ಗುರುವಾರ , ನವೆಂಬರ್ 21, 2019
20 °C
ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಕ್ರಮ

ಫೇಸ್‌ಬುಕ್‌: ಸಾವಿರಾರು ಆ್ಯಪ್‌ ರದ್ದು

Published:
Updated:
Prajavani

ಸ್ಯಾನ್‌ಫ್ರಾನ್ಸಿಸ್ಕೊ: ಫೇಸ್‌ಬುಕ್‌ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಆ್ಯಪ್‌ಗಳನ್ನುಸ್ಥಗಿತಗೊಳಿಸಲಾಗಿದೆ. 

ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ಬಳಿಕ ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

ಸ್ಥಗಿತಗೊಳಿಸಿರುವ ಆ್ಯಪ್‌ಗಳು ಜನರಿಗೆ ಅಪಾಯ ಮಾಡುತ್ತಿವೆ ಎಂದರ್ಥವಲ್ಲ. ಮಾಹಿತಿ ನೀಡುವಂತೆ ನಮ್ಮ ಕೋರಿಕೆಗೆ ಸ್ಪಂದಿಸದ ಆ್ಯಪ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಆ್ಯಪ್‌ಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದೆ.

‘ಆ್ಯಪ್‌ಗಳು ಮಾಹಿತಿಗಳನ್ನು ಹೇಗೆ ಬಳಸುತ್ತಿವೆ ಮತ್ತು ಗೋಪ್ಯತೆಯ ನಿಯಮಗಳನ್ನು ಗೌರವಿಸುತ್ತಿವೆಯೇ ಎಂದು ಪರಿಶೀಲನೆ ನಡೆಸಲಾಗುವುದು’ ಎಂದು ಫೇಸ್‌ಬುಕ್‌ ಉಪಾಧ್ಯಕ್ಷ ಐಮೆ ಆರ್ಚಿಬಾಂಗ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)