ಸೋಮವಾರ, ಆಗಸ್ಟ್ 8, 2022
21 °C

Fact Check: ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಲಸಿಕೆ ಅಭಿಯಾನ ಹಳ್ಳ ಹಿಡೀತಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ದ್ವೇಷದ ಕಾರಣ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಕಾರ್ಯಕ್ರಮವನ್ನು ಹಳ್ಳಹಿಡಿಸುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಐಟಿ ಘಟಕದ ಮುಖ್ಯಸ್ಥೆ ಪ್ರೀತಿ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಒಂದು ಪೋಸ್ಟರ್‌ ಹಂಚಿಕೊಂಡಿದ್ದಾರೆ. ‘ರಾಜಸ್ಥಾನದಲ್ಲಿ 11.55 ಲಕ್ಷ ಡೋಸ್‌, ಜಾರ್ಖಂಡ್‌ನಲ್ಲಿ ಶೇ 37ರಷ್ಟು ಡೋಸ್‌ ಮತ್ತು ಛತ್ತೀಸಗಡದಲ್ಲಿ ಶೇ 30ರಷ್ಟು ಡೋಸ್‌ಗಳಷ್ಟು ಲಸಿಕೆ ಪೋಲು ಮಾಡಲಾಗಿದೆ’ ಎಂದು ಪೋಸ್ಟರ್‌ನಲ್ಲಿ ವಿವರಿಸಲಾಗಿದೆ. ಈ ಪೋಸ್ಟರ್‌ ಮತ್ತು ಟ್ವೀಟ್‌ ಅನ್ನು ಬಿಜೆಪಿಯ ಹಲವು ನಾಯಕರು ಹಂಚಿಕೊಂಡಿದ್ದಾರೆ.

‘ಪ್ರೀತಿ ಗಾಂಧಿ ಹಂಚಿಕೊಂಡಿರುವ ಮಾಹಿತಿ ಸುಳ್ಳು’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ರಾಜಸ್ಥಾನದಲ್ಲಿ 3.30 ಲಕ್ಷ ಡೋಸ್‌ ಮಾತ್ರ ಪೋಲಾಗಿದೆ. ಛತ್ತೀಸಗಡದಲ್ಲಿ ಕೋವಿಡ್‌ ಲಸಿಕೆ ಪೋಲಿನ ಪ್ರಮಾಣ ಶೇ 15.79. ಜಾರ್ಖಂಡ್‌ನಲ್ಲಿ ಶೇ 33.95ರಷ್ಟು ಲಸಿಕೆ ವ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ‘ಈ ಮಾಹಿತಿ ತಪ್ಪು. ನಮ್ಮಲ್ಲಿ ಲಸಿಕೆ ವ್ಯರ್ಥದ ಪ್ರಮಾಣ ಶೇ 4.65ರಷ್ಟು’ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ದಾಖಲೆ ನೀಡಿದ್ದಾರೆ. ‘ನಮ್ಮಲ್ಲಿ ಲಸಿಕೆ ಪೋಲಿನ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇದೆ. ನಿಮ್ಮಲ್ಲಿ ತಪ್ಪಾಗಿರುವ ಮಾಹಿತಿ ಸರಿ ಮಾಡಿ’ ಎಂದು ಛತ್ತೀಸಗಡ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು