ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್‌: ಮುಸ್ಲಿಮರು ಸಂಭ್ರಮಿಸುತ್ತಿದ್ದಾರೆಂಬ ಸುದ್ದಿ ಸುಳ್ಳು

Last Updated 23 ಆಗಸ್ಟ್ 2020, 19:01 IST
ಅಕ್ಷರ ಗಾತ್ರ

ಕೋವಿಡ್ತಗುಲಿರುವಕಾರಣಗೃಹ ಸಚಿವಅಮಿತ್ ಶಾ ಸತ್ತಿದ್ದಾರೆ ಎಂದು ಮುಸ್ಲಿಮರು ಸಂಭ್ರಮಿಸುತ್ತಿದ್ದಾರೆ ಎಂದು ದೆಹಲಿಯ ಬಿಜೆಪಿ ಸದಸ್ಯ ವಿನಯ್ ಚೌಧರಿ ಎಂಬುವವರು ಟ್ವೀಟ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಸ್ಲಿಂ ಯುವಕರು ಅಣಕು ಶವಯಾತ್ರೆ ನಡೆಸುತ್ತಿರುವುದು ಮತ್ತು ಮೋದಿ, ಶಾ ಸತ್ತರು ಎಂದು ಕೂಗುತ್ತಿರುವುದು ವಿಡಿಯೊದಲ್ಲಿ ಇದೆ. ‘ಕೋವಿಡ್ಬಂದ ಕಾರಣಕ್ಕೆ ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಸುತ್ತಿರುವ ಈ ಮುಸ್ಲಿಮರ ಮನಸ್ಥಿತಿ ಎಂಥದ್ದು ಇರಬಹುದು’ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸುಳ್ಳು ಎಂದು ಆಲ್ಟ್ ನ್ಯೂಸ್ ಹೇಳಿದೆ. ಅಮಿತ್ ಶಾ ಅವರಿಗೆಕೋವಿಡ್ಇರುವುದು ದೃಢಪಟ್ಟಿದ್ದು, ಆಗಸ್ಟ್‌ 2ರಂದು. ಆದರೆ ಈ ವಿಡಿಯೊವನ್ನು 2019ರ ಡಿಸೆಂಬರ್ 21ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಕೋಲ್ಕತ್ತದಲ್ಲಿ ನಡೆದ ಪ್ರತಿಭಟನೆಯ ವಿಡಿಯೊ ಇದು. ಕೋಲ್ಕತ್ತ ಪೊಲೀಸರ ವಾಹನ ಇರುವುದೂ ಈ ವಿಡಿಯೊದಲ್ಲಿ ದಾಖಲಾಗಿದೆ. ಸಿಎಎಯನ್ನು ವಿರೋಧಿಸಿ ಪ್ರತಿಭಟನಕಾರರು ಘೋಷಣೆ ಕೂಗುತ್ತಿರುವುದೂ ವಿಡಿಯೊದಲ್ಲಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT