'ಪಠ್ಯ ಕ್ರಮದಾಚೆ ಜ್ಞಾನ ಕ್ಷಿತಿಜ ವಿಸ್ತರಿಸಿ'

7

'ಪಠ್ಯ ಕ್ರಮದಾಚೆ ಜ್ಞಾನ ಕ್ಷಿತಿಜ ವಿಸ್ತರಿಸಿ'

Published:
Updated:
Prajavani

ಆಲಮಟ್ಟಿ: ಮಗು ಪಠ್ಯಕ್ಕೆ ಸೀಮಿತವಾಗದೇ ಪಠ್ಯಕ್ರಮದಾಚೆಯೂ ತನ್ನ ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳಬೇಕು ಎನ್ನುವುದು ಪಠ್ಯಕ್ರಮ ಚೌಕಟ್ಟಿನ ಆಶಯವಾಗಿದೆ ಎಂದು ನಿವೃತ್ತ ನಿರ್ದೇಶಕ ಎಸ್.ಆರ್.ಮನಹಳ್ಳಿ ಹೇಳಿದರು.

ಆಲಮಟ್ಟಿಯ ನವೋದಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಕನ್ನಡದಲ್ಲಿ ಲಭ್ಯ ಮತ್ತು ರಚಿಸಬೇಕಿರುವ ಪಠ್ಯಪೂರಕ/ ಪೋಷಕ ಸಾಹಿತ್ಯ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಠ್ಯ ಒಂದು ಭಾಗವಾದರೆ ಪೂರಕ ನಾಲ್ಕು ಭಾಗವಾಗಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡಿರುವ ನಾವು, 1-10ನೇ ತರಗತಿ ನಂತರ ಹೊರ ಬರುವಾಗ ನಮ್ಮ ಮಗು ಏನಾಗಿರಬೇಕು ಎಂದು ನಿರ್ಧರಿಸುವುದೇ ಶೈಕ್ಷಣಿಕ ಗುರಿ. ಈ ಗುರಿ ಈಡೇರಿಕೆಗಾಗಿ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ ಇದ್ದು, ಇದರಲ್ಲಿ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಸೇರಿರುತ್ತದೆ. ಇದೇ ಕರಿಕುಲಂ’ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಹುಕ್ಕೇರಿ ತಾಲ್ಲೂಕು ಕೇಸ್ತಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಶಿವಾನಂದ ಗುಂಡಾಳಿ- ಕನ್ನಡ, ಚಡಚಣದ ಅರ್ಜನಾಳ ಸರ್ಕಾರಿ ಪ್ರೌಢಶಾಲೆಯ ಡಿ.ಕೆ.ರಗಟಿ- ಇಂಗ್ಲಿಷ್‌, ಹುನಗುಂದ ತಾಲ್ಲೂಕು ಇಂಗಳಗಿ ಪ್ರಾಥಮಿಕ ಶಾಲೆಯ ವಾಸುದೇವ ಸ್ವಾಮಿ-ವಿಜ್ಞಾನ, ಧಾರವಾಡದ ನಿವೃತ್ತ ಮುಖ್ಯ ಶಿಕ್ಷಕ ಎಂ.ವಿ.ಬಾವಿಕಟ್ಟಿ- ಗಣಿತ, ಧಾರವಾಡದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ವಾಸುದೇವ ನಾಯಕ- ಸಮಾಜ ವಿಜ್ಞಾನ ಕುರಿತು ವಿಷಯ ಮಂಡಿಸಿದರು.

ವೇದಿಕೆಯಲ್ಲಿ ಸರ್ವಾಧ್ಯಕ್ಷ ಡಾ.ಎನ್.ವಿ.ಕೊಂಗವಾಡ, ಸಂವಾದಕ ಭೂಷಣ ಪತ್ತಾರ ಇದ್ದರು. ಚಡಚಣದ ಬಿಇಓ ಮಹಾವೀರ ಮಾಲಗಾಂವೆ ಸ್ವಾಗತಿಸಿದರು. ಚಡಚಣದ ಸುನಿಲ ಯಳಮೇಲಿ ನಿರೂಪಿಸಿದರು. ಸಿದ್ಧರಾಮ ಹತ್ತಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !