ಫೇಸ್‌ಬುಕ್‌ ಸ್ನೇಹಿತೆ ಮೇಲೆ ಅತ್ಯಾಚಾರ; ಯುವಕ ಬಂಧನ

7

ಫೇಸ್‌ಬುಕ್‌ ಸ್ನೇಹಿತೆ ಮೇಲೆ ಅತ್ಯಾಚಾರ; ಯುವಕ ಬಂಧನ

Published:
Updated:

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಪಾರ್ಟಿಗೆ ಕರೆಸಿ ಅತ್ಯಾಚಾರ ಎಸಗಿದ್ದ ಆರೋಪದಡಿ ಆದಿತ್ಯ (28) ಎಂಬಾತನನ್ನು ಎಚ್‌ಎಎಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಪದವೀಧರನಾದ ಆದಿತ್ಯನ ವಿರುದ್ಧ ಎಂಬಿಎ ವ್ಯಾಸಂಗ ಮಾಡುತ್ತಿರುವ ಯುವತಿ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ’ ಎಂದು ಎಚ್‌ಎಎಲ್ ಪೊಲೀಸರು ಹೇಳಿದರು.

‘ಆದಿತ್ಯ ಹಾಗೂ ಆತನ ಸ್ನೇಹಿತ ಆರಿಫ್‌, ಯುವತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದರು. ನಿತ್ಯವೂ ಗ್ರೂಪ್‌ ಚಾಟಿಂಗ್‌ ಮಾಡುತ್ತಿದ್ದರು. ಶನಿವಾರ ರಾತ್ರಿ ಪಾರ್ಟಿ ಮಾಡುವುದಕ್ಕಾಗಿ ಆರಿಫ್‌, ಯುವತಿ ಹಾಗೂ ಆದಿತ್ಯನನ್ನು ಎಚ್‌ಎಎಲ್‌ನಲ್ಲಿದ್ದ ತನ್ನ ಮನೆಗೆ ಕರೆಸಿಕೊಂಡಿದ್ದ’

‘ಮೂವರು ಸೇರಿ ಮದ್ಯ ಕುಡಿದಿದ್ದರು. ಸುಸ್ತಾದ ಯುವತಿ, ಕೊಠಡಿಗೆ ಹೋಗಿ ಮಲಗಿಕೊಂಡಿದ್ದರು. ಆರಿಫ್, ಊಟ ತರಲು  ಹೊರಗಡೆ ಹೋಗಿದ್ದರು. ಅದೇ ವೇಳೆ ಕೊಠಡಿಯೊಳಗೆ ನುಗ್ಗಿದ್ದ ಆದಿತ್ಯ, ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಭಾನುವಾರ ಬೆಳಿಗ್ಗೆ ಪೋಷಕರಿಗೆ ವಿಷಯ ತಿಳಿಸಿದ್ದ ಯುವತಿ, ನಂತರ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !