ಗುರುವಾರ , ನವೆಂಬರ್ 26, 2020
20 °C

ಕೋವಿಡ್‌ ಮುಕ್ತ ವಿಡಿಯೊ ಕೊಡಗು ಜಿಲ್ಲಾಧಿಕಾರಿಗೆ ಸಂಬಂಧಿಸಿದ್ದು ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದಲ್ಲಿ ನರ್ಸ್ ಆಗಿದ್ದ ಅನೀಸ್ ಕಣ್ಮಣಿ ಜಾಯ್ ಅವರು ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಪಾಸಾಗಿ, ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸ್ ಆಗಿ ಇದ್ದ ಅನುಭವವನ್ನು ಕೋವಿಡ್‌ ನಿಯಂತ್ರಣ ಕಾರ್ಯಕ್ರಮಕ್ಕೆ ಅವರು ಬಳಸಿಕೊಂಡಿದ್ದರಿಂದ, ಕೊಡಗು ಜಿಲ್ಲೆ ಈಗ ಕೋವಿಡ್‌ ಮುಕ್ತವಾಗಿದೆ. ಜನರು ಅವರನ್ನು ಸನ್ಮಾನಿಸುತ್ತಿದ್ದಾರೆ ಎಂಬ ವಿವರ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಮಹಿಳೆಯೊಬ್ಬರಿಗೆ ಹೂಗುಚ್ಛ ನೀಡಿ ಸನ್ಮಾನಿಸುವ ವಿಡಿಯೊ ಇದಾಗಿದೆ.

ಆದರೆ, ಈ ವಿಡಿಯೊ ಕೊಡಗು ಜಿಲ್ಲಾಧಿಕಾರಿಗೆ ಸಂಬಂಧಿಸಿದ್ದು ಅಲ್ಲ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ. 2019ರಲ್ಲಿ ಹಾಥರಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ, ಸಂತ್ರಸ್ತೆಯು ಕಾನೂನು ಹೋರಾಟ ನಡೆಸಿದ್ದರು. ಅದನ್ನು ಪ್ರಶಂಸಿಸಿ ಖಾಸಗಿ ಸಂಸ್ಥೆಯೊಂದು ಅವರನ್ನು ಸನ್ಮಾನಿಸಿತ್ತು. ಆ ವಿಡಿಯೊ 2020ರ ಫೆಬ್ರುವರಿಯಲ್ಲಿ ಯುಟ್ಯೂಬ್‌ನಲ್ಲಿ ಪ್ರಕಟವಾಗಿತ್ತು. ಆ ವಿಡಿಯೊವನ್ನು ಕೊಡಗು ಜಿಲ್ಲಾಧಿಕಾರಿಯ ವಿಡಿಯೊ ಎಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯು ಕೋವಿಡ್‌ನಿಂದ ಸಂಪೂರ್ಣ ಮುಕ್ತವಾಗಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿದೆ. ಜಿಲ್ಲೆಯಲ್ಲಿ ಬುಧವಾರ ಸಂಜೆಯ ವೇಳೆಗೆ 438 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು