ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ಪೆಟ್ರೋಲ್, ಡೀಸೆಲ್‌ನ ಮೇಲೆ ವಿಧಿಸಲಾಗುವ ತೆರಿಗೆ ಮಾಹಿತಿ ನಿಜವೇ?

Last Updated 21 ಫೆಬ್ರುವರಿ 2021, 19:44 IST
ಅಕ್ಷರ ಗಾತ್ರ

ಪೆಟ್ರೋಲ್ ಮತ್ತು ಡೀಸೆಲ್‌ನ ಮೇಲೆ ವಿಧಿಸಲಾಗುವ ತೆರಿಗೆಯಲ್ಲಿ ಹೆಚ್ಚು ಲಾಭವಾಗುವುದು ರಾಜ್ಯ ಸರ್ಕಾರಗಳಿಗೆ. ಕೇಂದ್ರ ಸರ್ಕಾರವು ಅತ್ಯಂತ ಕಡಿಮೆ ತೆರಿಗೆ ವಿಧಿಸುತ್ತಿದೆ. ಇದು ಜನರಿಗೆ ಅರ್ಥವಾಗಬೇಕು. ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಬೆಲೆಯನ್ನು ಈ ರೀತಿ ಪ್ರದರ್ಶಿಸಬೇಕು. ‘ಪೆಟ್ರೋಲ್ ಮೂಲ ಬೆಲೆ ₹30.91, ಕೇಂದ್ರ ತೆರಿಗೆ ₹16.50, ರಾಜ್ಯ ತೆರಿಗೆ ₹ 38.55, ಡೀಲರ್ ಕಮಿಷನ್ ₹6.50, ಒಟ್ಟು ₹ 92.05’ ಎಂದು ಇಂಧನದ ಬೆಲೆಯನ್ನು ಪ್ರದರ್ಶಿಸಬೇಕು. ಆಗ ಬೆಲೆ ಏರಿಕೆಗೆ ಹೊಣೆ ಯಾರು ಎಂಬುದು ಜನರಿಗೆ ಗೊತ್ತಾಗುತ್ತದೆ ಎಂಬ ಒಕ್ಕಣೆ ಇರುವ ಪೋಸ್ಟ್‌ಗಳು ಟ್ವಿಟರ್‌‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಬಿಜೆಪಿಯ ಹಲವು ಕಾರ್ಯಕರ್ತರು ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ ಸಂಪೂರ್ಣ ತಪ್ಪು ಮಾಹಿತಿಯಿಂದ ಕೂಡಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ನ ಮೂಲ ಬೆಲೆ ₹24-30ರವರೆಗೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆಗುವ ಏರಿಳಿತದ ಆಧಾರದ ಮೇಲೆ ಈ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಈ ಬೆಲೆಯ ಮೇಲೆ ತೈಲ ಕಂಪನಿಗಳು ಸಂಸ್ಕರಣ ಶುಲ್ಕವನ್ನು ವಿಧಿಸುತ್ತಿವೆ. ಈ ಬೆಲೆಯ ಮೇಲೆ ಕೇಂದ್ರ ಸರ್ಕಾರವು ವಿಧಿಸುತ್ತಿರುವ ತೆರಿಗೆಯ ಮೊತ್ತ ₹31.98ರಷ್ಟು ಇದೆ. ದೇಶದ ಯಾವ ರಾಜ್ಯವೂ ಕೇಂದ್ರ ಸರ್ಕಾರ ವಿಧಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಮೊತ್ತದ ತೆರಿಗೆ ವಿಧಿಸುತ್ತಿಲ್ಲ. ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ರಾಜ್ಯ ಸರ್ಕಾರವು ವಿಧಿಸುವ ತೆರಿಗೆಯ ಮೊತ್ತವು ಕ್ರಮವಾಗಿ ₹23.50 ಮತ್ತು ₹16.03ರ ಆಸುಪಾಸಿನಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT