₹5.8 ಲಕ್ಷ ವಂಚನೆ: ಫೇಸ್‌ಬುಕ್‌ ಸ್ನೇಹಿತ ಬಂಧನ

7

₹5.8 ಲಕ್ಷ ವಂಚನೆ: ಫೇಸ್‌ಬುಕ್‌ ಸ್ನೇಹಿತ ಬಂಧನ

Published:
Updated:
Deccan Herald

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ಹೇಳಿ ಯುವತಿಯೊಬ್ಬರಿಂದ ₹5.8 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಜಿ. ನವೀನ್‌ಕುಮಾರ್ (26) ಎಂಬಾತನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿವಾಸಿಯಾದ ಆರೋಪಿ, ಫೇಸ್‌ಬುಕ್‌ ಮೂಲಕ ಯುವತಿಯನ್ನು ಪರಿಚಯಿಸಿಕೊಂಡಿದ್ದ.  ಮೊಬೈಲ್ ನಂಬರ್ ಪಡೆದು ಮಾತನಾಡಲಾರಂಭಿಸಿದ್ದ. ‘ನನಗೆ ಹಲವು ಅಧಿಕಾರಿಗಳು, ರಾಜಕಾರಣಿಗಳು ಪರಿಚಯವಿದ್ದಾರೆ’ ಎಂದು ಹೇಳಿ ಉದ್ಯೋಗದ ಆಮಿಷವೊಡ್ಡಿ ಕೃತ್ಯ ಎಸಗಿದ್ದ. ಆ ಬಗ್ಗೆ ಯುವತಿ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

‘ಆರ್‌.ಟಿ.ನಗರದ ಹೆಲ್ತ್‌ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಆರೋಪಿಯ ಮಾತುಗಳನ್ನು ನಂಬಿ ಆತ ಸೂಚಿಸಿದ್ದ ಬ್ಯಾಂಕ್ ಶಾಖೆಗಳ ಖಾತೆಗಳಿಗೆ ಹಂತ ಹಂತವಾಗಿ ₹5.8 ಲಕ್ಷ ಜಮೆ ಮಾಡಿದ್ದರು. ಅದಾದ ಬಳಿಕ, ಮೊಬೈಲ್ ಸ್ವಿಚ್ಡ್ ಆಫ್‌ ಮಾಡಿಕೊಂಡು ಆರೋಪಿ ತಲೆಮರೆಸಿಕೊಂಡಿದ್ದ’ ಎಂದರು.   

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !