ಶನಿವಾರ, ಜನವರಿ 23, 2021
18 °C
ಫ್ಯಾಕ್ಟ್‌ಚೆಕ್‌

ರಹಸ್ಯವಾಗಿ ಮದುವೆಯಾಗಿದ್ದಾರಾ ರಾಹುಲ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಹಸ್ಯವಾಗಿ ಮದುವೆಯಾಗಿದ್ದಾರಾ? ಹೌದು ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಅವರ ಮದುವೆ ವಿಷಯವನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ ಎಂದು ಉಲ್ಲೇಖಿಸಿ ಟ್ವಿಟರ್ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದು ಅವರು ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಪತ್ನಿ ಕೊಲಂಬಿಯಾದವರು. ಮಗ 14 ವರ್ಷದ ನಿಯಾಕ್, ಮಗಳು 10 ವರ್ಷದ ಮೈನಕ್ ಎಂಬುದಾಗಿ ಉಲ್ಲೇಖಿಸಲಾಗಿದೆ. ಮದುವೆಯಾಗಿದ್ದರೂ ತಾವು ಅವಿವಾಹಿತ ಎಂದು ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಆರೋಪದ ಬಗ್ಗೆ ಲಾಜಿಕಲ್ ಇಂಡಿಯನ್ಸ್ ವೆಬ್‌ಸೈಟ್ ಪರಿಶೀಲನೆ ನಡೆಸಿದೆ. ಈ ಚಿತ್ರದಲ್ಲಿ ರಾಹುಲ್ ಜೊತೆಗಿರುವವರು ಸ್ಪ್ಯಾನಿಷ್–ಅಮೆರಿಕನ್ ನಟಿ ನಟಾಲಿಯಾ ರಮೋಸ್. ರಾಹುಲ್ ಅವರನ್ನು ಭೇಟಿಯಾದಾಗ ತೆಗೆದುಕೊಂಡ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಹಂಚಿಕೊಂಡಿದ್ದರು. ವಿಕಿಲೀಕ್ಸ್‌ನಲ್ಲಿ ಹುಡುಕಾಡಿದಾಗ, ರಾಹುಲ್ ಮೇಲಿನ ಆರೋಪಗಳ ಬಗ್ಗೆ ಪುಷ್ಠೀಕರಿಸುವ ಯಾವುದೇ ದಾಖಲೆಗಳು ಬಿಡುಗಡೆಯಾಗಿಲ್ಲ ಎಂದು ವೆಬ್‌ಸೈಟ್ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು