ಮಂಗಳವಾರ, ಜುಲೈ 5, 2022
27 °C

Fact Check| ರಸ್ತೆಗಾಗಿ ದೇವಸ್ಥಾನ ಕೆಡವಿ ಮಸೀದಿ ಉಳಿಸಿತೇ ಆಂಧ್ರ ಸರ್ಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೆಯ ದೇವಸ್ಥಾನವೊಂದನ್ನು ಜೆಸಿಬಿ ಬಳಸಿ ಕೆಡವುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸೆರೆಯಾಗಿರುವ ದೃಶ್ಯ ಇದು ಎಂದು ಹೇಳಲಾಗಿದೆ. ವಿಡಿಯೊದಲ್ಲಿ ಮಸೀದಿ ಕೂಡಾ ಕಾಣುತ್ತದೆ. ‘ಆಂಧ್ರ ಪ್ರದೇಶ ಸರ್ಕಾರವು ರಸ್ತೆ ಅಗಲೀಕರಣಕ್ಕಾಗಿ ಪ್ರಾಚೀನ ಹಿಂದೂ ದೇವಾಲಯವನ್ನು ನೆಲಸಮ ಮಾಡುತ್ತಿದೆ. ಆದರೆ ಮಸೀದಿಯನ್ನು ಹಾಗೇ ಬಿಟ್ಟಿದೆ’ ಎಂದು ಈ ವಿಡಿಯೊದಲ್ಲಿ ಬಿಂಬಿಸಲಾಗಿದೆ. ಹಿಂದೂಪರ ಸಂಘಟನೆಗಳು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಾರಿ ಹಂಚಿಕೊಂಡಿವೆ. 

2020ರ ಮೇ ತಿಂಗಳಿನಲ್ಲಿ ಚಿತ್ರೀಕರಿಸಲಾದ ಈ ವಿಡಿಯೊವನ್ನು ತಪ್ಪು ಮಾಹಿತಿಯ ಜೊತೆಗೆ ಈಗ ಹಂಚಿಕೊಳ್ಳಲಾಗುತ್ತಿದೆ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಶ್ರೀ ವಿಜಯೇಶ್ವರ ಸ್ವಾಮಿ ವಾರಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯ ವೇಳೆ ಜೆಸಿಬಿ ಯಂತ್ರ ಬಳಸಲಾಗಿತ್ತು. ದೇವಸ್ಥಾನದ ಒಳಾಂಗಣವನ್ನು ಮಾತ್ರ ವಿಸ್ತರಿಸಲಾಗಿದೆ. ದೇವಸ್ಥಾನ ಈಗಲೂ ಅದೇ ಜಾಗದಲ್ಲಿದೆ. ದೇವಸ್ಥಾನದ ಎದುರಿದ್ದ ಮಸೀದಿ ಕೂಡಾ ಅಲ್ಲಿಯೇ ಇದೆ ಎಂದು ವಿಜಯವಾಡ ಪೊಲೀಸರು ದೃಢಪಡಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು