ಸೋಮವಾರ, ಏಪ್ರಿಲ್ 19, 2021
24 °C

Fact Check: ಹಾಪ್‌ಶೂಟ್ ಪ್ರತಿ ಕೆ.ಜಿ.ಗೆ ₹1 ಲಕ್ಷ ದರ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಹಾರದ ಯುವ ರೈತನೊಬ್ಬ ಹಾಪ್‌ಶೂಟ್ ಎಂಬ ಬೆಳೆಯನ್ನು ಬೆಳೆಯುತ್ತಿದ್ದು. ಇದು ಪ್ರತಿ ಕೆ.ಜಿ.ಗೆ ₹1 ಲಕ್ಷ ದರದಲ್ಲಿ ಬಿಕರಿಯಾಗುತ್ತಿದೆ. ಬೇರೆ ಎಲ್ಲಾ ರೈತರು ಇದೇ ಬೆಳೆಯನ್ನು ಬೆಳೆದರೆ, ಆರಾಮವಾಗಿ ದುಡ್ಡು ಸಂಪಾದಿಸಬಹುದು. ರೈತರು ಹೀಗೆ ಪ್ರಗತಿಪರರಾಗಬೇಕು ಎಂಬ ವಿವರ ಇರುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ವೈರಲ್ ಆಗಿದೆ. ಯುವಕನೊಬ್ಬ ಹೊಲದಲ್ಲಿ, ಬೆಳೆಯೊಂದರ ಮಧ್ಯೆ ಕುಳಿತಿರುವ ಚಿತ್ರವೂ ವೈರಲ್ ಆಗಿವೆ. ಬಿಹಾರದ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಸಹ ಈ ಬಗ್ಗೆ ಟ್ವೀಟ್ ಮಾಡಿದ್ದರು. ಹಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

ಇದು ಸುಳ್ಳು ಸುದ್ದಿ ಎಂದು ದಿ ಪ್ರಿಂಟ್, ದಿ ಲಾಜಿಕಲ್ ಇಂಡಿಯನ್, ಆಲ್ಟ್‌ನ್ಯೂಸ್, ಫ್ಯಾಕ್ಟ್ಲೀ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಈ ಸುದ್ದಿ ಪ್ರಕಟವಾದ ನಂತರ ಹಲವು ಪತ್ರಕರ್ತರು ಆ ಯುವ ರೈತನನ್ನು ಭೇಟಿ ಮಾಡಲು ಯತ್ನಿಸಿದ್ದಾರೆ. ಆತನ ವಿಳಾಸವನ್ನೇ ತಪ್ಪಾಗಿ ನೀಡಲಾಗಿದೆ. ಆದರೆ ಅಂತಿಮವಾಗಿ ಆ ಯುವಕ ಸಿಕ್ಕಿದ್ದಾನೆ. ತಾನು ಬ್ಲ್ಯಾಕ್ ರೈಸ್ ಮತ್ತು ಗೋಧಿಯನ್ನು ಮಾತ್ರ ಬೆಳೆದಿದ್ದೇನೆ. ಹಾಪ್‌ಶೂಟ್‌ ಅನ್ನು ಬೆಳೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಬಿಹಾರದಲ್ಲಿ ಎಲ್ಲಿಯೂ ಹಾಪ್‌ ಶೂಟ್ ಬೆಳೆದಿಲ್ಲ ಎಂದು, ಅಲ್ಲಿನ ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು