ನಕಲಿ ಫೇಸ್‌ಬುಕ್ ಖಾತೆ ರದ್ದು

7

ನಕಲಿ ಫೇಸ್‌ಬುಕ್ ಖಾತೆ ರದ್ದು

Published:
Updated:

ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆ ನಿಮಿತ್ತ, 32 ನಕಲಿ ಖಾತೆಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ. ಇವು ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಹಾಗೂ ರಾಜಕೀಯ ಪ್ರಭಾವಿತ ಪ್ರಚಾರದಲ್ಲಿ ತೊಡಗಿವೆ ಎಂಬ ಕಾರಣವನ್ನು ಫೇಸ್‌ಬುಕ್ ನೀಡಿದೆ. 

‘ಈ ರೀತಿಯ ವರ್ತನೆಗಳಿಗೆ ಫೇಸ್‌ಬುಕ್ ಅವಕಾಶ ನೀಡುವುದಿಲ್ಲ. ಜನ ಅಥವಾ ಸಂಘಟನೆಗಳು ಖಾತೆಗಳ ಜಾಲ ರಚಿಸಿಕೊಂಡು ಇತರರನ್ನು ದಾರಿ ತಪ್ಪಿಸಲು ದಾರಿ ಮಾಡಿಕೊಡುವುದಿಲ್ಲ’ ಎಂದು ಅದು ತಿಳಿಸಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ರಷ್ಯಾದ ಇಂಟರ್ನೆಟ್ ರೀಸರ್ಚ್ ಏಜೆನ್ಸಿ (ಐಆರ್‌ಎ) ಪ್ರಭಾವ ಬೀರಿದೆ ಎಂದು ಸುದ್ದಿಯಾಗಿತ್ತು. ಈ ಬಾರಿ ಅಂತಹ ವಿವಾದಕ್ಕೆ ಆಸ್ಪದೆ ನೀಡದಂತೆ ಸಂಸ್ಥೆಯು ಕ್ರಮಕ್ಕೆ ಮುಂದಾಗಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !