ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CAA ವಿರುದ್ಧ ಅಸ್ಸಾಂ ಪ್ರತಿಭಟನೆ; ಮಹಿಳೆಯ ಶರ್ಟ್‌ ಹಿಡಿದು ಎಳೆದರೇ ಸೈನಿಕರು?

ಫ್ಯಾಕ್ಟ್‌ ಚೆಕ್‌
Last Updated 4 ಜನವರಿ 2020, 12:11 IST
ಅಕ್ಷರ ಗಾತ್ರ
ADVERTISEMENT
""
""
""
""
""

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್‌ಸಿ) ವಿರೋಧಿಸಿ ದೇಶದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. 'ಅಸ್ಸಾಂನಲ್ಲಿ ನಡೆದ ಪ್ರತಿಭಟನೆ ವೇಳೆ ಭಾರತೀಯ ಸೇನಾ ಸಿಬ್ಬಂದಿ ಮಹಿಳೆಯೊಬ್ಬರ ಶರ್ಟ್‌ ಹಿಡಿದು ಎಳೆದಾಡಿದ್ದಾರೆ' ಎಂಬ ಒಕ್ಕಣೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಹಂಚಿಕೊಳ್ಳಾಗಿದೆ.

'ಇದು ಅಸ್ಸಾಂನಲ್ಲಿ ಇಂದಿನ ಪರಿಸ್ಥಿತಿ; ಮುಂದಿನ ದಿನಗಳಲ್ಲಿ ಇದನ್ನು ದೆಹಲಿ ಮತ್ತು ಉತ್ತರ ಪ್ರದೇಶದಲ್ಲೂ ಖಂಡಿತ ಕಾಣುವಿರಿ,...' ಎಂಬ ಬರಹಗಳೊಂದಿಗೆ ಟ್ವಿಟರ್‌, ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ನಲ್ಲಿಸೇನೆಯ ಸಿಬ್ಬಂದಿಯೊಬ್ಬರುಮಹಿಳೆಯ ಶರ್ಟ್‌ ಹಿಡಿದು ಎಳೆಯುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಪ್ರತಿಭಟನೆಯ ಸಂದರ್ಭದಲ್ಲಿ ನಡೆದಿರುವ ಘಟನೆಗೆ ಸಾಕ್ಷಿ ಎನ್ನಲಾಗುತ್ತಿರುವ ಈ ಫೋಟೊ ಸೆರೆ ಹಿಡಿದಿರುವುದು 12 ವರ್ಷಗಳ ಹಿಂದೆ!

2008ರ ಮಾರ್ಚ್‌ 24ರಂದು ಚೀನಾ ವಿರುದ್ಧ ಟಿಬೆಟಿಯನ್ನರು ನಡೆಸಿದ್ದ ಪ್ರತಿಭಟನೆಯ ಚಿತ್ರ ಇದು. ನೇಪಾಳದ ಕಾಠ್ಮಂಡುವಿನಲ್ಲಿ ವಿಶ್ವ ಸಂಸ್ಥೆ ಕಚೇರಿಯ ಎದುರು ನಡೆದಿದ್ದ ಪ್ರತಿಭಟನೆ ವೇಳೆ ಟಿಬೆಟಿಯನ್‌ ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸುತ್ತಿರುವ ಸಮಯದಲ್ಲಿ ತೆಗೆಯಲಾದ ಚಿತ್ರ. ರಾಯಿಟರ್ಸ್‌ ಪ್ರತಿನಿಧಿ ಫೋಟೊ ಸೆರೆ ಹಿಡಿದಿದ್ದು, ಅಡೋಬಿ ಸ್ಟಾಕ್‌ ವೆಬ್‌ಸೈಟ್‌ಗೆಅಪ್‌ಲೋಡ್‌ ಆಗಿರುವ ಚಿತ್ರಗಳಲ್ಲಿ ಇದನ್ನು ಗಮನಿಸಬಹುದು.

ಇದೇ ಫೋಟೊದೊಂದಿಗೆ ಅಸ್ಸಾಂ ಮತ್ತು ಸಿಎಎ ಪ್ರೊಟೆಸ್ಟ್‌ ಹ್ಯಾಷ್‌ಟ್ಯಾಗ್‌ ಬಳಸಿ, 'ಕಮಲಯುಗದ ದುಶ್ಯಾಸನ ಸೈನಿಕರು...' ಎಂದು ಪ್ರೀತಿ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಟಿಬೆಟಿಯನ್ನರ ಪ್ರತಿಭಟನೆಗಳಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಹಲವು ಬಾರಿ ಇದೇ ಚಿತ್ರ ಬಳಕೆಯಾಗಿರುವುದನ್ನು ಗುರುತಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT