ಸುಳ್ಳು ಮಾಹಿತಿ: ಇಸ್ರೇಲ್‌ ಕಂಪನಿ ನಿಷೇಧಿಸಿದ ಫೇಸ್‌ಬುಕ್‌

ಸೋಮವಾರ, ಮೇ 27, 2019
27 °C

ಸುಳ್ಳು ಮಾಹಿತಿ: ಇಸ್ರೇಲ್‌ ಕಂಪನಿ ನಿಷೇಧಿಸಿದ ಫೇಸ್‌ಬುಕ್‌

Published:
Updated:
Prajavani

ಲಂಡನ್‌: ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಗಳನ್ನು ಪೋಸ್ಟ್‌ ಮಾಡಿದ್ದಕ್ಕೆ ಇಸ್ರೇಲ್‌ ಕಂಪನಿಯೊಂದನ್ನು ಫೇಸ್‌ಬುಕ್‌ ನಿಷೇಧಿಸಿದೆ.

 ಹಲವು ದೇಶಗಳಲ್ಲಿ ನಡೆದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದ ಆರೋಪ ಎದುರಿಸುತ್ತಿರುವುದರಿಂದ ಫೇಸ್‌ಬುಕ್‌, ಸುಳ್ಳು ಮಾಹಿತಿ ಬಿತ್ತರಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತಿದೆ.

’ಆರ್ಕಿಮಿಡಿಸ್‌ ಗ್ರೂಪ್‌‘ಗೆ ನಿಷೇಧ ಹೇರಲಾಗಿದೆ. ಸುಳ್ಳು ಮಾಹಿತಿ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಈ ಕಂಪನಿ ಮಾಡಿದೆ. ಆಫ್ರಿಕಾ, ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಈ ರೀತಿಯ ಅಪಪ್ರಚಾರದಲ್ಲಿ ತೊಡಗಲಾಗಿತ್ತು ಎಂದು ಫೇಸ್‌ಬುಕ್‌ ತಿಳಿಸಿದೆ.

ಖಾತೆ ತೆರೆದಿರುವವರು ವೈಯಕ್ತಿಕ ಪರಿಚಯ ಮುಚ್ಚಿಟ್ಟಿದ್ದರು.ಆದರೆ, ಕೆಲವು ಚಟುವಟಿಕೆಗಳು ಆರ್ಕಿಮಿಡಿಸ್‌ಗೆ ಸಂಬಂಧಿಸಿದ್ದಾಗಿದ್ದವು. ಹೀಗಾಗಿ, ಆರ್ಕಿಮಿಡಿಸ್‌ ಗ್ರೂಪ್‌ ಮತ್ತು ಅದರ ಎಲ್ಲ ಅಂಗ ಸಂಸ್ಥೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !