ಬುಧವಾರ, ಜೂನ್ 29, 2022
24 °C

Fact Check | ಮುಸ್ಲಿಂ ಪ್ರತಿಭಟನಕಾರರಿಂದ ಪೊಲೀಸ್‌ ಅಧಿಕಾರಿಯ ಕೊಲೆ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾನ್‌ಸ್ಟೆಬಲ್‌ ಪಕ್ಕದಲ್ಲಿ ಬಂದೂಕು ಇರುವುದು, ಸುತ್ತ ಜನರು ಗುಂಪುಗೂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಬಿಜೆಪಿ ವಕ್ತಾರೆ ಆಗಿದ್ದ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಂ ಪ್ರತಿಭಟನಕಾರರು ಪೊಲೀಸ್‌ ಅಧಿಕಾರಿಯನ್ನು ಕೊಂದಿದ್ದಾರೆ ಎಂಬ ವಿವರಣೆಯನ್ನು ಈ ವಿಡಿಯೊ ಜೊತೆಗೆ ನೀಡಲಾಗಿದೆ.

ವಿಡಿಯೊ ಜೊತೆಗೆ ನೀಡಲಾಗಿರುವ ವಿವರಣೆ ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ವರದಿ ಮಾಡಿದೆ. ‘ದಿ ಇಂಡಿಯನ್‌ ಎಕ್ಸಪ್ರೆಸ್‌’ ಸೇರಿ ಹಲವಾರು ಪತ್ರಿಕೆಗಳು ಈ ಘಟನೆ ಕುರಿತು 2022ರ ಜೂನ್‌ 11ರಂದು ವರದಿ ಮಾಡಿವೆ. ಈ ಘಟನೆ ಕೋಲ್ಕತ್ತಾದ ಪಾರ್ಕ್‌ ಸರ್ಕಸ್‌ ಪ್ರದೇಶದಲ್ಲಿ ನಡೆದಿದೆ. ನೂಪುರ್‌ ಶರ್ಮಾ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸ್‌ ಕಾನ್‌ಸ್ಟೆಬಲ್‌ ಚೋಡುಪ್‌ ಲೆಪ್ಚಾ ಅವರು ವಿವೇಚನಾಹೀನರಾಗಿ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ತಗಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ಅದೇ ರೈಫಲ್‌ನಿಂದ ಅವರೂ ಗುಂಡು ಹಾರಿಸಿಕೊಂಡಿದ್ದಾರೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ ಎಂದು ದಿ ಲಾಜಿಕಲ್‌ ಇಂಡಿಯನ್‌ ವರದಿಯಲ್ಲಿ ವಿವರಿಸಲಾಗಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು