ಸೋಮವಾರ, ಜುಲೈ 4, 2022
22 °C

Fact Check: ಭಾರತದಲ್ಲಿ ಹಿಂಸಾಚಾರ ನಡೆಸುವುದಾಗಿ ಬೆದರಿಕೆ ಬಂದಿರುವುದು ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಹಿಂಸಾಚಾರ ನಡೆಸುವುದಾಗಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಪಾಕಿಸ್ತಾನಿ ತಾಲಿಬಾನ್ ಉಗ್ರರು ಇತ್ತೀಚೆಗೆ ಭಾರತಕ್ಕೆ ಒಡ್ಡಿದ್ದ ಬೆದರಿಕೆ ಇದು ಎಂಬುದಾಗಿ ಚರ್ಚೆಯಾಗುತ್ತಿದೆ. ಪಾಕ್‌ ಸಂಜಾತ ಕೆನಡಾದ ಲೇಖಕ ತಾರಿಕ್‌ ಫತೇಹ್ ಅವರು ಈ ವಿಡಿಯೊ ಹಂಚಿಕೊಂಡಿದ್ದು 1.3 ಲಕ್ಷ ಜನರು ನೋಡಿದ್ದಾರೆ. ಬಿಜೆಪಿ ಮುಖಂಡ ರವೀಂದ್ರ ಗುಪ್ತಾ ಸೇರಿದಂತೆ ಹಲವರು ಷೇರ್ ಮಾಡಿದ್ದಾರೆ.

ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಈ ವಿಡಿಯೊವನ್ನು 2019ರ ಫೆಬ್ರುವರಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಭಾರತಕ್ಕೆ ತಾಲಿಬಾನ್ ಬೆದರಿಕೆ ಒಡ್ಡಿದೆ ಎಂಬ ವಾದವನ್ನು ಇದು ಸುಳ್ಳಾಗಿಸಿದೆ. ಪಾಕಿಸ್ತಾನದ ಫೇಸ್‌ಬುಕ್ ಪುಟದಲ್ಲಿ ವಿಡಿಯೊ ಅಪ್‌ಲೋಡ್ ಆಗಿದೆ. ಬುಡಕಟ್ಟು ನಾಯಕ ಮಲಿಕ್ ಸೈಯದ್ ಕಬೀರ್ ಅಫ್ರಿದಿ ಎಂಬಾತನ ಭಾಷಣ ಇದರಲ್ಲಿದೆ. ಭಾರತವನ್ನು ವಶಪಡಿಸಿಕೊಳ್ಳುವುದಾಗಿ ಎರಡು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯು ಇತ್ತೀಚಿನದ್ದು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು