ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಇಸ್ಲಾಮಿಕ್ ರಾಷ್ಟ್ರ ಘೋಷಣೆ ನಿಜವೇ?

Last Updated 10 ಮಾರ್ಚ್ 2021, 20:17 IST
ಅಕ್ಷರ ಗಾತ್ರ

ಅಸ್ಸಾಂನಲ್ಲಿ ಚುನಾವಣೆ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿರುವ ಮಧ್ಯೆಯೇ ಎಐಯುಡಿಎಫ್ ಮುಖಂಡ ಹಾಗೂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ‘ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವ ಕರೆ’ ಕೊಟ್ಟಿರುವ ವಿಷಯ ಸಾಕಷ್ಟು ಸುದ್ದಿಯಲ್ಲಿದೆ. ಅವರು ಹೀಗೆ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಕುರಿತು ಪರಿಶೀಲನೆ ನಡೆಸಿದ ಲಾಜಿಕಲ್ ಇಂಡಿಯನ್ಸ್ ವೆಬ್‌ಸೈಟ್, ವಿಡಿಯೊವನ್ನು ತಿರುಚಲಾಗಿದೆ ಎಂದು ತಿಳಿಸಿದೆ. ಮೂಲ ವಿಡಿಯೊದಲ್ಲಿ ಬದ್ರುದ್ದೀನ್ ಹೇಳಿರುವುದು ಇಷ್ಟು: ‘ಮೊಘಲರು 800 ವರ್ಷ ಆಳಿದರೂ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಆಗಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಕ್ರಿಶ್ಚಿಯನ್ ದೇಶ ಮಾಡಲು ಆಗಲಿಲ್ಲ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ 55 ವರ್ಷ ಆಳಿದರೂ ಹಿಂದುತ್ವ ದೇಶ ಕಟ್ಟುವ ಕನಸು ಕಂಡಿರಲಿಲ್ಲ. ಇನ್ನು ನರೇಂದ್ರ ಮೋದಿ ಅವರಿಂದ ಹಿಂದುತ್ವ ದೇಶ ಕಟ್ಟಲು ಆಗದು. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವೆನಿಸಿದವರಿಗೆ ಮತ ನೀಡಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT