ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್: ಮಂತ್ರ ಹೇಳುತ್ತಿದ್ದಂತೇ ಬೆಂಕಿ ಹೊತ್ತಿಕೊಂಡಿದ್ದು ನಿಜವೇ?

Last Updated 3 ಜನವರಿ 2022, 19:30 IST
ಅಕ್ಷರ ಗಾತ್ರ

ಪೂಜಾ ಸಮಾರಂಭವೊಂದರಲ್ಲಿಪುರೋಹಿತರು ಮಂತ್ರ ಹೇಳುತ್ತಿದ್ದಂತೇ ಬೆಂಕಿ ಹೊತ್ತಿಕೊಳ್ಳುವ ವಿಡಿಯೊವೊಂದುಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬ್‌ನಲ್ಲಿ ವೈರಲ್‌ ಆಗಿದೆ. ಧಾರ್ಮಿಕ ವಿಧಿ ವಿಧಾನದಲ್ಲಿ ಬಳಸುವ ಕೆಲವು ಪದಾರ್ಥಗಳನ್ನು ಪುರೋಹಿತರು ಕೆಳಗೆ ಇದ್ದ ಅಗ್ನಿಕುಂಡಕ್ಕೆ ಹಾಕುತ್ತಾರೆ.ಅಗ್ನಿಕುಂಡದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ‘ಅಗ್ನಿಕುಂಡಕ್ಕೆ ಅಗ್ನಿ ಸ್ಪರ್ಶ ಮಾಡಿಲ್ಲ. ಕೇವಲ ಮಂತ್ರದಿಂದಲೇ ಬೆಂಕಿ ಹೊತ್ತುಕೊಂಡಿದೆ. ಮಂತ್ರದಿಂದಲೇ ಬೆಂಕಿ ಹೊತ್ತಿಸುವ ಬ್ರಾಹ್ಮಣರು ಈ ಕಾಲದಲ್ಲೂ ಇದ್ದಾರೆ’ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.

2021ರ ಜ.16ರಂದು ಈ ವಿಡಿಯೊ ‘ಶಂಕರ ಟಿ.ವಿ’ಯಲ್ಲಿ ಪ್ರಸಾರವಾಗಿತ್ತು. ರಾಜಸ್ಥಾನದ ದಿಗಂಬರ ಜೈನ್‌ ದೇವಾಲಯದಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಲಾಜಿಕಲ್‌ ಇಂಡಿಯನ್ ವರದಿ ಮಾಡಿದೆ.ಈ ರೀತಿ ಬೆಂಕಿ ಹೊತ್ತಿಕೊಳ್ಳುವುದರ ಹಿಂದೆ ರಾಸಾಯನಿಕ ಪ್ರಕ್ರಿಯೆ ನಡೆದಿರುತ್ತದೆ. ಪೊಟ್ಯಾಶಿಯಂ ಪರ್‌ಮ್ಯಾಂಗನೇಟ್‌ ಮತ್ತು ಗ್ಲಿಸರಿನ್ ಮಿಶ್ರಣವನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿದರೆ ಮೊದಲು ಹೊಗೆ ಉತ್ಪತ್ತಿ ಆಗುತ್ತದೆ. ಸ್ವಲ್ಪ ಸಮಯದ ಬಳಿಕ ಬೆಂಕಿ ಹೊತ್ತಿ ಉರಿಯುತ್ತದೆ. ಈ ವಿಡಿಯೊದಲ್ಲಿ ಇರುವುದೂ ಅಂಥದ್ದೇ ರಾಸಾಯನಿಕ ಕ್ರಿಯೆ ಎಂದು ಲಾಜಿಕಲ್‌ ಇಂಡಿಯನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT