ಶುಕ್ರವಾರ, ಡಿಸೆಂಬರ್ 3, 2021
24 °C

ಫ್ಯಾಕ್ಟ್‌ಚೆಕ್ | ಕಾಶಿ ವಿಶ್ವನಾಥ ಮಂದಿರ ಪ್ರಜ್ವಲಿಸುತ್ತಿರುವ ಚಿತ್ರ ವೈರಲ್

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಕಾಶಿಯಲ್ಲಿರುವ ವಿಶ್ವನಾಥ ಮಂದಿರದ ಜೀರ್ಣೋದ್ಧಾರ ನಡೆಯುತ್ತಿದ್ದು, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ನವೀಕೃತ ದೇವಸ್ಥಾನವನ್ನು ಉದ್ಘಾಟಿಸುವ ಕಾರ್ಯಕ್ರಮವಿದೆ. ಭೂಸ್ವಾಧೀನ ಪೂರ್ಣಗೊಂಡಿದ್ದು, ಮಂದಿರದ ಆವರಣದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ದೇವಸ್ಥಾನದ ಆವರಣವು ದೀಪಗಳಿಂದ ಪ್ರಜ್ವಲಿಸುತ್ತಿರುವ ಚಿತ್ರವೊಂದು ಭಾರಿ ಸುದ್ದಿಯಲ್ಲಿದೆ. ನವೀಕರಣಗೊಂಡ ನಂತರದ ಮೊದಲ ಚಿತ್ರವಿದು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ.

ವೈರಲ್ ಆಗಿರುವ ಈ ಚಿತ್ರವು ಸೋಮನಾಥ ಮಂದಿರದ ಚಿತ್ರವೇ ಹೊರತು ಕಾಶಿ ದೇವಸ್ಥಾನದ್ದಲ್ಲ ಎಂದು ಇಂಡಿಯಾಟುಡೇ ವರದಿ ಮಾಡಿದೆ. 2021ರ ಮಾರ್ಚ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಲಾಗಿರುವ ವಿಡಿಯೊದಿಂದ ಈ ಚಿತ್ರವನ್ನು ಗ್ರ್ಯಾಬ್ ಮಾಡಲಾಗಿದೆ. ಇದು ಸೋಮನಾಥ ಮಂದಿರದ ದೃಶ್ಯ ಎಂದು ದೇವಸ್ಥಾನದ ವಕ್ತಾರ ಧೃವ್ ಜೋಷಿ ಸ್ಪಷ್ಟಪಡಿಸಿದ್ದಾರೆ. ಕಾಶಿ ದೇವಸ್ಥಾನ ನವೀಕರಣ ನಡೆಯುತ್ತಿದ್ದು, ಮೂಲ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿಲ್ಲ ಎಂದು ಕಾಶಿ ಮಂದಿರ ಟ್ರಸ್ಟ್‌ನ ಸಿಇಒ ಸುನಿಲ್ ವರ್ಮಾ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು