶೌಚಾಲಯ

ಚಂಡೀಗಡ;99;100

ಗೋವಾ;99;99

ಕೇರಳ;97;98

ಬಿಹಾರ;96;97

ಗುಜರಾತ್;96;97

ಆಂಧ್ರ ಪ್ರದೇಶ;60;68

ಮೇಘಾಲಯ;63;59

ಅರುಣಾಚಲ ಪ್ರದೇಶ;64;65

ಅಸ್ಸಾಂ;66;70

ತ್ರಿಪುರ;74;76

ಕರ್ನಾಟಕ;88;91

ಒಟ್ಟಾರೆ ಭಾರತ;87;90

*ಶಾಲೆಗಳು ಹೊಂದಿರಬೇಕಾದ ಅತಿಅಗತ್ಯ ಮೂಲಸೌಭ್ಯಗಳಲ್ಲಿ ಶೌಚಾಲಯ ಪ್ರಮುಖ. ದೇಶದ ಗ್ರಾಮೀಣ ಭಾಗದ ಶೇ 87 ಶಾಲೆಗಳಲ್ಲಿ ಬಾಲಕರಿಗೆ ಈ ಸೌಲಭ್ಯವಿದೆ. ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ 89. ಗ್ರಾಮೀಣ ಭಾಗದ 90ರಷ್ಟು ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳು ಇವೆ. ನಗರ ಪ್ರದೇಶದ ಶೇ 92ರಷ್ಟು ಶಾಲೆಗಳು ಈ ಸೌಲಭ್ಯ ಒದಗಿಸಿವೆ 

*ಈಶಾನ್ಯ ರಾಜ್ಯವಾದ ಮೇಘಾಲಯವು ಈ ವಿಚಾರದಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ಹಿಂದಿದೆ. ಜೊತೆಗೆ ಆಂಧ್ರ ಪ್ರದೇಶ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳಲ್ಲಿ ಇನ್ನೂ ಸುಧಾರಣೆ ಕಾಣಬೇಕಿದೆ 

*ಚಂಡೀಗಡ, ಗೋವಾ, ಗುಜರಾತ್, ಬಿಹಾರ, ಕೇರಳ ರಾಜ್ಯಗಳ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳಿವೆ.  

***

ಶಾಲೆಗಳಲ್ಲಿ ಅಂತರ್ಜಾಲ ಸೌಲಭ್ಯ (ಶೇ)

ಚಂಡೀಗಡ;97

ಕೇರಳ;88

ಲಕ್ಷದ್ವೀಪ;84

ದೆಹಲಿ;82

ಪುದುಚೇರಿ;67

ತ್ರಿಪುರಾ;3

ಛತ್ತೀಸಗಡ;5

ಅಸ್ಸಾಂ;6

ಒಡಿಶಾ;6

ಪಶ್ಚಿಮ ಬಂಗಾಳ;7

ಒಟ್ಟಾರೆ ಭಾರತ;19

ಕರ್ನಾಟಕ;12

*ಶಾಲೆಗಳಿಗೆ ಅಂತರ್ಜಾಲ ಒದಗಿಸುವ ವಿಚಾರದಲ್ಲಿ ಕರ್ನಾಟಕ ಭಾರಿ ಹಿಂದುಳಿದಿದೆ. ರಾಜ್ಯದ ಒಟ್ಟು ಶಾಲೆಗಳ ಪೈಕಿ ಶೇ 12ರಷ್ಟು ಶಾಲೆಗಳಲ್ಲಿ ಮಾತ್ರ ಈ ಸವಲತ್ತು ಇದೆ. ಗ್ರಾಮೀಣ ಭಾಗದ ಕೇವಲ ಶೇ 7ರಷ್ಟು ಹಾಗೂ ನಗರದ ಶೇ 25ರಷ್ಟು ಶಾಲೆಗಳು ಮಾತ್ರ ಇಂಟರ್ನೆಟ್ ಸಂಪರ್ಕದಲ್ಲಿವೆ. ದುರ್ಗಮ ಕಣಿವೆಗಳು ಹಾಗೂ ಆಗಾಗ್ಗೆ ಭಯೋತ್ಪಾದಕ ದಾಳಿ ಎದುರಿಸುವ  ಜಮ್ಮು–ಕಾಶ್ಮೀರದಲ್ಲಿ ಈಗಾಗಲೇ ಶೇ 12ರಷ್ಟು ಶಾಲೆಗಳಿಗೆ ಇಂಟರ್‌ನೆಟ್ ಸೇವೆ ಒದಗಿಸಲಾಗಿದೆ. 

*ಬಿಹಾರದಲ್ಲಿ ಶೇ 7ರಷ್ಟು, ಮಧ್ಯಪ್ರದೇಶದಲ್ಲಿ ಶೇ 11ರಷ್ಟು, ಆಂಧ್ರಪ್ರದೇಶದಲ್ಲಿ ಶೇ 17ರಷ್ಟು ಶಾಲೆಗಳು ಮಾತ್ರ ಸವಲತ್ತು ಪಡೆದಿದ್ದು ತೀರಾ ಹಿಂದುಳಿದಿವೆ. ತ್ರಿಪುರಾ, ಛತ್ತೀಸಗಡ, ಅಸ್ಸಾಂ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಇಂಟರ್ನೆಟ್ ಸೌಲಭ್ಯ ತೀರಾ ಕಡಿಮೆ ಮಟ್ಟದಲ್ಲಿದೆ. ದೇಶದಾದ್ಯಂತ ಶೇ 19ರಷ್ಟು ಶಾಲೆಗಳಲ್ಲಿ ಮಾತ್ರ ಈ ಸವಲತ್ತು ಇದೆ

***

ಶಾಲೆಗಳಲ್ಲಿ ವಿದ್ಯುತ್ ಸೌಲಭ್ಯ (ಶೇ)

ಮೇಘಾಲಯ;19

ತ್ರಿಪುರಾ;34

ಒಡಿಶಾ;38

ಅರುಣಾಚಲ ಪ್ರದೇಶ;40

ಮಣಿಪುರ;48

*ಒಟ್ಟಾರೆ ಭಾರತದ ಶೇ 74ರಷ್ಟು ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿದೆ. ಗ್ರಾಮೀಣ ಭಾಗದ ಶೇ 71ರಷ್ಟು ಹಾಗೂ ನಗರ ಭಾಗದ ಶೇ 91ರಷ್ಟು ಶಾಲೆಗಳು ಈ ಸೌಲಭ್ಯ ಪಡೆದಿವೆ. ಕರ್ನಾಟಕದ ಶೇ 89ರಷ್ಟು ಶಾಲೆಗಳಲ್ಲಿ ವಿದ್ಯುತ್ ಇದೆ. 

*ತಮಿಳುನಾಡು, ಪಂಜಾಬ್, ಲಕ್ಷದ್ವೀಪ, ಚಂಡೀಗಡ, ದೆಹಲಿ, ಗೋವಾ, ಗುಜರಾತ್ ರಾಜ್ಯಗಳು ಶೇಕಡ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿವೆ.

 

***

ತರಗತಿ ಕೋಣೆಯ ಸ್ಥಿತಿಗತಿ (ಶೇ)

ಅಸ್ಸಾಂ;28

ತ್ರಿಪುರಾ;37

ಮಣಿಪುರ;40

ಪಶ್ಚಿಮ ಬಂಗಾಳ;41

ಮಿಜೋರಾಂ;42

ದಮನ್ ದಿಯು;92

ಒಡಿಶಾ;90

ಪುದುಚೇರಿ;90

ದೆಹಲಿ;88

ಗೋವಾ;87

ಕರ್ನಾಟಕ;63

ಒಟ್ಟಾರೆ ಭಾರತ;65

*ಮಕ್ಕಳ ಕಲಿಕೆಗೆ ಪ್ರಶಸ್ತವಾದ ಕಲಿಕಾ ಕೋಣೆಗಳ ಸ್ಥಿತಿಗತಿ ದೇಶದ ವಿವಿಧ ರಾಜ್ಯಗಳಲ್ಲಿ ಭಿನ್ನತೆಯಿದೆ. ದೇಶದ ಒಟ್ಟಾರೆ ತರಗತಿ ಕೋಣೆಗಳ ಗುಣಮಟ್ಟ ಶೇ 65ರಷ್ಟಿದ್ದರೆ, ಕರ್ನಾಟದ ಪ್ರಮಾಣ ಶೇ 63 ಮಾತ್ರ. ದಮನ್ ದಿಯು ಎಲ್ಲಕ್ಕಿಂತ ಮುಂದಿದೆ. ಒಡಿಶಾ, ಪುದುಚೇರಿ ಗಮನಾರ್ಹ ಸಾಧನೆ ಮಾಡಿವೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಶಾಲಾ ಕೊಠಡಿಗಳ ಗುಣಮಟ್ಟ ಅಷ್ಟಾಗಿಲ್ಲ. ಪಶ್ಚಿಮ ಬಂಗಾಳವೂ ಒಳ್ಳೆಯ ತರಗತಿ ಕೋಣೆಗಳನ್ನು ಒದಗಿಸಲು ವಿಫಲವಾಗಿದೆ 

***

ಗ್ರಂಥಾಲಯ ಲಭ್ಯತೆ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯಗಳು:

ದೆಹಲಿ: 95%

ದಿಯು ಮತ್ತು ದಾಮನ್‌: 97%

ಲಕ್ಷದ್ವೀಪ: 97%

ಮಧ್ಯಪ್ರದೇಶ: 90%

ಜಾರ್ಖಂಡ್: 89%

ಕರ್ನಾಟಕ: 88%

ತೆಲಂಗಾಣ: 88%

ಪಂಜಾಬ್‌: 88%

ಪುದುಚೇರಿ: 88%

ಹರಿಯಾಣ: 86%

ಕೇರಳ: 85%

ಗ್ರಂಥಾಲಯ ಲಭ್ಯತೆ ಪ್ರಮಾಣ ಕಡಿಮೆ ಇರುವ ರಾಜ್ಯಗಳು:

ಉತ್ತರ ಪ್ರದೇಶ: 40%

ಜಮ್ಮು ಮತ್ತು ಕಾಶ್ಮೀರ: 36%

ಬಿಹಾರ: 32%

ನಾಗಾಲ್ಯಾಂಡ್‌: 27%

ಮಣಿಪುರ: 17%

ತ್ರಿಪುರ: 15%

ಅರುಣಾಚಲ ಪ್ರದೇಶ: 13%

ಮಿಜೋರಾಂ: 10%

ಮೇಘಾಲಯ: 4%

**

6% ಕರ್ನಾಟಕದಲ್ಲಿ ಏಕ ಶಿಕ್ಷಕ ಶಾಲೆಗಳ ಪ್ರಮಾಣ

92% ಅವುಗಳ ಪೈಕಿ ಗ್ರಾಮೀಣ ಪ್ರದೇಶದಲ್ಲಿ ಇರುವ ಶಾಲೆಗಳ ಪ್ರಮಾಣ

***

ಸ್ಮಾರ್ಟ್‌ಫೋನ್ ಬಳಕೆ

ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ನಿಯಮಿತ ವಿದ್ಯುತ್‌ ಪೂರೈಕೆ ಸೌಲಭ್ಯ ಹಾಗೂ ಇಂಟರ್‌ನೆಟ್‌ ಸಂಪರ್ಕ ಪಡೆಯುವಲ್ಲಿ ನಗರ–ಗ್ರಾಮೀಣ ಶಾಲಾ ಶಿಕ್ಷಕರಲ್ಲಿ ವ್ಯತ್ಯಾಸ ಕಂಡುಬಂದಿದೆ. 

ಸ್ಮಾರ್ಟ್‌ಫೋನ್‌ ಬಳಕೆ ವಿಷಯವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತುಂಬ ಕಡಿಮೆ ವ್ಯತ್ಯಾಸವಿದೆ. ಶಿಕ್ಷಕ–ಶಿಕ್ಷಕಿಯರಲ್ಲೂ ಬಹುತೇಕ ಅಷ್ಟೇ ವ್ಯತ್ಯಾಸವಿದೆ. ಶೇ 97 ಶಿಕ್ಷಕರು ಹಾಗೂ ಶೇ 95 ಶಿಕ್ಷಕಿಯರು ಸ್ಮಾರ್ಟ್‌ಫೋನ್‌ ಹೊಂದಿದ್ದಾರೆ. ಆದರೆ, ಮನೆಯಲ್ಲಿ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಕೆ ಮಾಡುತ್ತಿರುವ ಶಿಕ್ಷಕಿಯರ ಸಂಖ್ಯೆ (ಶೇ 67), ಶಿಕ್ಷಕರಿಗಿಂತ ಹೆಚ್ಚು (ಶೇ 56) ಇದೆ.

ಸ್ಮಾರ್ಟ್‌ಫೋನ್‌ ಹೊಂದಿದವರಲ್ಲಿ ವಯಸ್ಸಿನ ಭೇದ ಕಂಡುಬಂದಿಲ್ಲ. ಆದರೆ, ಇಂಟರ್‌ನೆಟ್‌ ಸೌಲಭ್ಯ ಪಡೆಯುವಲ್ಲಿ ವ್ಯತ್ಯಾಸ ಕಂಡುಬಂದಿದೆ.  49ಕ್ಕಿಂತ ಕಡಿಮೆ ವಯಸ್ಸಿನ ಶಿಕ್ಷಕರಿಂದ ಶೇ 78–ಶೇ 81 ಇಂಟರ್‌ನೆಟ್‌ ಬಳಕೆ ಮಾಡಿದರೆ;  50 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಶಿಕ್ಷಕರಲ್ಲಿ ಇಂಟರ್‌ನೆಟ್‌ ಬಳಕೆ ಪ್ರಮಾಣ ಶೇ 61ರಷ್ಟಿದೆ.

ಶಿಕ್ಷಕರು;ನಗರ;ಗ್ರಾಮೀಣ (ಶೇ)

ಸ್ಮಾರ್ಟ್‌ಫೋನ್‌ ಹೊಂದಿದದವರು;97;94

ಲ್ಯಾ‍ಪ್‌ಟಾಪ್‌ ಹೊಂದಿದವರು;48;41

ನಾಲ್ಕೈದು ಗಂಟೆಗಿಂತ ಹೆಚ್ಚು ವಿದ್ಯುತ್‌ ವ್ಯತ್ಯಯ;8;32

ಉತ್ತಮ ಇಂಟರ್‌ನೆಟ್‌ ಸಂಪರ್ಕ;70;51

ಆಧಾರ: ಯುನೆಸ್ಕೋದ ಭಾರತದ ಶೈಕ್ಷಣಿಕ ವರದಿ–2021 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು