ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

fact check: ಯೋಗಿ ಆಡಳಿತ ದಂಗೆ ಮುಕ್ತವೇ?

Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ತಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಳೆದವಾರ ಬಿಜ್ನೋರ್‌ನಲ್ಲಿ ಹೇಳಿದ್ದರು. ‘ಉತ್ತರ ಪ್ರದೇಶವು ಗಲಭೆಗಳಿಗೆ ಹೆಸರಾಗಿತ್ತು. ಆದರೆ, ಎನ್‌ಸಿಆರ್‌ಬಿ ವರದಿ ಪ್ರಕಾರ, ಐದು ವರ್ಷಗಳಲ್ಲಿ ಒಂದೂ ಗಲಭೆ ಪ್ರಕರಣ ವರದಿಯಾಗಿಲ್ಲ. ಕೋಮು ಗಲಭೆಗಳೂ ನಡೆದಿಲ್ಲ. ರಾಜ್ಯವು ದಂಗೆ ಮುಕ್ತವಾಗಿದೆ’ ಎಂದು ಅವರು ಹೇಳಿದ್ದರು.

ಎನ್‌ಸಿಆರ್‌ಬಿ ವಾರ್ಷಿಕ ವರದಿಗಳ ಪ್ರಕಾರ, 2017ರಿಂದ 2021ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ35,040 ಗಲಭೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 35 ಕೋಮುಗಲಭೆ ಪ್ರಕರಣಗಳು ಸೇರಿವೆ. ಆದರೆ, 2017ಕ್ಕೆ ಹೋಲಿಸಿದರೆ, 2021ರಲ್ಲಿ ಗಲಭೆ ಪ್ರಕರಣಗಳ ಪ್ರಮಾಣ ಶೇ 41ರಷ್ಟು ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಯೋಗಿ ಅವರು ಒಂದೂ ಪ್ರಕರಣ ವರದಿಯಾಗಿಲ್ಲ ಎಂಬುದು ತಪ್ಪು ಮಾಹಿತಿ ಎಂದು ‘ಸ್ಕ್ರಾಲ್‌’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT