ಬುಧವಾರ, ಆಗಸ್ಟ್ 10, 2022
23 °C

Fact check:‘ಕಾಂಗ್ರೆಸ್ ಹಿಂದೂಗಳ ಪಕ್ಷ ಎನ್ನುವುದನ್ನು ಇನ್ನಾದರೂ ನಿಲ್ಲಿಸ್ತೀರ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೋಡಿ, ಕೇರಳದ ವಯನಾಡಿನ ಕಾಂಗ್ರೆಸ್ ಕಚೇರಿ ಹೇಗಿದೆ ಎಂದು. ಕಾಂಗ್ರೆಸ್ ಹಿಂದೂಗಳ ಪಕ್ಷ ಎಂದು ಹೇಳುವುದನ್ನು ಇನ್ನಾದರೂ ನಿಲ್ಲಿಸುತ್ತೀರಾ’ ಎಂಬ ಆಗ್ರಹ ಇರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಟ್ವೀಟ್‌ನ ಜೊತೆ ಪೂರ್ಣ ಕಡುಹಸಿರು ಬಣ್ಣದ ಕಟ್ಟಡದ ಚಿತ್ರವೂ ಇದೆ. ಆ ಕಟ್ಟಡದ ಗೋಡೆಯ ಮೇಲೆ ಅರ್ಧಚಂದ್ರ-ನಕ್ಷತ್ರ ಚಿಹ್ನೆ, ಒಂದು ಬದಿಯಲ್ಲಿ ಏಣಿಯ ಚಿತ್ರ ಇದೆ. ಉರ್ದುವಿನ ಬರಹವಿದೆ. ‘ಇದು ಪಾಕಿಸ್ತಾನವಲ್ಲ, ವಯನಾಡಿನ ಕಾಂಗ್ರೆಸ್ ಪಕ್ಷದ ಕಚೇರಿ’ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಈ ಚಿತ್ರ ರಿಟ್ವೀಟ್ ಆಗಿದೆ.

‘ಇದು ಸುಳ್ಳು ಸುದ್ದಿ. ಕಟ್ಟಡದ ಬಲಬದಿಯಲ್ಲಿರುವ ಅರ್ಧಚಂದ್ರ ಮತ್ತು ನಕ್ಷತ್ರದ ಚಿಹ್ನೆ ಕೇರಳದ ಮುಸ್ಲಿಂ ಲೀಂಗ್‌ ಪಕ್ಷಕ್ಕೆ ಸೇರಿದ್ದು. ಕಟ್ಟಡದ ಎಡಬದಿಯಲ್ಲಿ ಏಣಿಯ ಚಿತ್ರ ಇದೆ. ಇದು ಚುನಾವಣಾ ಆಯೋಗವು ಮುಸ್ಲಿಂ ಲೀಗ್‌ಗೆ ನೀಡಿರುವ ಅಧಿಕೃತ ಚಿಹ್ನೆ. ಪಕ್ಷದ ನಾಯಕ ದಿ. ಸಯ್ಯದ್ ಮೊಹಮ್ಮದ್ ಅಲಿ ಶಿಹಾಬ್ ತಂಗಲ್ ಅವರ ಚಿತ್ರವನ್ನು ಕಟ್ಟಡದ ಗೋಡೆಯ ಮೇಲೆ ಹಾಕಿಸಲಾಗಿದೆ. ಹೀಗಾಗಿ ಇದು ಕಾಂಗ್ರೆಸ್ ಕಚೇರಿಯಲ್ಲ. ಬದಲಿಗೆ ಲೀಗ್‌ ಕಚೇರಿ ಕಟ್ಟಡ ಎಂಬುದು ಸಾಬೀತಾಗಿದೆ. ಕಾಂಗ್ರೆಸ್‌ ಪಾಕಿಸ್ತಾನಿಯರನ್ನು ಓಲೈಸುತ್ತದೆ ಎಂದು ತಪ್ಪು ಅಭಿಪ್ರಾಯ ಮೂಡಿಸಲು ಈ ಚಿತ್ರವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹರಡಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.