ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಪಾಕಿಸ್ತಾನದಲ್ಲಿ ಐವರು ಹಿಂದೂಗಳನ್ನು ಹತ್ಯೆ ಮಾಡಿಲ್ಲ

Last Updated 9 ಮಾರ್ಚ್ 2021, 19:39 IST
ಅಕ್ಷರ ಗಾತ್ರ

ಪಾಕಿಸ್ತಾನದ ಅಬುಧಾಬಿ ಕಾಲೊನಿಯಲ್ಲಿ ಒಂದೇ ಕುಟುಂಬದ ಐವರು ಹಿಂದೂಗಳನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಜಿಹಾದಿ ಹಂತಕರು ಈ ಕೃತ್ಯ ಎಸಗಿದ್ದಾರೆ ಎಂದು ಹಲವು ಆನ್‌ಲೈನ್ ಸುದ್ದಿ ವಾಹಿನಿಗಳು ಸುದ್ದಿ ಪ್ರಕಟಿಸಿವೆ. ಪೋಸ್ಟ್‌ಕಾರ್ಡ್‌ ಸೇರಿದಂತೆ ಕನ್ನಡದ ಹಲವು ಫೇಸ್‌ಬುಕ್ ಪುಟಗಳು ಹಂಚಿಕೊಂಡಿವೆ. ಬಿಜೆಪಿ ನಾಯಕ ಸುರೇಂದ್ರ ಪುನಿಯಾ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಮತ್ತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಇದನ್ನು ಸಿಎಎ ವಿರೋಧಿಗಳು ಪ್ರತಿಭಟಿಸುವುದಿಲ್ಲ ಎಂದು ಈ ಪೋಸ್ಟ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಮತ್ತು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಈ ಕೃತ್ಯ ನಡೆದಿದೆ. ಕುಟುಂಬದ ಯಜಮಾನನಾದ ರಾಮಚಂದ್ ಈ ಕೃತ್ಯ ಎಸಗಿದ್ದಾನೆ. ಕೆಲಸ ಮಾಡದೆ, ಹೆಂಡತಿ ಜತೆಗೆ ಜಗಳ ನಡೆದ ಸಂದರ್ಭದಲ್ಲಿ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾರತದ ಆನ್‌ಲೈನ್ ಮಾಧ್ಯಮಗಳು ಇದನ್ನು ತಪ್ಪಾಗಿ ವರದಿ ಮಾಡಿವೆ. ಇದನ್ನೇ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಆಲ್ಟ್‌ನ್ಯೂಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT