ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: 2021ಕ್ಕಿಂತ 2014ರಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ನಿಜವೇ?

Last Updated 4 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬ ಕೂಗು ದೇಶದಾದ್ಯಂತ ಎದ್ದಿದೆ. ಆದರೆ 2014ರ ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ,2021ರಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬೆಲೆ ಕಡಿಮೆಯಿದೆ ಎಂದು ಹೇಳುವಕೆಲವು ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. 2014ರಲ್ಲಿ ₹210 ಇದ್ದ ತೊಗರಿಬೇಳೆ ಬೆಲೆ 2021ರಲ್ಲಿ ₹91ಕ್ಕೆ ಇಳಿಕೆಯಾಗಿದೆ ಎಂಬ ಸಂದೇಶವೂ ಅವುಗಳಲ್ಲಿ ಒಂದು.

ದೇಶದಾದ್ಯಂತ 22 ಅಗತ್ಯ ಆಹಾರ ಪದಾರ್ಥಗಳ ಚಿಲ್ಲರೆ ಮತ್ತು ಸಗಟು ಬೆಲೆಗಳನ್ನು ‘ಬೆಲೆ ನಿಗಾ ವಿಭಾಗ’ (ಪಿಎಂಡಿ) ದಾಖಲಿಸುತ್ತದೆ. ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಯು ಪಿಎಂಡಿ 2014 ಹಾಗೂ 2021ರಲ್ಲಿ ದಾಖಲಿಸಿದ ಬೆಲೆಗಳನ್ನು ಹೋಲಿಕೆ ಮಾಡಿ ನೋಡಿದೆ. ಅದರ ಪ್ರಕಾರ, 2014ಕ್ಕಿಂತ 2021ರಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ತೊಗರಿ ಬೇಳೆ ದರ 2014ರಲ್ಲಿ ₹75.83 ಇದ್ದರೆ, ಅದು 2021ರಲ್ಲಿ ₹104.06 ಆಗಿದೆ ಎಂದು ತಿಳಿಸಿದೆ. ಹೋಲಿಕೆ ಮಾಡಲಾದ ಪಟ್ಟಿಯನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT