ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact check | ಕೊರೊನಾವೈರಸ್‌ ನೈಸರ್ಗಿಕವಾಗಿ ಬಂದ ಸೋಂಕಲ್ಲ ಎಂಬ ಸುದ್ದಿ ನಿಜವೇ?

Last Updated 28 ಏಪ್ರಿಲ್ 2020, 2:37 IST
ಅಕ್ಷರ ಗಾತ್ರ

ಕೊರೊನಾವೈರಸ್‌ ನೈಸರ್ಗಿಕವಾಗಿ ಬಂದ ಸೋಂಕಲ್ಲ; ಅದು ಮಾನವನಿರ್ಮಿತ ಮತ್ತು ಚೀನಾ ಅದನ್ನು ಅಭಿವೃದ್ಧಿಪಡಿಸಿದೆ ಎಂದು ನೋಬಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಜಪಾನಿನ ಡಾ. ತಸುಕು ಹೊಂಜೊ ಹೇಳಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆಗುತ್ತಿದೆ. ಸಹಜವಾಗಿ ಉತ್ಪತ್ತಿಯಾದ ವೈರಾಣು ಇದಾಗಿದ್ದರೆ ಜಗತ್ತಿನ ಎಲ್ಲ ಭಾಗಗಳಿಗೆ ಇಷ್ಟೊಂದು ಕ್ಷಿಪ್ರಗತಿಯಲ್ಲಿ ಹರಡುತ್ತಿರಲಿಲ್ಲ ಎಂದೂ ಅವರು ಹೇಳಿದ್ದಾಗಿ ಮಾಹಿತಿ ಹರಿದಾಡುತ್ತಿದೆ. ಅಲ್ಲದೆ, ಡಾ. ತಸುಕು ಅವರು ವುಹಾನ್‌ ಪ್ರಯೋಗಾಲಯದ ವಿಜ್ಞಾನಿಗಳ ಜತೆ ನಾಲ್ಕು ವರ್ಷ ಕೆಲಸ ಮಾಡಿದ್ದರು ಎಂಬ ವಿವರ ಕೂಡ ಅವರ ‘ಹೇಳಿಕೆ’ಯೊಂದಿಗೆ ಭಾರಿ ಸದ್ದು ಮಾಡಿದೆ.

ಡಾ. ತಸುಕು ಅವರು ಕೋವಿಡ್‌–19ಗೆ ಸಂಬಂಧಿಸಿದಂತೆ ‘ನಿಕ್ಕಾಯ್‌ ಏಷ್ಯನ್‌ ರಿವ್ಯೂ’ಗೆ ಸಂದರ್ಶನವೊಂದನ್ನು ನೀಡಿದ್ದರು. ಆದರೆ, ಆ ಸಂದರ್ಶನದಲ್ಲಿ ಸೋಂಕು ಮಾನವನಿರ್ಮಿತ ಎಂಬ ಹೇಳಿಕೆಯನ್ನು ಅವರು ನೀಡಿರಲಿಲ್ಲ. ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ದೇಶಗಳು ಹೇಗೆ ವಿಫಲವಾಗುತ್ತಿವೆ ಎಂಬ ವಿಷಯವಾಗಿಯಷ್ಟೆ ಅವರು ಚರ್ಚಿಸಿದ್ದರು. ಅಲ್ಲದೆ, ವುಹಾನ್‌ ಪ್ರಯೋಗಾಲಯದ ಜತೆಗೆ ಅವರಿಗೆ ಯಾವುದೇ ಸಂಬಂಧವನ್ನೂ ಹೊಂದಿಲ್ಲ. ನ್ಯೂಸ್‌ ಮೀಟರ್‌ ಸುದ್ದಿಸಂಸ್ಥೆ ಕೇಳಿದ ಸ್ಪಷ್ಟನೆಗೆ ಡಾ.ತಸುಕು ಅವರ ಸಹಾಯಕ ವಿವರವಾದ ಉತ್ತರ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾದ ಎಲ್ಲ ವಿಷಯಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT