ಭಾನುವಾರ, ಏಪ್ರಿಲ್ 11, 2021
30 °C

ಫ್ಯಾಕ್ಟ್ ಚೆಕ್: ಅಜಯ್ ದೇವಗನ್‌ಗೆ ಥಳಿತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಲಿವುಡ್ ನಟ ಅಜಯ್ ದೇವ್‌ಗನ್ ಅವರನ್ನು ದೆಹಲಿಯಲ್ಲಿ ರೈತರು ಥಳಿಸಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದರಿಂದ ಹೀಗೆ ಮಾಡಲಾಗಿದೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಅವರನ್ನು ಥಳಿಸಲಾಗಿದೆ ಎನ್ನಲಾದ ವಿಡಿಯೊ ಕೂಡ ವೈರಲ್ ಆಗಿದೆ.

ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಯು ವಿಡಿಯೊದ ಅಸಲಿಯತ್ತನ್ನು ಪರಾಮರ್ಶೆಗೆ ಒಳಪಡಿಸಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ದೃಶ್ಯ ದಾಖಲಾಗಿದೆ. ದೆಹಲಿಯ ಏರೋಸಿಟಿಯಲ್ಲಿ ನಡೆದ ಈ ಘಟನೆಯ ದೃಶ್ಯಾವಳಿಗಳಲ್ಲಿ ಮಾರ್ಚ್ 28ರಂದು ‘ಎನ್‌ಡಿಟಿವಿ’ ಪ್ರಕಟಿಸಿತ್ತು. ಅಜಯ್ ದೇವ್‌ಗನ್ ಅವರ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ, ಹಲ್ಲೆ ನಡೆದ ವಿಷಯವನ್ನು ಅವರು ಅಲ್ಲಗಳೆದಿದ್ದಾರೆ. ಸ್ವತಃ ಅಜಯ್ ದೇವ್‌ಗನ್ ಅವರೇ ಟ್ವಿಟರ್‌ನಲ್ಲಿ ಇದನ್ನು ನಿರಾಕರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು