ಮಂಗಳವಾರ, ಸೆಪ್ಟೆಂಬರ್ 28, 2021
26 °C

Fact Check: ತಾಲಿಬಾನ್ ಹೆಲಿಕಾಪ್ಟರ್‌ನಲ್ಲಿ ವ್ಯಕ್ತಿಯನ್ನು ನೇತು ಹಾಕಿದ್ದು ಏಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಮೆರಿಕದ ಪಡೆಗಳು ಅಫ್ಗನ್‌ನಿಂದ ಕಾಲ್ಕೀಳುತ್ತಿದ್ದಂತೆಯೇ ತಾಲಿಬಾನ್ ಹುಚ್ಚಾಟ ಶುರುವಾಗಿದ್ದು, ವಿರೋಧಿ ವ್ಯಕ್ತಿಯೊಬ್ಬನನ್ನು ಹೆಲಿಕಾಪ್ಟರ್‌ನಲ್ಲಿ ನೇತುಹಾಕಿ ಹಾರಾಟ ಮಾಡಲಾಗಿದೆ’ ಎಂಬ ಉಲ್ಲೇಖವಿರುವ ವಿಡಿಯೊಗಳು ಕಳೆದ ಎರಡು ದಿನಗಳಿಂದ ಭಾರಿ ಚರ್ಚೆಗೆ ವಸ್ತುವಾಗಿವೆ. ಅಮೆರಿಕದ ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ಮೂಲಕ ತಾಲಿಬಾನ್ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಭಾರತದ ಬಹುತೇಕ ಸುದ್ದಿಸಂಸ್ಥೆಗಳು ಈ ವಿಡಿಯೊವನ್ನು ಪ್ರಸಾರ ಮಾಡಿವೆ. ಸಾವಿರಾರು ಜನರು ಈ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
 
ಈ ವಿಡಿಯೊದಲ್ಲಿರುವ ವ್ಯಕ್ತಿ ತಾಲಿಬಾನ್‌ಗೆ ಸೇರಿದವನು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ತಾಲಿಬಾನ್ ಪ್ರತೀಕಾರಕ್ಕಾಗಿ ಹೀಗೆ ಮಾಡಿಲ್ಲ. ಕಂದಹಾರ್‌ನಲ್ಲಿರುವ ಗವರ್ನರ್ ಕಚೇರಿ ಮೇಲೆ ಸಂಘಟನೆಯ ಧ್ವಜವನ್ನು ಅಳವಡಿಸಲು ಈ ರೀತಿ ಯತ್ನಿಸಲಾಗಿದೆ ಎಂಬುದಾಗಿ ಅಫ್ಗನ್‌ನ ಅಸ್ವಾಕಾ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಎಲ್ಲೆಡೆ ವರದಿಯಾಗಿರುವಂತೆ ಆ ವ್ಯಕ್ತಿಯ ಕುತ್ತಿಗೆಗೆ ಹಗ್ಗ ಕಟ್ಟಿಲ್ಲ. ಬದಲಾಗಿ ಆತನ ಬೆನ್ನಿಗೆ ಹಗ್ಗ ಕಟ್ಟಲಾಗಿದೆ ಎಂಬ ಅಂಶವು ಸಂಸ್ಥೆ ಹಂಚಿಕೊಂಡಿರುವ ವಿಡಿಯೊದಲ್ಲಿ ಕಾಣುತ್ತದೆ. ಇದಕ್ಕಾಗಿ ಬಳಸಿದ್ದು ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ಹೌದೇ ಅಲ್ಲವೇ ಎಂಬುದನ್ನು ಅಮೆರಿಕದ ರಕ್ಷಣಾ ಸಚಿವಾಲಯ ಇನ್ನೂ ಸ್ಪಷ್ಟಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು