ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check | ರಾಷ್ಟ್ರ ಧ್ವಜದ ಮೇಲೆ ವಾಹನ ಚಾಲನೆ: ವಿಡಿಯೊದ ಅಸಲಿಯತ್ತೇನು?

Last Updated 8 ಜೂನ್ 2022, 19:31 IST
ಅಕ್ಷರ ಗಾತ್ರ

ರಸ್ತೆಯ ಮೇಲೆ ಹರಡಿರುವ ತ್ರಿವರ್ಣಧ್ವಜದ ಮೇಲೆ ವಾಹನಗಳು ಚಲಿಸುತ್ತಿರುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ಪಾಕಿಸ್ತಾನದ ಧ್ವಜ ಹಿಡಿದಿರುವ ಹಲವರು ಘೋಷಣೆ ಕೂಗುವ ಚಿತ್ರಣ 3.8 ನಿಮಿಷದ ವಿಡಿಯೊದಲ್ಲಿ ದಾಖಲಾಗಿದೆ. ಇದು ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಲಾಗಿದೆ.

ಇದು ಪಾಕಿಸ್ತಾನದ ಕರಾಚಿಗೆ ಸಂಬಂಧಿಸಿದ ವಿಡಿಯೊ ಎಂದು ಇಂಡಿಯಾಟುಡೇ ವರದಿ ಮಾಡಿದೆ. ವಾಹನವೊಂದರ ಮೇಲೆ ಬರೆಯಲಾಗಿರುವ ಹುನಾರ್ ಫೌಂಡೇಷನ್ ಹೆಸರು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗೆ ಸಂಬಂಧಿಸಿದ್ದಾಗಿದೆ. ವಿಡಿಯೊದಲ್ಲಿ ಕಾಣಿಸುವ ರಿಕ್ಷಾಗಳು ತಮಿಳುನಾಡಿನ ರಿಕ್ಷಾಗಳಿಗೆ ಹೋಲಿಕೆಯಾಗುವುದಿಲ್ಲ. ವಿಡಿಯೊದಲ್ಲಿ ಕಾಣಿಸುವ ಬೀದಿಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುದು ದೃಢಪಟ್ಟಿದೆ ಎಂದು ಇಂಡಿಯಾಟುಡೇ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT