ಗುರುವಾರ , ಜುಲೈ 29, 2021
23 °C

ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವಿಗೆ ಸ್ಫೋಟಕ ತುಂಬಿದ ಹಣ್ಣನ್ನು ತಿನ್ನಿಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ತುಂಬಿಸಿದ್ದ ಅನಾನಸ್ ತಿನ್ನಿಸಿದಂತೆ, ಹಿಮಾಚಲ ಪ್ರದೇಶದ ವಿಲಾಸಪುರಿಯಲ್ಲಿ ಸ್ಫೋಟಕ ತುಂಬಿದ ಹಣ್ಣನ್ನು ಗರ್ಭಿಣಿ ಹಸುವಿಗೆ ತಿನ್ನಿಸಲಾಗಿದೆ. ವಿಲಾಸಪುರಿಯನ್ನು ಅತ್ಯಂತ ಪವಿತ್ರ ಕ್ಷೇತ್ರ ಎಂದು ಕರೆಯಲಾಗುತ್ತದೆ. ಅಲ್ಲೇ ಹಸುವಿಗೆ ಹೀಗೆ ಮಾಡಲಾಗಿದೆ. ಸ್ಫೋಟದಲ್ಲಿ ಹಸು ತೀವ್ರವಾಗಿ ಗಾಯಗೊಂಡಿದೆ. ಕೇರಳದ ಮೇಲೆ ಮುಗಿಬಿದ್ದವರು ಇತ್ತಲೂ ನೋಡಿ’ ಎಂಬ ಒಕ್ಕಣೆ ಇರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಗೊಂಡಿರುವ ಹಸುವಿನ ಚಿತ್ರವೂ ವೈರಲ್ ಆಗಿದೆ.

ಆದರೆ, ಇದು ಸುಳ್ಳು ಸುದ್ದಿ. 2015ರ ಜೂನ್‌ನಲ್ಲಿ ರಾಜಸ್ಥಾನದ ರಾಯಪುರದ ಲಿಲಂಬಾ ಹಳ್ಳಿಯಲ್ಲಿ ನಡೆದಿದ್ದ ಘಟನೆ ಇದು. ಹಳ್ಳಿಯ ಕಸದ ರಾಶಿಯಲ್ಲಿ ಹಸು ಮೇಯುತ್ತಿದ್ದಾಗ ಅಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಹಸುವಿನ ದವಡೆಗೆ ತೀವ್ರ ಗಾಯವಾಗಿತ್ತು. ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಕಸದ ರಾಶಿಯಲ್ಲಿ ಪಟಾಕಿ ಹುದುಗಿಸಿ ಇಟ್ಟಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.


ಗಾಯಗೊಂಡ ಹಸುವಿನ ಚಿತ್ರ ಪ್ರಕಟಿಸಿರುವ ‘ತಮಿಳ್ ಎಕ್ಸ್‌ಪ್ರೆಸ್‌ ನ್ಯೂಸ್’ ಜಾಲತಾಣ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು